Tragedy of Marriage: 20 ದಿನಗಳ ಹಿಂದಷ್ಟೇ ಹೊಸ ಸಂಸಾರ, ಅಷ್ಟರಲ್ಲೇ ನವವಧು ಸಾವು; ನಮ್ಮ ಅಳಿಯ ಒಳ್ಳೆಯವ್ನು ಎಂದ ಯುವತಿ ಪೋಷಕರು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೃತ ಕೃಷ್ಣವೇಣಿ


Last Updated:

ಆರ್ ಎಚ್ ಕಾಲೋನಿಯಲ್ಲಿ 40 ದಿನಗಳ ಹಿಂದೆ ಮದುವೆಯಾದ ಕೃಷ್ಣವೇಣಿ ಆತ್ಮಹತ್ಯೆ, ಫೋನ್ ಡೇಟಾ ಪರಿಶೀಲನೆ ಸೇರಿದಂತೆ ಪೊಲೀಸರು ತನಿಖೆ, ಪತಿ ಮುರಳಿ ಮೇಲೆ ಕುಟುಂಬಕ್ಕೆ ಅನುಮಾನ ಇಲ್ಲ ಎಂದಿದ್ದಾರೆ.

ಮೃತ ಕೃಷ್ಣವೇಣಿ
ಮೃತ ಕೃಷ್ಣವೇಣಿ

ಕಾರಣಗಳು ಏನಾದರೂ ಸರಿ, ಮದುವೆಗೆ (Newly Married) ಮುನ್ನ ಅಥವಾ ಮದುವೆಯಾದ ಕೆಲವೇ ದಿನಗಳಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಇಂತಹದ್ದೇ ಘಟನೆಯೊಂದು ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ (Visakhapatnam) ವರದಿಯಾಗಿದೆ. ಜಸ್ಟ್ 40 ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವತಿ, ಗಂಡನ ಮನೆಯಲ್ಲಿ (Husband) ಸಾವಿಗೆ ಶರಣಾಗಿರುವ ಘಟನೆ ನಡೆದಿದೆ. ಪೊಲೀಸರು ನವವಧುವಿನ ಮೊಬೈಲ್ ಮಾಹಿತಿಯನ್ನು (Mobile) ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಅಸಲಿಗೆ ಆಗಿದ್ದೇನು ಅಂತ ನೋಡುವುದಾದರೆ..

ವಿಶಾಖಪಟ್ಟಣದ ಪಿಎಂ ಪಾಲೆಂ ಆರ್​​​ಹೆಚ್ ಕಾಲೋನಿಯಲ್ಲಿ ಬುಧವಾರ ರಾತ್ರಿ ನವವಧು ಕೃಷ್ಣವೇಣಿ ಸಾವಿಗೆ ಶರಣಾಗಿದ್ದರು. ವಿಜಯನಗರ ಜಿಲ್ಲೆಯ ರಾಮಭದ್ರಪುರಂ ಜಿಲ್ಲೆಯ ನಿವಾಸಿಯಾಗಿದ್ದ ಕೃಷ್ಣವೇಣಿ ಅವರನ್ನು, ಕುಟುಂಬದ ಹತ್ತಿರದ ಸಂಬಂಧಿಯಾಗಿದ್ದ ಮುರಳಿ ಎಂಬಾತನೊಂದಿಗೆ ಕುಟುಂಬಸ್ಥರು ಮೇ 13 ರಂದು ಮದುವೆ ಮಾಡಿಸಿಕೊಟ್ಟಿದ್ದರು. 20 ದಿನಗಳ ಹಿಂದಷ್ಟೇ ನವದಂಪತಿ ಪಿಎಂ ಪಾಲೆಂ ಆರ್​​​ಎಚ್ ಕಾಲೋನಿಯ ಮನೆಯೊಂದರಲ್ಲಿ ಹೊಸದಾಗಿ ಸಂಸಾರ ಶುರು ಮಾಡಿದ್ದರು.

ಮದುವೆಯಾದ ಸಮಯದಿಂದಲೂ ನವದಂಪತಿ ಚೆನ್ನಾಗಿದ್ದರಂತೆ. ಆದರೆ ಮದುವೆಯಾದ 40 ದಿನಗಳ ಬಳಿಕ ಕೃಷ್ಣವೇಣಿ ಆತ್ಮಹತ್ಯೆಗೆ ಶರಣಾಗಿರೋದು ಕುಟುಂಬಸ್ಥರಿಗೆ ಶಾಕ್ ನೀಡಿದೆ. ಗೋಪಾಲಪಟ್ಟಣದ ಅಂಗಡಿಯೊಂದರಲ್ಲಿ ಕೃಷ್ಣವೇಣಿ ಕೆಲಸ ಮಾಡುತ್ತಿದ್ದು, ಅಲ್ಲಿ ಏನಾದರೂ ಸಮಸ್ಯೆ ಆಯ್ತಾ? ಆತ್ಮಹತ್ಯೆಗೆ ಕಾರಣವೇನು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು, ಯುವತಿ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಗಳ ಮನೆಗೆ ಹೋದ ಸಂದರ್ಭದಲ್ಲಿ ಎಲ್ಲರೂ ಸಂತೋಷದಿಂದ ಇದ್ದರು. ಅಳಿಯ ಮುರಳಿ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ಹೇಳಿದ್ದಾರೆ. ಇದರೊಂದಿಗೆ ಆತ್ಮಹತ್ಯೆಗೆ ನಿಖರ ಕಾರಣವೇನು ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾವಿಗೆ ಶರಣಾದ ಕೃಷ್ಣವೇಣಿ ಕೊನೆಯ ಬಾರಿಗೆ ಯಾರಿಗೆ ಕಾಲ್ ಮಾಡಿದ್ದರು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಇನ್ನು ಆಕೆಯ ಬಳಿ ಇದ್ದ ಐಫೋನ್ ಅನ್ನು ವಶಕ್ಕೆ ಪಡೆದುಕೊಂಡು ಡೇಟಾ ಕಲೆ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಇದನ್ನೂ ಓದಿ: Solar Power: ಕರೆಂಟ್​​ ಬಿಲ್​​ಗೆ ಹೇಳಿ ಗುಡ್​ ಬೈ, ಜಸ್ಟ್​ 50 ಸಾವಿರಕ್ಕೆ ಸೋಲಾರ್ ಸಿಸ್ಟಮ್, 15 ವರ್ಷ ಉಚಿತ ವಿದ್ಯುತ್!

ಪತಿ ಮುರಳಿ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಬುಧವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದ ಪತಿ ಸಂಜೆ ಮನೆಗೆ ವಾಪಸ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಕೃಷ್ಣವೇಣಿ ಸಾವನ್ನಪ್ಪಿದ್ದು, ಕೂಡಲೇ ಮುರಳಿ ಪೊಲೀಸರಿಗೆ ಸ್ವತಃ ಮಾಹಿತಿ ನೀಡಿದ್ದನಂತೆ. ಕೂಡಲೇ ಸ್ಥಳಕ್ಕೆ ಬಂದ ಎಸಿಪಿ ಅಪ್ಪಲರಾಜು, ಸಿಐ ಬಾಲಕೃಷ್ಣ ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed