Last Updated:
ದಿ ಪ್ಯಾರಡೈಸ್ ಚಿತ್ರಕ್ಕೆ ಮಿಕ್ಸ್ ರೆಸ್ಪಾನ್ಸ್ ಬರ್ತಿದೆ. ಫಸ್ಟ್ ಹಾಫ್ ಅನೇಕರಿಗೆ ಜಾಸ್ತಿನೇ ಇಷ್ಟ ಆಗಿದೆ. ಸೆಕೆಂಡ್ ಹಾಫ್ ಲ್ಯಾಗ್ ಅನಿಸಿದೆ. ಈ ಎಲ್ಲ ಅಭಿಪ್ರಾಯಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಲಿವುಡ್ ನಾನಿ (Nani) ಅಭಿನಯದ ದಿ ಪ್ಯಾರಡೈಸ್ ಸಿನಿಮಾ (The Paradise Movie) ರಿಲೀಸ್ ಆಗಿದೆ. ಶುಕ್ರವಾರದ ಬದಲು ಗುರುವಾರವೆ ತೆರೆ ಕಂಡಿದೆ. ಈ ಚಿತ್ರವನ್ನ ನೋಡಿದ ಪ್ರೇಕ್ಷಕರು ಎರಡು ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿಯೇ ಈ ಚಿತ್ರಕ್ಕೆ ಮಿಕ್ಸ್ ರೆಸ್ಪಾನ್ಸ್ (Mix Response) ಅಂತ ಹೇಳಬಹುದು. ಬಹು ಕೋಟಿ ವೆಚ್ಚದ ಈ ಚಿತ್ರದಲ್ಲಿ ನಾನಿ ವಿಭಿನ್ನವಾದ ರೂಪ ತಾಳಿದ್ದಾರೆ. ಆದರೆ, ಈ ಚಿತ್ರದಲ್ಲಿ ಜನಕ್ಕೆ ನಾನಿ (Nani) ಅಭಿನಯ ಇಷ್ಟ ಆಯಿತಾ? ಇಡೀ ಚಿತ್ರಕ್ಕೆ ಯಾಕೆ ಮಿಕ್ಸ್ ರೆಸ್ಪಾನ್ಸ್ ಬರ್ತಿದೆ? ಈ ಎಲ್ಲದರ ವಿವರ ಇಲ್ಲಿದೆ ಓದಿ.
ದಿ ಪ್ಯಾರಡೈಸ್ ಚಿತ್ರದಲ್ಲಿ ನಾಯಕ ನಟ ನಾನಿ ಅಭಿನಯ ಜನಕ್ಕೆ ತುಂಬಾನೆ ಇಷ್ಟ ಆಗಿದೆ. ಯುವತಿಯರು ಕಳೆದು ಹೋಗಿದ್ದಾರೆ. ಅಂತಹ ಅಭಿನಯವನ್ನ ನಾನಿ ಈ ಚಿತ್ರದಲ್ಲಿ ಮಾಡಿದ್ದಾರೆ.
ಆದರೆ, ಯುವಕರಿಗೆ ಚಿತ್ರದ ಫಸ್ಟ್ ಹಾಫ್ ಇಷ್ಟ ಆಗಿದೆ. ಸೆಕೆಂಡ್ ಹಾಫ್ ಅಷ್ಟೆನೂ ಇಷ್ಟ ಆಗಿಲ್ಲ. ಲ್ಯಾಗ್ ಇದೆ ಅಂತ ಅನೇಕ ಯುವಕರು ಹೇಳಿದ್ದಾರೆ. ಹೀಗೆ ಹೇಳಿದವರು ಕನ್ನಡ ಪ್ರೇಕ್ಷಕರೇನೂ ಅಲ್ಲ ಬಿಡಿ. ತೆಲುಗು ಪ್ರೇಕ್ಷಕರೇ ಈ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.
ದಿ ಪ್ಯಾರಡೈಸ್ ಚಿತ್ರದ ಫಸ್ಟ್ ಹಾಫ್ ಸೂಪರ್ ಆಗಿದೆ. ಇಲ್ಲಿಯೇ ಚಿತ್ರದ ಸಂಪೂರ್ಣ ವಿಷಯ ಇದೆ. ಆದರೆ, ಸೆಕೆಂಡ್ ಹಾಫ್ ಅಲ್ಲಿ ನಿಜಕ್ಕೂ ಏನೂ ಇಲ್ಲ. ಸುಮ್ನೆ ಎಳೆದು ಹಾಕಿದ್ದಾರೆ. ಫೈಟ್ಸ್ ಇದೆ. ಆದರೆ, ಮ್ಯಾಟರ್ ಇಲ್ಲವೆಂದು ಸುಮಾರು ಜನ ಹೇಳಿ ಹೋಗಿದ್ದಾರೆ.
ದಿ ಪ್ಯಾರಡೈಸ್ ಸಿನಿಮಾದಲ್ಲಿ ರಾಜಕೀಯ ಬರುತ್ತದೆ. ಕ್ಲೈಮ್ಯಾಕ್ಸ್ ಮುಂಚಿನ ಸೀನ್ ಕೂಡ ಕೆಲವರಿಗೆ ಇಷ್ಟ ಆಗಿದೆ. ಇನ್ನು ಕೆಲವರಿಗೆ ಕ್ಲೈಮ್ಯಾಕ್ಸ್ ಸಹ ಇಷ್ಟ ಆಗಿದೆ.
ದಿ ಪ್ಯಾರಡೈಸ್ ಚಿತ್ರದ ಮ್ಯೂಸಿಕ್ ಹೆಚ್ಚು ಗಮನ ಸೆಳೆದಿದೆ. ಬಿಜಿಎಂ ಅನೇಕರಿಗೆ ಇಷ್ಟ ಆಗಿದೆ. ಈ ಚಿತ್ರ ಬೇರೆ ಬೇರೆ ಕಾರಣಕ್ಕೆ ಕೆಲವರಿಗೆ ಇಷ್ಟ ಆಗಿದೆ. ಇನ್ನು ಕೆಲವರಿಗೆ ಸೆಕೆಂಡ್ ಹಾಫ್ ಲ್ಯಾಗ್ ಅಂತಲೇ ಅನಿಸಿದೆ.
ಈ ಚಿತ್ರದ ಬಗ್ಗೆ ಹೈಪ್ ಇತ್ತು. ಹೆಚ್ಚಿನ ಸಂಖ್ಯೆಯಲ್ಲಿ ಇದು ತೆರೆಗೂ ಬಂದಿದೆ. ತೆಲುಗು ಅಷ್ಟೆ ಅಲ್ಲ, ಕನ್ನಡದಲ್ಲೂ ಈ ಸಿನಿಮಾ ಬಂದಿದೆ. ಬಹು ಭಾಷೆಯಲ್ಲಿ ಈ ಚಿತ್ರ ಸೆಪ್ಟೆಂಬರ್-24 ರಂದು ರಿಲೀಸ್ ಆಗಿದೆ.
ಈ ಚಿತ್ರವನ್ನ ಶ್ರೀಕಾಂತ್ ಒಡೆಲಾ ಡೈರೆಕ್ಷನ್ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ನಾನಿಗೆ ನಟಿ ಕಯಾದು ಲೋಹರ್ ಜೋಡಿ ಆಗಿದ್ದಾರೆ.
ಚಿತ್ರದಲ್ಲಿ ಮೋಹನ್ ಬಾಬು ಹಾಗೂ ರಾಘವ್ ಜುಯಲ್ ಪ್ರಮುಖ ಪಾತ್ರದಲ್ಲಿದ್ದಾರೆ. ಇವರೆಲ್ಲರ ಚಿತ್ರವನ್ನ ನೋಡಿದ ಪ್ರೇಕ್ಷಕರು ಮೊದಲ ದಿನ ಮಿಕ್ಸ್ ರೆಸ್ಪಾನ್ಸ್ ಕೊಟ್ಟಿದ್ದಾರೆ ಅಂತ ಹೇಳಬಹುದು.
-ರೇವನ್ ಪಿ.ಜೇವೂರ್
















