Teejan Bai Passes Away: ಪದ್ಮವಿಭೂಷಣ ಪುರಸ್ಕೃತ ಖ್ಯಾತ ಗಾಯಕಿ ಇನ್ನಿಲ್ಲ! 70ನೇ ವಯಸ್ಸಿಗೆ ಕೊನೆಯುಸಿರೆಳೆದ ಗಾನಕೋಗಿಲೆ | | ACTPnews

News18


Last Updated:

Renowned Pandavani Singer and Padma Vibhushan Awardee Passes Away: ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವರದಿಗಳ ಪ್ರಕಾರ, ಅವರು ಭಾನುವಾರ ಬೆಳಗಿನ ಜಾವ 3:15 ಕ್ಕೆ ರಾಯ್ಪುರ ಏಮ್ಸ್‌ನಲ್ಲಿ ಕೊನೆಯುಸಿರೆಳೆದರು.

News18
News18

ಮುಂಬೈ: ಪಾಂಡವನಿ ಗಾಯಕಿ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತೆ ತೀಜನ್ ಬಾಯಿ (Teejan Bai Death) ಅವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ. 70 ವರ್ಷ ವಯಸ್ಸಿನ ಸುಪ್ರಸಿದ್ಧ ಜಾನಪದ ಗಾಯಕಿ ತೀಜನ್ ಬಾಯಿ ಅವರು ಬೆಳಗಿನ ಜಾವ 3:15 ಕ್ಕೆ ರಾಯ್ಪುರ ಏಮ್ಸ್‌ನಲ್ಲಿ (Teejan Bai Passes Away) ಕೊನೆಯುಸಿರೆಳೆದರು.

ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತೀಜನ್ ಬಾಯಿ ಅವರು ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಛತ್ತೀಸ್‌ಗಢದ ಜಾನಪದ ಕಲೆ ಮತ್ತು ಪಾಂಡವನಿ ಗಾಯನ ಮನ್ನಣೆಯನ್ನು ವಿಶ್ವಾದ್ಯಂತ ಪರಿಚಯಿಸಿದ್ದರು. ವರದಿಗಳ ಪ್ರಕಾರ, ಅವರು ಭಾನುವಾರ ಬೆಳಗಿನ ಜಾವ 3:15 ಕ್ಕೆ ರಾಯ್ಪುರ ಏಮ್ಸ್‌ನಲ್ಲಿ ಕೊನೆಯುಸಿರೆಳೆದರು. ತೀಜನ್ ಆಗಸ್ಟ್ 8, 1956 ರಂದು ಜನಿಸಿದ್ದರು. ಅವರಿಗೆ 1988ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು.

ಇದನ್ನೂ ಓದಿ: Badrinath Temple Donation: ಅಯೋಧ್ಯೆ ರಾಮಮಂದಿರ ಬೆನ್ನಲ್ಲೇ ಪ್ರಸಿದ್ಧ ಬದರಿನಾಥ ದೇಗುಲದಲ್ಲೂ ಕಾಣಿಕೆ ಕಳ್ಳತನ ಆರೋಪ? ತನಿಖೆ ಆರಂಭ

ತೀಜನ್ ಬಾಯಿ ಅವರಿಗೆ 2003 ರಲ್ಲಿ ಪದ್ಮಭೂಷಣ ಮತ್ತು 2019 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು. ತೀಜನ್ ಬಾಯಿ ಅವರು ಭಿಲಾಯಿ ಬಳಿಯ ಗನಿಯಾರಿ ಗ್ರಾಮದಲ್ಲಿ ಜನಿಸಿದರು. ವರದಿಗಳ ಪ್ರಕಾರ, ಅವರು 13 ನೇ ವಯಸ್ಸಿನಲ್ಲಿ 10 ರೂಪಾಯಿಗಳಿಗೆ ಮೊದಲ ಬಾರಿಗೆ ಹಾಡಿದ್ದರು. ಕಾಪಾಲಿಕಾ ಶೈಲಿಯಲ್ಲಿ ಪಾಂಡವಾಣಿ ಹಾಡಿದ ತೀಜನ್ ಬಾಯಿ ಅವರ ಗಾಯನ ಶೈಲಿ ಎಷ್ಟು ವಿಶಿಷ್ಟವಾಗಿತ್ತು ಎಂದರೆ ಮೊದಲ ಪ್ರದರ್ಶನದಲ್ಲೇ ಅವರು ಹಳ್ಳಿಗಳಲ್ಲಿ ಜನಪ್ರಿಯರಾದರು. ನಂತರ ಜನರು ಅವರಿಗೆ ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡಲು ಆಹ್ವಾನಿಸಲು ಶುರು ಮಾಡಿದರು.

ಸಂಪ್ರದಾಯಗಳನ್ನು ಮುರಿದ ತೀಜನ್ ಬಾಯಿ

ಪಾಂಡವಾಣಿ ಹಾಡಿದ ಮೊದಲ ಮಹಿಳಾ ಗಾಯಕಿ ತೀಜನ್ ಬಾಯಿ. ಆ ಸಮಯದಲ್ಲಿ, ಮಹಿಳೆಯರು ಕುಳಿತಲ್ಲೇ ಹಾಡುವ ವೇದಮತಿ ಮಾತ್ರ ಹಾಡಬಹುದಿತ್ತು. ತೀಜನ್ ಬಾಯಿ ಸಂಪ್ರದಾಯವನ್ನು ಮುರಿದು ನಿಂತು ಹಾಡಲು ಪ್ರಾರಂಭಿಸಿದರು. ಅವರ ವಿಶಿಷ್ಟ, ಆಳವಾದ ಧ್ವನಿ ಮತ್ತು ಅಗಾಧವಾದ ಉತ್ಸಾಹವು ಜನರ ಹೃದಯದಲ್ಲಿ ಅವರಿಗೆ ಸ್ಥಾನ ತಂದುಕೊಟ್ಟಿತು. ಅವರು ಪುರುಷ ಪ್ರಾಬಲ್ಯದ ಕ್ಷೇತ್ರವೆಂದು ಪರಿಗಣಿಸಲ್ಪಟ್ಟ ಗಾಯನ ಕ್ಷೇತ್ರವನ್ನು ಪ್ರವೇಶಿಸಿ ಸಾಧನೆ ಮಾಡಿದರು.

ಇಂದಿರಾ ಗಾಂಧಿಯವರ ಮುಂದೆ ತೀಜನ್ ಬಾಯಿ ಪ್ರದರ್ಶನ

ತೀಜನ್ ಬಾಯಿ ಮಹಾಭಾರತದ ಪಾತ್ರಗಳು ಮತ್ತು ಕಥೆಗಳನ್ನು ವೇದಿಕೆಯ ಮೇಲೆ ಜೀವಂತಗೊಳಿಸಿದರು. ತೀಜನ್ ಬಾಯಿ ಅವರ ಪ್ರತಿಭೆಯನ್ನು ಗುರುತಿಸಿದ ಹಬೀಬ್ ತನ್ವೀರ್ ಅವರು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಮುಂದೆ ಪ್ರದರ್ಶನ ನೀಡಲು ಆಹ್ವಾನಿಸಿದಾಗ ಅವರಿಗೆ ದೊಡ್ಡ ಮನ್ನಣೆ ಸಿಕ್ಕಿತು. ಅದಾದ ನಂತರ, ಅವರು ಎಂದಿಗೂ ಹಿಂತಿರುಗಿ ನೋಡಲಿಲ್ಲ. ಅವರ ಪ್ರತಿಭೆ ಮತ್ತು ಧ್ವನಿ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಜನರ ಹೃದಯಗಳನ್ನು ಆಕರ್ಷಿಸಿತು.

12 ನೇ ವಯಸ್ಸಿನಲ್ಲಿ ವಿವಾಹ

ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ದಿ ಹಿಂದೂ ಪ್ರಕಾರ, ತೀಜನ್ ಬಾಯಿ 12 ನೇ ವಯಸ್ಸಿನಲ್ಲಿ ವಿವಾಹವಾದರು. ಅವರು ಮದುವೆಯ ನಂತರವೇ ಹಾಡಲು ಪ್ರಾರಂಭಿಸಿದರು. ಮಹಿಳೆಯಾಗಿದ್ದರೂ, ಪಾಂಡವಾಣಿ ಹಾಡಿದ್ದಕ್ಕಾಗಿ ಅವರನ್ನು ಪಾರ್ಧಿ ಸಮುದಾಯದಿಂದ ಹೊರಹಾಕಲಾಯಿತು. ಅವರು ತಮ್ಮ ಗಂಡನ ಮನೆಯನ್ನು ಬಿಡಬೇಕಾಯಿತು. ನಂತರ ಅವರು ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು, ಒಂದು ಹೊತ್ತಿನ ಆಹಾರಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಮುಂದೊಮ್ಮೆ ಅವರ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿತು, ಅವಮಾನ ಮಾಡಿದ ಸಮಾಜದಲ್ಲೇ ಪ್ರಮುಖ ವ್ಯಕ್ತಿಯಾಗಿ ಬೆಳೆದರು. ಮತ್ತೊಮ್ಮೆ ಎರಡನೇ ಬಾರಿ ವಿವಾಹವಾದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed