Last Updated:
ಅಶೋಕ್ ಧಾಮ್ ದೇವಾಲಯದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದೆ. ಈ ಕಾಲ್ತುಳಿತದಲ್ಲಿ 7 ಭಕ್ತರು ಸಾವನಪ್ಪಿದ್ದಾರೆ. ಮತ್ತು ಅನೇಕ ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಸಿದ್ಧ ದೇವಾಲದಲ್ಲಿ ಭೀಕರ ಕಾಲ್ತುಳಿತ (Stamped) ಸಂಭವಿಸಿದೆ. ಬಿಹಾರದ (Bihar) ಲಖಿಸರೈನಿಂದ ಈ ದುರಂತದ ಸುದ್ದಿಯೊಂದು ಬಂದಿದೆ. ಪ್ರಸಿದ್ಧ ಅಶೋಕ ಧಾಮ ದೇವಾಲಯದಲ್ಲಿ ಭಾರೀ ಭಕ್ತರ ಗುಂಪಿನ ನಡುವೆ ಒಂದು ದೊಡ್ಡ ಅಪಘಾತ ಸಂಭವಿಸಿದೆ. ದೇವಾಲಯದಲ್ಲಿ ದರ್ಶನದ ಸಮಯದಲ್ಲಿ ಕಾಲ್ತುಳಿತ ಸಂಭವಿಸಿದೆ. ಆರಂಭಿಕ ವರದಿಗಳ ಪ್ರಕಾರ, ಅಪಘಾತದಲ್ಲಿ ಏಳು ಭಕ್ತರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.














