Toxic Movie: ಟಾಕ್ಸಿಕ್ ಟೈಟಲ್ ಅಲ್ಲೇ ಇದೆ ಒಂದು ಸೀಕ್ರೆಟ್; ನಿರ್ಮಾಪಕ ಕೆವಿಎನ್ ಬಿಚ್ಚಿಟ್ಟ ಮತ್ತೊಂದು ರಹಸ್ಯ | | ACTPnews

ಟಾಕ್ಸಿಕ್ ಟೈಟಲ್ ಅಲ್ಲೇ ಇದೆ ಒಂದು ಸೀಕ್ರೆಟ್


Last Updated:

ಟಾಕ್ಸಿಕ್ ಚಿತ್ರದ ಕತೆ ಹೇಳೋ ರೀತಿ ಬೇರೆ ಇದೆ. ಇದರ ಸ್ಕೇಲೇ ಬೇರೆ ಇದೆ. ಟಾಕ್ಸಿಕ್ ಟೈಟಲ್ ಅಲ್ಲಿಯೇ ರಹಸ್ಯ ಇದೆ. ಹೀಗೆ ಹೇಳಿರೋ ಟಾಕ್ಸಿಕ್ ಚಿತ್ರದ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಇನ್ನು ಒಂದಷ್ಟು ವಿಚಾರ ಹೇಳಿಕೊಂಡಿದ್ದಾರೆ. ಅದು ಇಲ್ಲಿದೆ ಓದಿ.

ಟಾಕ್ಸಿಕ್ ಟೈಟಲ್ ಅಲ್ಲೇ ಇದೆ ಒಂದು ಸೀಕ್ರೆಟ್
ಟಾಕ್ಸಿಕ್ ಟೈಟಲ್ ಅಲ್ಲೇ ಇದೆ ಒಂದು ಸೀಕ್ರೆಟ್

ಟಾಕ್ಸಿಕ್ ಚಿತ್ರದ (Toxic Movie) ಬಗ್ಗೆ ಯೋಗರಾಜ್ ಭಟ್ರು (Yogaraj Bhat) ಮಾತನಾಡಿದ್ದಾರೆ. ಈ ಚಿತ್ರದ ಹಾಡುಗಳ ಬಗ್ಗೆ ಹೇಳಿದ್ದಾರೆ. ಆದರೆ, ಚಿತ್ರದ ನಾಯಕ ನಟ ಯಶ್ ಈ ಕುರಿತು ಏನಂದ್ರೆ ಏನೂ ಹೇಳಿಲ್ಲ. ಇದರ ನಡುವೆ ಈ ಚಿತ್ರದ ಮತ್ತೊಬ್ಬ ನಿರ್ಮಾಪಕ ವೆಂಕಟ್ ಕೆ. ನಾರಾಯಣ (Venkat K Narayana) ಈ ಪ್ರಾಜೆಕ್ಟ್ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ನಿರ್ಮಾಣದ ಹಾಗೂ ಇಳಯದಳಪತಿ ವಿಜಯ್ ಅಭಿನಯದ ಜನ ನಾಯಗನ್ ಚಿತ್ರದ (Jana Nayagan) ಪ್ರಚಾರ ಕಾರ್ಯಕ್ರಮದಲ್ಲಿಯೇ ಟಾಕ್ಸಿಕ್ ಚಿತ್ರದ ಕುರಿತು ಹೇಳಿದ್ದಾರೆ. ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.

ದೊಡ್ಡವರಿಗಾಗಿ ಮಾಡಿರೋ ಚಿತ್ರ

ಈ ಒಂದು ವಿಚಾರವನ್ನು ನಿರ್ಮಾಪಕ ವೆಂಕಟ್ ಕೆ. ನಾರಾಯಣ ಕೂಡ ಹೇಳಿದ್ದಾರೆ. ಈ ಚಿತ್ರದ ಟೈಟಲ್ ಅಲ್ಲಿಯೇ ಒಂದು ವಿಷಯ ಇದೆ. ಈ ಚಿತ್ರಕ್ಕೆ Toxic: A Fairytale for Grown-Ups ಅಂತಲೇ ಶೀರ್ಷಿಕೆ ಇಟ್ಟಿದ್ದೇವೆ.

producer venkat k narayana latest updates on yash toxic movie

ಕೆವಿಎನ್ ಬಿಚ್ಚಿಟ್ಟ ಮತ್ತೊಂದು ಸೀಕ್ರೆಟ್

ಇದು ದೊಡ್ಡವರಿಗಾಗಿಯೇ ಮಾಡಿರೋ ಚಿತ್ರವೇ ಆಗಿದೆ. ಆದರೆ, ಇದು ನಮ್ಮ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಆಗಿದೆ. ಇದರ ಸ್ಕೇಲ್ ಬೇರೆ ಇದೆ. ಇದರಲ್ಲಿ ಕತೆ ಹೇಳಿರೋ ರೀತಿನೂ ಬೇರೆ ಇದೆ.

ತೆರೆ ಮೇಲೆ ಇದರ ಮ್ಯಾಜಿಕ್ ಬೇರೇನೆ

ಈ ಚಿತ್ರವನ್ನ ಬೇರೆ ರೀತಿನೇ ತೆಗೆದಿದ್ದೇವೆ. ತೆರೆ ಮೇಲೆ ಇದನ್ನ ನೋಡಿದವರಿಗೆ ಬೇರೆಯದ್ದೆ ಅನುಭವ ಸಿಗುತ್ತದೆ. ಆ ರೀತಿನೇ ಈ ಚಿತ್ರವನ್ನ ತೆಗೆದಿದ್ದೇವೆ.

ಕತೆ ಹೇಳಿದ ರೀತಿ ನಿಜಕ್ಕೂ ವಿಭಿನ್ನ

ಟಾಕ್ಸಿಕ್ ಚಿತ್ರದಲ್ಲಿ ಕತೆ ಹೇಳುವ ರೀತಿ ವಿಭಿನ್ನವಾಗಿಯೇ ಇದೆ. ಇದರ ಸ್ಕೇಲ್ ಕೂಡ ವಿಭಿನ್ನವಾಗಿಯೇ ಇದೆ. ಇಂತಹ ಈ ಚಿತ್ರ ನಮ್ಮ ಮಹತ್ವದ ಪ್ರಾಜೆಕ್ಟ್ ಆಗಿದೆ ಅಂತಲೇ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಹೇಳಿಕೊಂಡಿದ್ದಾರೆ.

ಇಳಯದಳಪತಿ ವಿಜಯ್ ಅಭಿನಯದ ಜನ ನಾಯಗನ್ ಚಿತ್ರವನ್ನ ಕೂಡ ಇವರೇ ನಿರ್ಮಿಸಿದ್ದಾರೆ. ಈ ಚಿತ್ರ ಜುಲೈ-23 ರಂದು ರಿಲೀಸ್ ಆಗಿದೆ. ಇದರ ರಿಲೀಸ್ ಮುಂಚೆ ನಡೆದ ಸಂದರ್ಶನದಲ್ಲಿಯೇ ಟಾಕ್ಸಿಕ್ ಚಿತ್ರದ ವಿಶೇಷತೆಗಳ ಬಗ್ಗೆ ಹೇಳಿಕೊಂಡಿದ್ದಾರೆ.

producer venkat k narayana latest updates on yash toxic movie

ಆಗಸ್ಟ್-26 ರಂದು ರಿಲೀಸ್
ಆಗಸ್ಟ್-26 ರಂದು ರಿಲೀಸ್

ಟಾಕ್ಸಿಕ್ ಚಿತ್ರ ಮುಂದಿನ ತಿಂಗಳು ಆಗಸ್ಟ್-26 ರಂದು ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಈ ಚಿತ್ರ ತೆರೆ ಕಾಣುತ್ತಿದೆ. ಈ ಸಿನಿಮಾದ ಬಗ್ಗೆ ನಿರೀಕ್ಷೆ ಬೆಟ್ಟದಷ್ಟಿದೆ.

ವಿಶ್ವಮಟ್ಟಕ್ಕೆ ಕನ್ನಡ ಚಿತ್ರವನ್ನ ತೆಗೆದುಕೊಂಡು ಹೋಗ್ಬೇಕು ಅನ್ನೋದೇ ಯಶ್ ಅತಿ ದೊಡ್ಡ ಕನಸಾಗಿದೆ. ಅದು ಈಗ ಟಾಕ್ಸಿಕ್ ಚಿತ್ರದ ಮೂಲಕವೇ ಈಡೇರುತ್ತಿದೆ.

ಗೀತು ಮೋಹನ್‌ದಾಸ್ ಸಿನಿಮಾ

ಗೀತು ಮೋಹನ್‌ದಾಸ್ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಕತೆಯ ವಿಚಾರದಲ್ಲಿ ಯಶ್ ಕೂಡ ಇದ್ದಾರೆ. ಜೊತೆಗೂಡಿಯೇ ಈ ಚಿತ್ರಕ್ಕೆ ಕತೆ ಮಾಡಿದ್ದಾರೆ.

ಈ ಕತೆಯನ್ನ ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಒಂದು ಅತಿ ದೊಡ್ಡ ಕನಸಿಗೆ ಬಾಲಿವುಡ್ ನಟಿಯರಾದ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಸಾಥ್ ಕೊಟ್ಟಿದ್ದಾರೆ. ಹಾಗೂ ದಕ್ಷಿಣದ ರುಕ್ಮಿಣಿ ವಸಂತ್, ನಯನ ತಾರಾ ಹೀಗೆ ಇನ್ನು ಅನೇಕ ಕಲಾವಿದರೂ ಇದ್ದಾರೆ.

ಇವರೆಲ್ಲರ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಮಾಡಿದ್ದಾರೆ. ಇದೇ ಚಿತ್ರದ ಹಾಡುಗಳನ್ನ ಬೇರೆ ಯುವ ಸಂಗೀತ ನಿರ್ದೇಶಕರು ಒಂದೊಂದು ಹಾಡು ಮಾಡಿರೋದು ಇದೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports