Last Updated:
ಟಾಕ್ಸಿಕ್ ಚಿತ್ರದ ರಿಲೀಸ್ ಹೊಸ ಡೇಟ್ ಯಾವಾಗ? ಈ ಚಿತ್ರ ರೀ-ಶೂಟ್ ಆಗ್ತಿರೋದು ನಿಜವೇ? ಈ ಎಲ್ಲ ವೈರಲ್ ನ್ಯೂಸ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ರಿಲೀಸ್ ಮುಂದೆ ಹೋಗಿದ್ದು ಯಾಕೆ? ಮತ್ತೆ ಮತ್ತೆ ಹೀಗೆ ಹೋಗಲು ಕಾರಣ ಏನು? ಈ ಚಿತ್ರವನ್ನ ರೀ-ಶೂಟ್ (Movie Reshoot) ಮಾಡ್ತಿರೋದು ನಿಜವೇ? ಈ ಎಲ್ಲ ಪ್ರಶ್ನೆಗಳು ಕೇಳಿ ಬರ್ತಾನೇ ಇವೆ. ಆದರೆ, ಈ ಒಂದು ಚಿತ್ರದ ಈ ಎಲ್ಲ ಹರಿದಾಡ್ತಿರೋ ಸುದ್ದಿಗಳು ಸುಳ್ಳು ಅನ್ನೋದು ಇದೀಗ ಗೊತ್ತಾಗಿದೆ. ಸಿನಿಮಾ ರೀ-ಶೂಟ್ ಮಾಡೋದೇನೂ ಇಲ್ಲ. ಮಧ್ಯ ಪ್ರಾಚ್ಯದಲ್ಲಿ ಥಿಯೇಟರ್‌ಗಳು (Theaters) ಮುಚ್ಚಿವೆ. ಚಿತ್ರ ರಿಲೀಸ್ ಆದ್ಮೇಲೆ ಅರ್ಥಿಕ ನಷ್ಟ ತಡೆಯೋಕೆ ಚಿತ್ರ ರಿಲೀಸ್ (Movie Release) ಮುಂದೆ ಹೋಗಿದೆ ಅನ್ನುವ ಮಾತು ಇದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಟಾಕ್ಸಿಕ್ ರೀ-ಶೂಟ್ ಏನು ಇಲ್ಲ…
ಅದು ಬಿಟ್ಟರೆ, ಈ ಚಿತ್ರ ರೀ-ಶೂಟ್ ಏನೂ ಇಲ್ಲ ಅನ್ನುವ ಮಾಹಿತಿನೇ ಇದೆ. ಇದರ ಹೊರತಾಗಿ ಈ ಚಿತ್ರದ ರಿಲೀಸ್ ಡೇಟ್ ಕೂಡ ಆದಷ್ಟು ಬೇಗ ಅನೌನ್ಸ್ ಆಗುತ್ತದೆ ಅನ್ನುವ ನ್ಯೂಸ್ ಕೂಡ ಇದೆ.
ಕನ್ನಡದ ಈ ಟಾಕ್ಸಿಕ್ ಚಿತ್ರ ಅಮೆರಿಕಾ ಮತ್ತು ಯುರೋಪ್ ಹಾಗೂ ಜಗತಿನಾದ್ಯಂತ ಈ ಚಿತ್ರ ಐಮ್ಯಾಕ್ಸ್ ಟೆಕ್ನಾಲಜಿಯಲ್ಲಿಯೇ ಬಿಡುಗಡೆ ಆಗುತ್ತಿದೆ.
ಈ ಚಿತ್ರ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಥಿಯೇಟರ್ ಅಲ್ಲಿ ಇದು ಇಂಗ್ಲಿಷ್ ಅಲ್ಲಿ ರಿಲೀಸ್ ಆಗುತ್ತಿದೆ ಅನ್ನುವ ಸುದ್ದಿನೂ ಇದೆ.
ಜೂನ್-8 ರಂದು ಈ ಚಿತ್ರದ ಒಂದು ಗ್ಲಿಂಪ್ಸ್ ವಿಡಿಯೋ ರಿಲೀಸ್ ಆಗಿದೆ. ಡೈರೆಕ್ಟರ್ ಗೀತು ಮೋಹನ್‌ದಾಸ್ ಅವರ ಜನ್ಮ ದಿನದ ಹಿನ್ನೆಲೆಯಲ್ಲಿಯೇ ಈ ಒಂದು ವಿಡಿಯೋ ರಿಲೀಸ್ ಆಗಿದೆ.
ಟಾಕ್ಸಿಕ್ ಚಿತ್ರಕ್ಕೆ ಐಮ್ಯಾಕ್ಸ್ ಟಚ್
ಇದರಲ್ಲಿ ಯಶ್ ಮತ್ತು ಗೀತು ಮೋಹನ್‌ದಾಸ್ ವರ್ಕಿಂಗ್ ಸ್ಟೈಲ್ ರಿವೀಲ್ ಆಗಿದೆ. ಗೀತು ಮೋಹನ್‌ದಾಸ್ ಅದೆಷ್ಟು ಎನರ್ಜಿಯಲ್ಲಿಯೇ ಕೆಲಸ ಮಾಡ್ತಾರೆ ಅನ್ನೊದು ಗೊತ್ತಾಗಿ ಇದೆ.
ಡೈರೆಕ್ಟರ್ ಗೀತು ಮೋಹನ್‌ದಾಸ್ ಈ ಚಿತ್ರದಲ್ಲಿ ಸಾಕಷ್ಟು ಕ್ಯಾರೆಕ್ಟರ್ ಬರೆದಿದ್ದಾರೆ. ಅದರಲ್ಲಿ ಬಹುತೇಕ ಲೇಡಿ ಪಾತ್ರಗಳೇ ಇವೆ. ಬಾಲಿವುಡ್‌ನ ತಾರಾ ಸತಾರಿಯಾ, ಹುಮಾ ಕುರೇಷಿ, ಕಿಯಾರಾ ಅಡ್ವಾಣಿ, ನಯನತಾರಾ ಸೇರಿದಂತೆ ಇನ್ನು ಅನೇಕ ಕಲಾವಿದೆಯರು ಈ ಚಿತ್ರದಲ್ಲಿದ್ದಾರೆ.
ಆದರೆ, ಇದು 2025 ವಿಷಯವೇ ಆಗಿತ್ತು. ಇದಾದ್ಮೇಲೆ ಇದು 2026 ರ ಮಾರ್ಚ್-19 ರಂದು ಪಕ್ಕಾ ರಿಲೀಸ್ ಅಂತಲೇ ಚಿತ್ರ ತಂಡ ಹೇಳಿತ್ತು. ಅದು ಮತ್ತೆ ಮುಂದೆ ಹೋಯಿತು. ಜೂನ್-4 ಪಕ್ಕಾ ಅಂತಲೇ ಅನೌನ್ಸ್ ಆಯಿತು. ಆದರೆ, ಇದು ಮುಂದೆ ಹೋಯಿತು.
ಟಾಕ್ಸಿಕ್ ಚಿತ್ರದ ರಿಲೀಸ್ ಡೇಟ್ ಯಾವಾಗ ಅನ್ನುವ ಪ್ರಶ್ನೆ ಮತ್ತೆ ಹುಟ್ಟಿಕೊಂಡಿದೆ. ಆದರೆ, ಸಿನಿಮಾ ತಂಡ ಇನ್ನು ಯಾವುದೇ ಡೇಟ್ ಅನ್ನ ಅನೌನ್ಸ್ ಮಾಡಿಲ್ಲ. ಹಾಗಾಗಿಯೇ ಈ ಚಿತ್ರದ ರಿಲೀಸ್ ಡೇಟ್ ಯಾವಾಗ ಅನ್ನುವ ಕುತೂಹಲ ಮತ್ತೆ ಹೆಚ್ಚಾಗಿದೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka
Jun 10, 2026 10:31 PM IST













