Tirumala TTD Alert: ತಿರುಮಲದಲ್ಲಿ ನೋ ಎಂಟ್ರಿ! ಭಕ್ತರಿಂದ ತುಂಬಿ ತುಳುಕುತ್ತಿರುವ ಕ್ಯೂ ಲೈನ್, ತಿಮ್ಮಪ್ಪನ ಹೊಸ ದಾಖಲೆ! | ಜ್ಯೋತಿಷ್ಯ | ACTPnews

ತಿರುಮಲ (ಸಂಗ್ರಹ ಚಿತ್ರ)


Last Updated:

ತಿರುಮಲದಲ್ಲಿ ಬೇಸಿಗೆ ರಜೆ, ವಾರಾಂತ್ಯದಿಂದ ಭಾರೀ ಭಕ್ತಸಂದಣಿ, ಮೇ 22 ರಂದು ಟಿಟಿಡಿ ಇತಿಹಾಸದಲ್ಲೇ ಮೊದಲ ಬಾರಿಗೆ 94,758 ಭಕ್ತರಿಗೆ ತಿಮ್ಮಪ್ಪನ ದರ್ಶನ, ಸರ್ವದರ್ಶನಕ್ಕೆ 24 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.

ತಿರುಮಲ (ಸಂಗ್ರಹ ಚಿತ್ರ)
ತಿರುಮಲ (ಸಂಗ್ರಹ ಚಿತ್ರ)

ತಿರುಮಲದಲ್ಲಿ ಶ್ರೀವಾರಿ ಭಕ್ತರ (Tirumala Devotees) ಸಂಖ್ಯೆ ಯಾರು ಊಹೆ ಮಾಡದ ರೀತಿಯಲ್ಲಿ ಹೆಚ್ಚಾಗಿದೆ. ಬೇಸಿಗೆ ರಜೆಗಳು (Summer Holidays) ಹಾಗೂ ವಾರಾಂತ್ಯ ಇರುವ ಕಾರಣ ದೇಶದ ಮೂಲೆ ಮೂಲೆಯಿಂದ ತಿರುಮಲ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರೊಂದಿಗೆ ಭಕ್ತರ ಜನ ಸಮೂಹವೇ ಕಾಣುತ್ತಿದೆ. ಸದ್ಯ ಶ್ರೀವಾರಿ ದರ್ಶನಕ್ಕೆ ಸರ್ವದರ್ಶನದಲ್ಲಿ (Sarvadarshanam Timings) 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.

ಸಾಮಾನ್ಯ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಏರ್ಪಡಿಸುವುದರಲ್ಲಿ ತಿರುಮಲ ತಿರುಪತಿ ದೇವಸ್ಥಾನ ಹೊಸ ದಾಖಲೆ ಬರೆದಿದೆ. ಸಾಮಾನ್ಯವಾಗಿ ಶುಕ್ರವಾರ ತಿಮ್ಮಪ್ಪನಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುವ ಕಾರಣ ದರ್ಶನ ಸಮಯ ಕಡಿಮೆ ಇರುತ್ತದೆ. ಆದರೂ ಮೇ 22 ರಂದು ಟಿಟಿಡಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 94,758 ಮಂದಿ ಭಕ್ತರು ದರ್ಶನ ಪಡೆದುಕೊಂಡಿದ್ದಾರೆ. ಬೆಳಗ್ಗೆ ನಡೆಯುವ ಅಭಿಷೇಕದ ಸಮಯದಲ್ಲೂ ಸರ್ವದರ್ಶನ ಕ್ಯೂ ಲೈನ್​ನಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದರಿಂದ ಸುಮಾರು 5,850 ಮಂದಿ ಭಕ್ತರು ದರ್ಶನ ಪಡೆದುಕೊಂಡಿದ್ದರು. ಸುಮಾರು 15 ಗಂಟೆಗಳ ಕಾಲ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಿದ್ದು, ಮೇ ತಿಂಗಳಿನಲ್ಲಿ ಈ ಒಂದು ದಿನವೇ ತಿಮ್ಮಪ್ಪನ ದರ್ಶನ ಪಡೆದುಕೊಂಡ ಭಕ್ತರ ಸಂಖ್ಯೆ ನಾಲ್ಕನೇ ಬಾರಿಗೆ 90 ಸಾವಿರ ಗಡಿದಾಟಿದೆ.

ಇಂದು ಕೂಡ ತಿರುಮಲದಲ್ಲಿರುವ ವೈಕುಂಠ ಕ್ಯೂ ಕಾಂಪ್ಲೆಕ್ಸ್ ಗಳು, ನಾರಾಯಣಗಿರಿ ಉದ್ಯಾನವನ ಶೆಡ್ ಗಳು ಸಂಪೂರ್ಣವಾಗಿ ಭಕ್ತರಿಂದ ತುಂಬಿದೆ. ಕ್ಯೂ ಲೈನ್ ಗಳು ಶ್ರೀವಾರಿ ದೇವಾಲಯದ ಹಿಂದಿರುವ ಬಾಟಗಂಗಮ್ಮ ಗುಡಿಯ ವರೆಗೂ ಕಿಲೋಮೀಟರ್ ವರೆಗೂ ವಿಸ್ತರಣೆಯಾಗಿದೆ. ಕಂಪಾರ್ಟ್​​ಮೆಂಟ್ ಗಳು ಭಕ್ತರಿಂದ ತುಂಬಿ ಹೋಗಿರುವುದರಿಂದ ಅಧಿಕಾರಿಗಳು ಶನಿವಾರ ಮಧ್ಯಾಹ್ನದಿಂದ ಹೊಸ ಭಕ್ತರಿಗೆ ಕ್ಯೂಲೈನ್ ನಲ್ಲಿ ಭಕ್ತರಿಗೆ ಅವಕಾಶ ನೀಡುವುದನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದರು. ಭಕ್ತರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಮತ್ತೆ ಕ್ಯೂ ಲೈನ್​​​ಗೆ ಆಗಮಿಸಲು ಮೈಕ್ ಮೂಲಕ ಭಕ್ತರಿಗೆ ಮನವಿ ಮಾಡುತ್ತಿದ್ದಾರೆ.

ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ತಂತ್ರಜ್ಞಾನದ ಮೂಲಕ ಅಧಿಕಾರಿಗಳು ಭಕ್ತರ ದಟ್ಟಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕಾಲ್ನಡಿಗೆ ಮೂಲಕ ಹಾಗೂ ವಾಹನದ ಮೂಲಕ ಆಗಮಿಸುವ ಭಕ್ತರ ಸಂಖ್ಯೆಯನ್ನು ಅಂದಾಜು ಮಾಡುತ್ತಾ ಅಗತ್ಯ ಸ್ಥಳಗಳಲ್ಲಿ ಬ್ಯಾರಿಕೇಟ್ ಗಳನ್ನು ಅಳವಡಿಕೆ ಮಾಡುತ್ತಿದ್ದಾರೆ. ಕ್ಯೂ ಲೈನ್ ನಲ್ಲಿ ಗಂಟೆಗಟ್ಟಲೇ ಕಾಯುತ್ತಿದ್ದಾರೆ. ಅಂತಹ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಟಿಟಿಡಿ ಸೌಲಭ್ಯಗಳನ್ನು ಏರ್ಪಡಿಸುತ್ತಿದೆ. ನಿರಂತರವಾಗಿ ಅನ್ನಪ್ರಸಾದ, ಹಾಲು, ಮಜ್ಜಿಗೆ ಮತ್ತು ಕುಡಿಯುವ ನೀರು ಪೂರೈಕೆ ಮಾಡುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed