Last Updated:
ಭಾರತೀಯ ಕ್ರಿಕೆಟ್ನಲ್ಲಿ ಒಂದೇ ದಿನ ಎರಡು ಕಡೆ ಟೀಮ್ ಇಂಡಿಯಾ ಆಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 1998 ರಲ್ಲಿ ಇಂತಹದ್ದೇ ಒಂದು ಘಟನೆ ನಡೆದಿತ್ತು. ಆಗ ಅಜಯ್ ಜಡೇಜಾ ನೇತೃತ್ವದಲ್ಲಿ ಭಾರತ ತಂಡವು ‘ಕಾಮನ್ವೆಲ್ತ್ ಗೇಮ್ಸ್’ನಲ್ಲಿ ಆಡಿದರೆ, ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ಮತ್ತೊಂದು ಮುಖ್ಯ ತಂಡವು ಕೆನಡಾದಲ್ಲಿ ಪಾಕಿಸ್ತಾನದ ವಿರುದ್ಧ ‘ಸಹಾರಾ ಕಪ್’ ಆಡಲು ಮೈದಾನಕ್ಕಿಳಿದಿತ್ತು.
ಭಾರತೀಯ ಕ್ರಿಕೆಟ್ (Indian Cricket) ಇತಿಹಾಸದಲ್ಲಿ 2ನೇ ಬಾರಿಗೆ ಅಭಿಮಾನಿಗಳಿಗೆ ಅತಿ ದೊಡ್ಡ ರಸದೌತಣ ಸಿಗಲಿದೆ. ಮುಂದಿನ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 3, 2026 ರಂದು ಟೀಮ್ ಇಂಡಿಯಾದ ಎರಡು ವಿಭಿನ್ನ ಬಲಿಷ್ಠ ತಂಡಗಳು ಏಕಕಾಲದಲ್ಲಿ ಎರಡು ಬೇರೆ ಬೇರೆ ದೇಶಗಳಲ್ಲಿ ಮೈದಾನಕ್ಕಿಳಿಯುವ ಸಾಧ್ಯತೆ ಇದೆ. ಇದರೊಂದಿಗೆ ಕ್ರಿಕೆಟ್ ಪ್ರೇಮಿಗಳಿಗೆ ಒಂದೇ ದಿನ ಭಾರತದ ಎರಡು ಅಂತರರಾಷ್ಟ್ರೀಯ ಪಂದ್ಯಗಳನ್ನು ನೇರವಾಗಿ ವೀಕ್ಷಿಸುವ ಅದ್ಭುತ ಅವಕಾಶ ಸಿಗಲಿದೆ. ಬಿಸಿಸಿಐನ (BCCI) ಬಲಿಷ್ಠ ಬೆಂಚ್ ಸ್ಟ್ರೆಂತ್ ಹಾಗೂ ಏಷ್ಯನ್ ಗೇಮ್ಸ್ (Asian Games) ಮತ್ತು ವೆಸ್ಟ್ ಇಂಡೀಸ್ (West Indies) ಸರಣಿಯ ವೇಳಾಪಟ್ಟಿ ಒಮ್ಮೆಗೆ ಬಂದಿರುವುದರಿಂದ ಈ ಅಪರೂಪದ ಸನ್ನಿವೇಶ ಸೃಷ್ಟಿಯಾಗಿದೆ.














