Dam Water Level: ಕರ್ನಾಟಕದ ಜಲಾಶಯಗಳ ಅಪ್‍ಡೇಟ್, ಯಾವ ಡ್ಯಾಮ್‍ನಲ್ಲಿ ಎಷ್ಟಿದೆ ನೀರು? ಸಂಪೂರ್ಣ ಮಾಹಿತಿ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಜಲಾಶಯಗಳ ನೀರಿನ ಮಟ್ಟ


Last Updated:

ಕರ್ನಾಟಕದಲ್ಲಿ ಮುಂಗಾರು ಮಳೆ: ಆಲಮಟ್ಟಿ, ಹಾರಂಗಿ ಜಲಾಶಯಗಳು ಭರ್ತಿ ಹಂತಕ್ಕೆ. ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ.

ಜಲಾಶಯಗಳ ನೀರಿನ ಮಟ್ಟ
ಜಲಾಶಯಗಳ ನೀರಿನ ಮಟ್ಟ

ಕರ್ನಾಟಕದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಮುಂದುವರಿದಿದ್ದು, ರಾಜ್ಯದ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ.  ಪ್ರಸ್ತುತ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಪ್ರಮುಖ ಜಲಾಶಯಗಳಾದ (Reservoirs) ಆಲಮಟ್ಟಿ ಹಾಗೂ ಹಾರಂಗಿ (Harangi) ಅಣೆಕಟ್ಟುಗಳು ಭರ್ತಿಯಾಗುವ ಹಂತ ತಲುಪಿದ್ದು, ಶೇಕಡಾವಾರು ನೀರಿನ ಪ್ರಮಾಣ (Water Level) ಗಣನೀಯವಾಗಿ ಏರಿಕೆಯಾಗಿದೆ. ಕಾವೇರಿ (Cauvery) ಮತ್ತು ಕೃಷ್ಣಾ (Krishna) ಜಲಾನಯನ ಪ್ರದೇಶದ ಪ್ರಸ್ತುತ ನೀರಿನ ಮಟ್ಟದ ಸಂಪೂರ್ಣ ವರದಿ ಇಲ್ಲಿದೆ.

ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳು

ಹಾರಂಗಿ ಅಣೆಕಟ್ಟು: ಒಟ್ಟು 8.500 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 93.95% (7.986 ಟಿಎಂಸಿ) ತುಂಬಿದೆ. ಒಳಹರಿವು 4,914 ಕ್ಯೂಸೆಕ್‍ಗಳಷ್ಟಿದೆ.

ಹೇಮಾವತಿ ಅಣೆಕಟ್ಟು: ಪ್ರಸ್ತುತ 62.35% (23.136 ಟಿಎಂಸಿ) ಭರ್ತಿಯಾಗಿದೆ.

ಕೆ.ಆರ್.ಎಸ್ (ಕೃಷ್ಣರಾಜ ಸಾಗರ): 49.452 ಟಿಎಂಸಿ ಸಾಮರ್ಥ್ಯದ ಡ್ಯಾಮ್‍ನಲ್ಲಿ ಸದ್ಯ 34.48% (17.051 ಟಿಎಂಸಿ) ನೀರಿದೆ.

ಕಬಿನಿ ಅಣೆಕಟ್ಟು: ಪ್ರಸ್ತುತ 69.75% ತುಂಬಿಕೊಂಡಿದೆ.

ಕೃಷ್ಣ ಹಾಗೂ ಇತರ ಜಲಾಶಯಗಳ ಸ್ಥಿತಿ

ಆಲಮಟ್ಟಿ ಅಣೆಕಟ್ಟು: ಗರಿಷ್ಠ ಮಟ್ಟದತ್ತ ಮುಖ ಮಾಡಿರುವ ಆಲಮಟ್ಟಿ ಡ್ಯಾಮ್‍ಗೆ ಭಾರಿ ಒಳಹರಿವು (88,228 ಕ್ಯೂಸೆಕ್) ಹರಿದುಬರುತ್ತಿದ್ದು, ಪ್ರಸ್ತುತ 87.77% (108.030 ಟಿಎಂಸಿ) ಭರ್ತಿಯಾಗಿದೆ.

ನಾರಾಯಣಪುರ ಅಣೆಕಟ್ಟು: 93.74% ರಷ್ಟು ತುಂಬಿದ್ದು, ಸತತವಾಗಿ ನೀರನ್ನು ಹೊರಬಿಡಲಾಗುತ್ತಿದೆ.

ತುಂಗಭದ್ರಾ ಅಣೆಕಟ್ಟು: ಪ್ರಸ್ತುತ 28.72% (30.385 ಟಿಎಂಸಿ) ನೀರು ಸಂಗ್ರಹವಾಗಿದೆ.

ಭದ್ರಾ ಅಣೆಕಟ್ಟು: ಶೇ. 50.30% ರಷ್ಟು ಭರ್ತಿಯಾಗಿದೆ.

ಮಳೆಯ ಅಬ್ಬರ ಮುಂದುವರೆದಿರುವುದರಿಂದ ಜಲಾಶಯಗಳಿಗೆ ಭಾರೀ ಪ್ರಮಾಣದ ಒಳಹರಿವು ಹರಿದುಬರುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ನೀರು ಬಿಡುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ಕೆಲಕಾಲ ಮಳೆ ಕೈಕೊಟ್ಟಿದ್ದರಿಂದ ಕಂಗಾಲಾಗಿದ್ದ ಅನ್ನದಾತರಿಗೆ ಈಗಿನ ಜಲಾಶಯಗಳ ನೀರಿನ ಒಳಹರಿವು ಸಮಾಧಾನ ತಂದಿದೆ. ಮುಂಬರುವ ದಿನಗಳಲ್ಲಿ ಮಳೆಯ ಅಬ್ಬರ ಮುಂದುವರಿದರೆ ಬಹುತೇಕ ಜಲಾಶಯಗಳು ಭರ್ತಿಯಾಗುವ ಸಾಧ್ಯತೆಯಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports