Last Updated:
2023ರ ಏಕದಿನ ವಿಶ್ವಕಪ್ ಫೈನಲ್‌ನ ನಂತರ ಬುಮ್ರಾ ಈ ಸ್ವರೂಪದಲ್ಲಿ ಕೆಲವೇ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಭಾರತ ತಂಡ 2027ರ ವಿಶ್ವಕಪ್ ಗೆಲ್ಲುವ ಹಠ ಹೊಂದಿದೆ. ಆದರೆ ತಂಡದ ಬೌಲಿಂಗ್ ಆದರ ಸ್ಥಂಭವಾಗಿರುವ ಬುಮ್ರಾ ಗಾಯ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ.
ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡದ ಬೌಲಿಂಗ್‌ನ ಬೆನ್ನೆಲುಬಾಗಿದ್ದಾರೆ, ಆದರೆ ಗಾಯಗಳಿಂದಾಗಿ ಅವರು ತಮ್ಮ ಫಿಟ್‌ನೆಸ್‌ನಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಬುಮ್ರಾ ಅವರ ಕೆಲಸದ ಹೊರೆ ನಿರ್ವಹಣೆಯನ್ನು ಬಿಸಿಸಿಐ ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದರೂ, ಅವರು ಒಂದು ಸರಣಿ ಆಡುತ್ತಿದ್ದಂತೆ ಮತ್ತೆ ಮತ್ತೆ ಗಾಯಗೊಂಡು ಮುಂದಿನ ಸರಣಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ವಿಶಿಷ್ಟ ಆಕ್ಷನ್ ಮತ್ತು ನಿಖರವಾದ ಯಾರ್ಕರ್‌ಗಳಿಂದ, ಬುಮ್ರಾ ಅವರು ಸಾಕಷ್ಟು ಯಶಸ್ಸನ್ನು ಸಾಧಿಸಿದ್ದಾರೆ. ಆದರೆ ಅದೇ ಆ್ಯಕ್ಷನ್ ಅವರ ಕರಿಯರ್ಗೆ ಕಂಟಕವಾಗುತ್ತಿದೆ. ಪದೇ ಪದೇ ಗಾಯಗೊಳ್ಳಲು ಅದೂ ಒಂದು ಕಾರಣವಾಗಿದೆ. 2023ರ ಏಕದಿನ ವಿಶ್ವಕಪ್ ಫೈನಲ್‌ನ ನಂತರ ಬುಮ್ರಾ ಈ ಸ್ವರೂಪದಲ್ಲಿ ಕೆಲವೇ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಭಾರತ ತಂಡ 2027ರ ವಿಶ್ವಕಪ್ ಗೆಲ್ಲುವ ಹಠ ಹೊಂದಿದೆ. ಆದರೆ ತಂಡದ ಬೌಲಿಂಗ್ ಆಧಾರ ಸ್ತಂಭವಾಗಿರುವ ಬುಮ್ರಾ ಗಾಯ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ.
2023 ರ ಏಕದಿನ ವಿಶ್ವಕಪ್ ನಂತರ, ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪರ ಅತಿ ಕಡಿಮೆ ಏಕದಿನ ಪಂದ್ಯಗಳನ್ನು ಆಡಿದ್ದಾರೆ. ನವೆಂಬರ್ 19, 2023 ರಂದು ವಿಶ್ವಕಪ್ ಫೈನಲ್ ಆಡಿದ್ದ ಬುಮ್ರಾ ಆ ನಂತರ ತಂಡಕ್ಕೆ ಮರಳಿದ್ದು 2026ರ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ. ಇದರರ್ಥ ಈ 970 ದಿನಗಳ ಅವಧಿಯಲ್ಲಿ ಅವರು ಕೇವಲ ಮೂರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಈ ಅವಧಿಯಲ್ಲಿ, ಭಾರತ ತಂಡ ಒಟ್ಟು 29 ಏಕದಿನ ಪಂದ್ಯಗಳನ್ನು ಆಡಿದೆ. ಹೀಗಾಗಿ, ಭಾರತದ ಯಾರ್ಕರ್ ಒಟ್ಟು 26 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಇಷ್ಟೊಂದು ಸೀಮಿತ ಲಭ್ಯತೆಯೊಂದಿಗೆ ಬುಮ್ರಾ ಟೀಮ್ ಇಂಡಿಯಾ 2027 ರ ವಿಶ್ವಕಪ್ ಗೆಲ್ಲಲು ಸಹಾಯ ಮಾಡಲು ಸಾಧ್ಯವಾಗುತ್ತದೆಯೇ? ಕೆಲಸದ ಹೊರೆ ನಿರ್ವಹಣೆಯ ಹೊರತಾಗಿಯೂ ಬುಮ್ರಾ ಪೂರ್ಣ ಫಿಟ್ನೆಸ್ ಸಾಧಿಸಲು ಏಕೆ ಸಾಧ್ಯವಾಗುತ್ತಿಲ್ಲ? ಎಂಬ ಪ್ರಶ್ನೆಗಳು ಉದ್ಭವಿಸಲು ಶುರು ಮಾಡಿವೆ.
ಏಕದಿನ ಪಂದ್ಯಗಳಲ್ಲಿ ಮಾತ್ರವಲ್ಲದೆ, ಗಾಯ ಮತ್ತು ಕೆಲಸದ ಹೊರೆ ನಿರ್ವಹಣೆಯಿಂದಾಗಿ ಜಸ್ಪ್ರೀತ್ ಬುಮ್ರಾ ಟೆಸ್ಟ್ ಮತ್ತು ಟಿ20 ಸ್ವರೂಪಗಳಿಂದ ನಿರಂತರವಾಗಿ ಹೊರಗುಳಿದಿದ್ದಾರೆ. 2023 ರಿಂದ ಬುಮ್ರಾ ಅವರ ಲಭ್ಯತೆಯನ್ನು ಪರಿಗಣಿಸಿ, ಅವರು ಟೀಮ್ ಇಂಡಿಯಾ ಪರ ಕೇವಲ 22 ರೆಡ್-ಬಾಲ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ, ಆದರೆ ಈ ಅವಧಿಯಲ್ಲಿ ಭಾರತ ತಂಡ ಒಟ್ಟು 27 ಟೆಸ್ಟ್ ಪಂದ್ಯಗಳನ್ನು ಆಡಿದೆ. ಅಂದರೆ ಅವರನ್ನು ಐದು ಟೆಸ್ಟ್ ಪಂದ್ಯಗಳಿಗೆ ಹೊರಗಿಡಲಾಗಿದೆ.
ಟಿ20 ಕ್ರಿಕೆಟ್ ಸ್ವರೂಪದ ಬಗ್ಗೆ ಹೇಳುವುದಾದರೆ, ಅವರಿಗೆ ಅಲ್ಲಿಯೂ ನಿರಂತರವಾಗಿ ವಿಶ್ರಾಂತಿ ನೀಡಲಾಗುತ್ತಿದೆ. 2023ರ ಏಕದಿನ ವಿಶ್ವಕಪ್ ನಂತರ, ಟೀಮ್ ಇಂಡಿಯಾ ಒಟ್ಟು 78 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಬುಮ್ರಾ ಕೇವಲ 33 ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಅಂದರೆ ಗಾಯ ಅಥವಾ ಕೆಲಸದ ಹೊರೆ ನಿರ್ವಹಣೆಯಿಂದಾಗಿ ಅವರು 45 ಟಿ20 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಅವರು ಆಡಿರುವ ಬಹುತೇಕ ಟಿ20 ವಿಶ್ವಕಪ್ ಹಾಗೂ ಏಷ್ಯಾಕಪ್ನಲ್ಲಿ ಬಂದಿವೆ.
ಬುಮ್ರಾ ಅವರ ಗಾಯವು ಅವರನ್ನು ಕಾಡುತ್ತಿರುವುದು ಮಾತ್ರವಲ್ಲದೆ, ತಂಡದ ನಿರ್ವಹಣೆಗೂ ಕಳವಳವನ್ನುಂಟುಮಾಡುತ್ತಿದೆ. ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದ ಏಕದಿನ ಸರಣಿಯ ಸಮಯದಲ್ಲಿ ಅವರು ಮೊಣಕಾಲಿನ ಗಾಯದಿಂದ ಬಳಲುತ್ತಿದ್ದರು. ಅವರು ಫಿಟ್ ಆಗಿದ್ದರೆ ಶ್ರೀಲಂಕಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಆಡಬೇಕಿತ್ತು. ಬಿಸಿಸಿಐ ಅವರನ್ನ 15ರ ತಂಡಕ್ಕೆ ಆಯ್ಕೆ ಮಾಡಿತ್ತು. ಆದರೆ ಭಾರತೀಯ ತಂಡಕ್ಕೆ ಆಯ್ಕೆಯಾಗಿದ್ದರು, ಆದರೆ ಸಂಪೂರ್ಣ ಫಿಟ್ನೆಸ್ ಸಾಧಿಸಿಲ್ಲ ಎಂದು ಅವರಿಗೆ ವಿಶ್ರಾಂತಿ ನೀಡಿ, ಅವರ ಸ್ಥಾನದಲ್ಲಿ, ಜಮ್ಮು ಮತ್ತು ಕಾಶ್ಮೀರದ ಆಕಿಬ್ ನಬಿ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
ಒಂದು ಸರಣಿಯಲ್ಲಿ ಆಡುವುದು, ಮತ್ತೊಂದರಲ್ಲಿ ಹೊರಗುಳಿಯುವುದಿರಿಂದ ಬುಮ್ರಾ ಸ್ವತಃ ಲಯ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಫಿಟ್ನೆಸ್ ಮ್ಯಾನೇಜ್ಮೆಂಟ್, ಟೀಮ್ ಮ್ಯಾನೇಜ್ಮೆಂಟ್ 2027ರ ಏಕದಿನ ವಿಶ್ವಕಪ್ಗೂ ಮುನ್ನ ಬುಮ್ರಾರನ್ನ ಸಂಪೂರ್ಣವಾಗಿ ಫಿಟ್ ಆಗುವಂತೆ ನೋಡಿಕೊಳ್ಳಲು ಯೋಜನೆ ರೂಪಿಸಿಕೊಳ್ಳಬೇಕಿದೆ.
Aug 03, 2026 11:23 PM IST














