Kichcha Sudeepa: ಬಿಗ್ ಬಾಸ್’ ಪೋಸ್ಟ್‌ನಲ್ಲಿ ಕಿಚ್ಚನ ಹೊಸ ಅವತಾರ; ವೈರಲ್ ಆಯ್ತು ಸ್ಟೈಲ್ | | ACTPnews

ಸುದೀಪ್ ಬಿಗ್ ಬಾಸ್ ಪೋಸ್ಟ್; ಇದರಲ್ಲಿದೆ ಸೂಪರ್ ಸ್ಟೈಲ್!


Last Updated:

ಕಿಚ್ಚ ಸುದೀಪ್ ಈಗೊಂದು ಪೋಸ್ಟ್ ಹಾಕಿದ್ದಾರೆ. ಇದು ಬಿಗ್ ಬಾಸ್ ಸೀಸನ್-13 ರ ಬಗ್ಗೇನೆ ಇದೆ. ಇದರ ಇತರ ವಿವರ ಇಲ್ಲಿದೆ ಓದಿ.

ಸುದೀಪ್ ಬಿಗ್ ಬಾಸ್ ಪೋಸ್ಟ್; ಇದರಲ್ಲಿದೆ ಸೂಪರ್ ಸ್ಟೈಲ್!
ಸುದೀಪ್ ಬಿಗ್ ಬಾಸ್ ಪೋಸ್ಟ್; ಇದರಲ್ಲಿದೆ ಸೂಪರ್ ಸ್ಟೈಲ್!

ಬಿಗ್ ಬಾಸ್ ಸೀಸನ್-13 (Bigg Boss Season-13) ರ ಫಸ್ಟ್ ಪ್ರೋಮೋ ರಿಲೀಸ್ ಆಗಿದೆ. ಎಲ್ಲರೂ ಇದನ್ನ ಮೆಚ್ಚಿಕೊಳ್ಳುತ್ತಿದ್ದಾರೆ. ಸೂಪರ್ ಹೇರ್ ಸ್ಟೈಲ್ (Super Hair Style) ಅಂದೋರು ಇದ್ದಾರೆ. ಆದರೆ, ಸುದೀಪ್ (Sudeepa) ಯಾವುದಕ್ಕೂ ರಿಯಾಕ್ಟ್ ಮಾಡಿದಂತೆ ಇಲ್ಲ. ಅಷ್ಟರಲ್ಲಿಯೇ ಪ್ರೋಮೋ ರಿಲೀಸ್ (Promo Release) ಆದ ಎರಡನೇ ದಿನವೇ ಮಧ್ಯಾಹ್ನದ ಹೊತ್ತಿಗೆ ಒಂದು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ “ಶುರು ಮಾಡೋಣವಾ” ಅಂತಲೇ ಹೇಳಿದ್ದಾರೆ. ಕಪ್ಪು ಉಡುಗೆ ತೊಟ್ಟ ಒಂದು ಚೆಂದದ ಫೋಟೋ ಕೂಡ ಹಂಚಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದೀಪ್ ಪೋಸ್ಟ್

ಸುದೀಪ್ ಇನ್‌ಸ್ಟಾಗ್ರಾಮ್ ಅಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಮೊದಲು ಎಕ್ಸ್ ಖಾತೆಯಲ್ಲಿ ಮಾತ್ರವೇ ಇವರು ಫ್ಯಾನ್ಸ್ ಜೊತೆಗೆ ಕನೆಕ್ಟ್ ಆಗಿರ್ತಾ ಇದ್ದರು.
kichcha sudeepa post on bigg boss season 13 on social media

ಸುದೀಪ್ ಪೋಸ್ಟ್

(ಚಿತ್ರ ಕೃಪೆ: ಸುದೀಪ್ ಇನ್‌ಸ್ಟಾಗ್ರಾಮ್)

ಆದರೆ, ಕಳೆದ ಕೆಲವು ವರ್ಷಗಳಿಂದ ಸುದೀಪ್ ಇನ್‌ಸ್ಟಾಗ್ರಾಮ್ ಅಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಪೋಸ್ಟ್ ಹಾಕ್ತಾನೆ ಇರ್ತಾರೆ. ಹಾಗೆ ಬಿಗ್ ಬಾಸ್ ಬಗೆಗಿನ ಒಂದು ಪೋಸ್ಟ್ ಈಗ ಹಾಕಿದ್ದಾರೆ.

ಶುರು ಮಾಡೋಣವಾ

ಬಿಗ್ ಬಾಸ್ ಪ್ರೋಮೋದಲ್ಲಿ ಈ ಒಂದು ಮಾತು ಹೇಳಿದ್ದಾರೆ. ಒಂದು ಮನೆ, ಒಂದು ಅವಕಾಶ, ಸಾವಿರಾರು ಕನಸು ಅನ್ನೋ ಮಾತು ಹೇಳ್ತಾರೆ.

ಕೊನೆಯಲ್ಲಿ “ಶುರು ಮಾಡೋಣವಾ” ಅಂತಲೂ ಹೇಳ್ತಾರೆ. ಈ ಒಂದು ಎರಡು ಪದವನ್ನೆ ಮತ್ತೊಮ್ಮೆ ಇಲ್ಲಿ ಬರೆದುಕೊಂಡಿದ್ದಾರೆ.

ಸ್ಪೆಷಲ್ ಫೋಟೋ

ಸುದೀಪ್ ಸ್ಪೆಷಲ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದು ಸಖತ್ ಆಗಿಯೇ ಇದೆ. ಒಂದು ರೀತಿ ಸೆಲ್ಯೂಟ್ ಹೊಡೆದ ರೀತಿನೇ ಇದೆ.

ಆದರೆ, ಇದು ಸೆಲ್ಯೂಟ್ ಅಲ್ಲ ಬಿಡಿ. ಅಥವಾ ಇದು ಕಿಚ್ಚನ ಸೆಲ್ಯೂಟ್ ಸ್ಟೈಲೂ ಇರಬಹುದು. ಆ ರೀತಿನೇ ಇದು ಇದೆ. ಬಿಗ್ ಬಾಸ್ ಅಲ್ಲಿ ಪ್ರತಿ ಸಲವು ಒಂದೊಂದು ಸ್ಟೈಲ್ ಮೆಂಟೇನ್ ಮಾಡ್ತಾರೆ. ಈ ಸಲ ಇದನ್ನ ಮೆಂಟೇನ್ ಮಾಡ್ತಾರೆ ಅನಿಸುತ್ತದೆ.

kichcha sudeepa post on bigg boss season 13 on social media

ಕಪ್ಪು ಬಣ್ಣದ ಕಾಸ್ಟೂಮ್ ಯಾಕೆ
ಸೆಪ್ಟೆಂಬರ್‌ನಿಂದ ಶುರು

ಬಿಗ್ ಬಾಸ್ ಸೀಸನ್-13 ಮುಂದಿನ ತಿಂಗಳು ಶುರು ಆಗುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿಯೇ ಇದು ಪ್ರಸಾರ ಆಗುತ್ತಿದೆ. ಶ್ರೀಸಾಮಾನ್ಯರು ಹಾಗೂ ಸೆಲೆಬ್ರಿಟಗಳು ಈ ಸಲದ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆಗಿಳಿಯಲಿದ್ದಾರೆ.

ಬಿಗ್ ಬಾಸ್ ಸೀಸನ್-13 ರಲ್ಲಿ ಯಾರೆಲ್ಲ ಸ್ಪರ್ಧಿಗಳಾಗಿ ಬರ್ತಾರೆ ಅನ್ನುವ ಕುತೂಹಲ ಇದ್ದೇ ಇದೆ. ಎಂದಿನಂತೆ ಒಂದಷ್ಟು ಹೆಸರುಗಳು ಈಗಲೂ ಓಡಾಡ್ತಿವೆ. ಅದು ಬಿಟ್ಟರೆ, ಬಿಗ್ ಬಾಸ್ ಮತ್ತು ಹಳ್ಳಿ ಪವರ್ ಬೇರೆ ಬೇರೆ ಚಾನೆಲ್ ಅಲ್ಲಿ ಒಂದೇ ಸಮಯಕ್ಕೆ ಬರ್ತಿವೆ ಅನ್ನುವ ಸುದ್ದಿನೂ ಇದೆ.

ಹಳ್ಳಿ ಪವರ್ ಶೋ

ಹಳ್ಳಿ ಪವರ್ ಶೋ ಆಗಸ್ಟ್-8 ರಿಂದಲೇ ಶುರು ಆಗುತ್ತಿದೆ. ಪ್ರತಿ ದಿನ ರಾತ್ರಿ 9.30ಕ್ಕೆ ಈ ಶೋ ಪ್ರಸಾರ ಆಗುತ್ತಿದೆ. ಇದು ಜೀ ಕನ್ನಡ ಚಾನೆಲ್ ಅಲ್ಲಿ ಟೆಲಿಕಾಸ್ಟ್ ಆಗುತ್ತದೆ.

ಬಿಗ್ ಬಾಸ್ ಸೀಸನ್-13 ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ. ಇದು ಕೂಡ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತದೆ ಅನ್ನುವ ಸುದ್ದಿನು ಇದೆ. ಯಾವುದಕ್ಕೂ ಸದ್ಯ ಕಾದುನೋಡ್ಬೇಕಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed