Obsession Movie: ಒಂದೇ ಸಿನಿಮಾದಿಂದ ಇಡೀ ಜಗತ್ತನ್ನೇ ನಡುಗಿಸಿದ 26 ವರ್ಷದ ಹುಡುಗ! ‘ಒಬ್ಸೆಷನ್’ ಮಾಂತ್ರಿಕ ಯಾರು ಗೊತ್ತಾ? | | ACTPnews

'ಒಬ್ಸೆಷನ್'


Last Updated:

ಒಬ್ಸೆಷನ್ ಚಿತ್ರದ ಯಶಸ್ಸಿನೊಂದಿಗೆ ಯುವ ನಿರ್ದೇಶಕ ಕರಿ ಬಾರ್ಕರ್ ಹಾಲಿವುಡ್‌ನಲ್ಲಿ ಹೊಸ ತಾರೆಯಾಗಿ ಹೊರಹೊಮ್ಮಿದ್ದಾರೆ. ಕೇವಲ 26ನೇ ವಯಸ್ಸಿನಲ್ಲೇ ಅವರು ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

'ಒಬ್ಸೆಷನ್'
‘ಒಬ್ಸೆಷನ್’

ವಿಶ್ವ ಸಿನಿರಂಗದಲ್ಲಿ ಪ್ರತಿವರ್ಷ ನೂರಾರು ಸಿನಿಮಾಗಳು ಬಿಡುಗಡೆಯಾಗುತ್ತವೆ. ಆದರೆ ಕೆಲವೇ ಕೆಲವು ಚಿತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಅಂತಹ ಸಂಚಲನ ಸೃಷ್ಟಿಸಿರುವ ಚಿತ್ರಗಳಲ್ಲಿ ‘ಒಬ್ಸೆಷನ್’ (Obsession) ಚಿತ್ರ ಪ್ರಮುಖವಾಗಿದೆ. ಸೂಪರ್‌ನ್ಯಾಚುರಲ್ ಸೈಕಲಾಜಿಕಲ್ ಹಾರರ್ (Psychological Horror) ಕಥಾಹಂದರದೊಂದಿಗೆ ನಿರ್ಮಾಣವಾಗಿರುವ ಈ ಸಿನಿಮಾ ಪ್ರೇಕ್ಷಕರನ್ನು ಬೆಚ್ಚಿಬೀಳಿಸುವುದರ ಜೊತೆಗೆ ಬಾಕ್ಸ್ ಆಫೀಸ್‌ನಲ್ಲೂ ಅಚ್ಚರಿಯ ಯಶಸ್ಸು ದಾಖಲಿಸುತ್ತಿದೆ.

ದೊಡ್ಡ ಬಜೆಟ್, ಸೂಪರ್‌ಸ್ಟಾರ್ ನಟರು ಅಥವಾ ಭಾರೀ ಪ್ರಚಾರವಿಲ್ಲದಿದ್ದರೂ ಕೇವಲ ಕಥೆ ಮತ್ತು ನಿರೂಪಣೆಯ ಶಕ್ತಿಯಿಂದ ವಿಶ್ವದ ಗಮನ ಸೆಳೆದಿರುವ ಈ ಚಿತ್ರ, ಹಾಲಿವುಡ್‌ನಲ್ಲಿ ಹೊಸ ಟ್ರೆಂಡ್‌ಗೆ ಸೃಷ್ಟಿಸುತ್ತಿದೆ.

ಕರಿ ಬಾರ್ಕರ್ ಅವರ ವೃತ್ತಿಜೀವನ ಯೂಟ್ಯೂಬ್‌ನಿಂದ ಆರಂಭವಾಯಿತು. ತಮ್ಮ ಸ್ನೇಹಿತ ಕೂಪರ್ ಟಾಮ್ಲಿನ್ಸನ್ ಜೊತೆ ಸೇರಿ ಅವರು ‘ದಟ್ಸ್ ಎ ಬ್ಯಾಡ್ ಐಡಿಯಾ’ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಈ ಚಾನೆಲ್‌ನಲ್ಲಿ ಅನೇಕ ವಿಡಿಯೋಗಳು, ಕಿರುಚಿತ್ರಗಳು ಹಾಗೂ ಹಾರರ್ ವಿಷಯಾಧಾರಿತ ಕಂಟೆಂಟ್‌ಗಳನ್ನು ಪ್ರಕಟಿಸುತ್ತಿದ್ದರು.

ಇದನ್ನೂ ಓದಿ: Vijayalakshmi Darshan: ಧನ್ವೀರ್- ವಿಜಯಲಕ್ಷ್ಮಿ ವಿಡಿಯೋ ಶೇರ್​ ಮಾಡಿ ಬ್ಯಾಡ್ ಕಮೆಂಟ್​! ರೊಚ್ಚಿಗೆದ್ದ ದರ್ಶನ್ ಪತ್ನಿ ಮಾಡಿದ್ದೇನು?

ಯೂಟ್ಯೂಬ್ ಮೂಲಕವೇ ನಿರ್ದೇಶನ, ಕಥೆ ಬರವಣಿಗೆ ಮತ್ತು ಸಿನಿಮಾ ನಿರ್ಮಾಣದ ತಂತ್ರಗಳನ್ನು ಅವರು ಸ್ವತಃ ಕಲಿತರು. ಇದೇ ಅನುಭವ ಮುಂದಿನ ದಿನಗಳಲ್ಲಿ ಅವರನ್ನು ಯಶಸ್ವಿ ನಿರ್ದೇಶಕರನ್ನಾಗಿ ರೂಪಿಸಿತು. 2024ರಲ್ಲಿ ಬಿಡುಗಡೆಯಾದ ಮಿಲ್ಕ್ ಅಂಡ್ ಸೀರಿಯಲ್ ಚಿತ್ರ ಕರಿ ಬಾರ್ಕರ್ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿತು. ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾದ ಈ ಹಾರರ್ ಸಿನಿಮಾ ಯೂಟ್ಯೂಬ್‌ನಲ್ಲಿ ಉಚಿತವಾಗಿ ಬಿಡುಗಡೆಯಾಗಿತ್ತು. ಈ ಚಿತ್ರದ ಯಶಸ್ಸಿನ ಬಳಿಕ ಕರಿ ಬಾರ್ಕರ್ ಅವರ ಪ್ರತಿಭೆಯತ್ತ ಹಾಲಿವುಡ್‌ನ ಪ್ರಮುಖ ನಿರ್ಮಾಣ ಸಂಸ್ಥೆಗಳು ಗಮನ ಹರಿಸಲು ಆರಂಭಿಸಿದವು. ಆ ಬಳಿಕ ಸೃಷ್ಟಿಯಾದ ಕಥೆಯೇ ‘ಒಬ್ಸೆಷನ್’

ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ

‘ಒಬ್ಸೆಷನ್’ ಚಿತ್ರದ ಯಶಸ್ಸು ಕೇವಲ ವಿಮರ್ಶಕರ ಮೆಚ್ಚುಗೆಗೆ ಮಾತ್ರ ಸೀಮಿತವಾಗಿಲ್ಲ. ಆರ್ಥಿಕವಾಗಿಯೂ ಈ ಸಿನಿಮಾ ದೊಡ್ಡ ಮಟ್ಟದ ಸಾಧನೆ ಮಾಡಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಚಿತ್ರವು 152.1 ಮಿಲಿಯನ್ ಡಾಲರ್‌ಗೂ ಅಧಿಕ ಗಳಿಕೆ ದಾಖಲಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಅಸಾಧಾರಣ ಪ್ರದರ್ಶನ ನೀಡುತ್ತಿದೆ.

57 ದೇಶಗಳ ಸುಮಾರು 6,825 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ವಿದೇಶಿ ಮಾರುಕಟ್ಟೆಗಳಿಂದಲೂ ಭಾರೀ ಆದಾಯ ಗಳಿಸಿದೆ. ಒಟ್ಟಾರೆ ಜಾಗತಿಕ ಗಳಿಕೆಯ ಮೂಲಕ ಇದು ಹಿಂದೆ ದಾಖಲೆ ನಿರ್ಮಿಸಿದ್ದ ಹಲವು ಯಶಸ್ವಿ ಚಿತ್ರಗಳನ್ನು ಹಿಂದಿಕ್ಕುವತ್ತ ಸಾಗುತ್ತಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾವೊಂದು ಈ ಮಟ್ಟದ ಯಶಸ್ಸು ಸಾಧಿಸಿರುವುದು ಹಾಲಿವುಡ್ ವಲಯದಲ್ಲೇ ಅಚ್ಚರಿಯ ವಿಷಯವಾಗಿದೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed