ಹೌದು, ತಿಮ್ಮಪ್ಪನಿಗೆ ಭಕ್ತರು ನೀಡುವ ಚಿನ್ನಾಭರಣಗಳನ್ನು ನೇರವಾಗಿ ಮಾರಾಟ ಮಾಡದಿರಲು ನಿರ್ಧರಿಸಿದೆ. ಅವುಗಳನ್ನು ಚಿನ್ನದ ಬಿಸ್ಕತ್ತುಗಳಾಗಿ ಪರಿವರ್ತಿಸಿ ಬ್ಯಾಂಕುಗಳಲ್ಲಿ ಚಿನ್ನದ ಠೇವಣಿಯಾಗಿ ಇಡಲು ಉದ್ದೇಶಿಸಿದೆ. ಹಾಗೇ, ಚಿನ್ನದ ಆಭರಣಗಳಲ್ಲಿರುವ ರತ್ನಗಳು ಮತ್ತು ಅಮೂಲ್ಯ ಕಲ್ಲುಗಳನ್ನು ಬೇರ್ಪಡಿಸಿ ಹರಾಜು ಹಾಕಲಿದೆ. ಭಕ್ತರು ತಮ್ಮ ಕಾಣಿಕೆಗಳನ್ನು ನೀಡುವಾಗ ಹುಂಡಿಯಲ್ಲಿ ತಮಗೆ ಬೇಕಾದ ಆಭರಣ ಮತ್ತು ಚಿನ್ನದ ವಸ್ತುಗಳನ್ನು ಕೂಡ ಹಾಕುತ್ತಾರೆ. ಭಗವಂತನಿಗೆ ಅರ್ಪಿಸುವ ಈ ಉಡುಗೊರೆಗಳು ಟಿಟಿಡಿಯ ಆದಾಯದ ಪ್ರಮುಖ ಭಾಗವಾಗಿದೆ. ಆದರೆ, ಅವುಗಳ ನಿರ್ವಹಣೆ, ಭದ್ರತೆ ಮತ್ತು ಸರಿಯಾದ ಬಳಕೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಟಿಟಿಡಿ ನಿಯಮಗಳಲ್ಲಿ ಬದಲಾವಣೆಗಳನ್ನು ಪರಿಗಣಿಸುತ್ತಿದೆ.













