Toxic Movie: ಟಾಕ್ಸಿಕ್ ರಿಲೀಸ್‌ಗೆ 1 ತಿಂಗಳು ಬಾಕಿ; ಅದಕ್ಕೂ ಮೊದಲೇ ಯಶ್ ಹೊಸ ಲುಕ್ ಔಟ್! | | ACTPnews

ಯಶ್ 'ಟಾಕ್ಸಿಕ್' ಹೊಸ ಲುಕ್ ಔಟ್!


Last Updated:

ಟಾಕ್ಸಿಕ್ ಚಿತ್ರದ ರಿಲೀಸ್‌ಗೆ ಇನ್ನು ಒಂದು ತಿಂಗಳ ಮಾತ್ರ ಬಾಕಿ ಇದೆ. ಮುಂದಿನ ತಿಂಗಳು ಈ ಚಿತ್ರ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. “Begins with a Bang” ಅನ್ನುವ ಹಾಗೆ ಈ ಚಿತ್ರದ ಹೊಸ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಯಶ್ 'ಟಾಕ್ಸಿಕ್' ಹೊಸ ಲುಕ್ ಔಟ್!
ಯಶ್ ‘ಟಾಕ್ಸಿಕ್’ ಹೊಸ ಲುಕ್ ಔಟ್!

ಟಾಕ್ಸಿಕ್ ಚಿತ್ರ (Toxic Movie) ರಿಲೀಸ್ ಆಗುವುದಕ್ಕೆ ಬರೋಬ್ಬರಿ ಒಂದು ತಿಂಗಳು ಉಳಿದಿದೆ. ಜುಲೈ-26 ರಿಂದ ಆಗಸ್ಟ್-26ರ ಲೆಕ್ಕ ತೆಗೆದುಕೊಂಡರೆ, ಚಿತ್ರದ ರಿಲೀಸ್‌ಗೆ (Movie Release) ಇನ್ನು ಒಂದು ತಿಂಗಳೆ ಉಳಿದಿದೆ. ‘Begins with a Bang’ ಅನ್ನುವ ಹಾಗೆ ಈ ಚಿತ್ರದ ಹೊಚ್ಚ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ಭರ್ಜರಿ ಆಗಿಯೇ ಕಾಣಿಸುತ್ತಿದ್ದಾರೆ. ರಕ್ತಸಿಕ್ತ ಕೈಗಳಲ್ಲಿ ಸಿಗರೇಟ್ ಕೂಡ ಇದೆ. ಈ ಲುಕ್‌ (Look) ಸೇರಿದಂತೆ ಚಿತ್ರದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಟಾಕ್ಸಿಕ್ ಹೊಸ ಲುಕ್

ಟಾಕ್ಸಿಕ್ ಚಿತ್ರದ ಮತ್ತೊಂದು ಲುಕ್ ರಿವೀಲ್ ಆಗಿದೆ. ಇಲ್ಲಿವರೆಗೂ ಇರೋ ಲುಕ್ ಒಂದು ಲೆಕ್ಕವೇ ಬಿಡಿ. ಆದರೆ, ಇದು ಬೇರೆ ಇದೆ. ಇದನ್ನ ನೋಡ್ತಾ ಹೋದ್ರೆ ಸಖತ್ ಸ್ಟೈಲಿಶ್ ಆಗಿದ್ದಾರೆ.
yash toxic movie new look poster release

ವಿಶ್ವದಾದ್ಯಂತ ರಿಲೀಸ್‌ಗೆ 1 ತಿಂಗಳು ಬಾಕಿ

ಆದರೆ, ಕೈಯಗಳಲ್ಲಿ ರಕ್ತಮೆತ್ತಿಕೊಂಡಿದೆ. ಆಗ ತಾನೆ ಒಂದು ಕೊಲೆ ಮಾಡಿದಂತೆನೂ ಇದೆ. ಕಾರಣ, ರಕ್ತ ಸುರಿಯುತ್ತಲೇ ಇದೆ. ಇದರ ನಡುವೆ ಕೈಯಲ್ಲಿ ಸಿಗರೇಟ್ ಹಿಡಿದು ಸೇದುವ ಶೈಲಿ ಗಮನ ಸೆಳೆಯುತ್ತದೆ.

Begins with a Bang

ಟಾಕ್ಸಿಕ್ Begins with a Bang ಅನ್ನುವ ಹಾಗೆ ಈ ಪೋಸ್ಟರ್ ಹೊರ ಬಂದಿದೆ. ಈ ಒಂದು ಪೋಸ್ಟರ್ ಜುಲೈ-26 ರಂದು ರಿಲೀಸ್ ಆಗಿದೆ. ಇಲ್ಲಿಂದ ಟಾಕ್ಸಿಕ್ ರಿಲೀಸ್‌ಗೆ ಬರೋಬ್ಬರಿ ಒಂದು ತಿಂಗಳು ಉಳಿದಿದೆ ನೋಡಿ.

ಬಹು ಭಾಷೆಯಲ್ಲಿ ರಿಲೀಸ್

ಈ ಟಾಕ್ಸಿಕ್ ಚಿತ್ರ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಆಯಾ ಭಾಷೆಯಲ್ಲಿ ಇದು ಡಬ್ ಆಗುತ್ತದೆ. ಡಬ್ ಆಗಿಯೇ ಆಗಸ್ಟ್-26 ರಂದು ಇದು ತೆರೆಗೂ ಬರ್ತಿದೆ.

ಗೀತು ಮೋಹನ್‌ದಾಸ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಗೀತು ಹಾಗೂ ಯಶ್ ಈ ಚಿತ್ರಕ್ಕೆ ಕತೆ ಮಾಡಿದ್ದಾರೆ. ಬಹು ಕೋಟಿ ವೆಚ್ಚದಲ್ಲಿ ಇದು ತಯಾರಾಗಿದೆ. ಯಶ್ ಹಾಗೂ ಕೆವಿಎನ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.

yash toxic movie new look poster release

ಆಗಸ್ಟ್-26 ರಂದು ರಿಲೀಸ್
ರವಿ ಬಸ್ರೂರು ಸಂಗೀತ

ಟಾಕ್ಸಿಕ್ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಆದರೆ, ಈ ಚಿತ್ರದ ಕೆಲವು ಹಾಡುಗಳನ್ನ ನವ ಸಂಗೀತ ನಿರ್ದೇಶಕರು ಕಂಪೋಸ್ ಮಾಡಿದ್ದಾರೆ.

ಈ ಚಿತ್ರದಲ್ಲಿ ಹುಮಾ ಖುರೇಷಿ, ತಾರಾ ಸುತಾರಿಯಾ, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ಇನ್ನು ಹಲವು ಕಲಾವಿದೆಯರು ಅಭಿನಯಿಸಿದ್ದಾರೆ. ಇವರ ಈ ಚಿತ್ರದ ನಿರೀಕ್ಷೆ ದೊಡ್ಡಮಟ್ಟದಲ್ಲಿಯೇ ಇದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports