Last Updated:
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಹಾಗೂ 2026 ರ ಏಷ್ಯನ್ ಗೇಮ್ಸ್ಗಾಗಿ ಬಿಸಿಸಿಐ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಈ ಭಾರತ ತಂಡದಲ್ಲಿ ಐಪಿಎಲ್ 2026 ರ ಆವೃತ್ತಿಯಲ್ಲಿ ಆಡುವ 9 ತಂಡಗಳ ಆಟಗಾರರು ಸೇರಿದ್ದಾರೆ.
ಐಸಿಸಿ (ICC) 2026 ರ ಟಿ20 ವಿಶ್ವಕಪ್ (World Cup) ನಂತರ, ಭಾರತ (India) ತಂಡವು ತನ್ನ ಮುಂದಿನ ಸರಣಿಯನ್ನು ಐರ್ಲೆಂಡ್ (Ireland) ಪ್ರವಾಸದಲ್ಲಿ ಆಡಲಿದೆ. ಭಾರತ ಮತ್ತು ಐರ್ಲೆಂಡ್ ಜೂನ್ 26 ರಿಂದ ಎರಡು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದಾದ ನಂತರ, ಟೀಮ್ ಇಂಡಿಯಾ ಜುಲೈ 1 ರಿಂದ ಇಂಗ್ಲೆಂಡ್ (England) ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಬಿಸಿಸಿಐ (BCCI) ಜೂನ್ 6 ರಂದು ಈ ಎರಡೂ ಟಿ20 ಸರಣಿಗಳು ಮತ್ತು 2026 ರ ಏಷ್ಯನ್ ಗೇಮ್ಸ್ (Asian Games) ಗೆ ಟೀಮ್ ಇಂಡಿಯಾದ ತಂಡವನ್ನು ಘೋಷಿಸಿತು. ಇದರಲ್ಲಿ ಕೆಲವು ಮಹತ್ವದ ಬದಲಾವಣೆಗಳು ಸೇರಿವೆ.
ಐಪಿಎಲ್ 2026 ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಅವಕಾಶ ಸೇರಿದಂತೆ, ಕೆಲವರು ಆಟಗಾರರನ್ನು ಕೈಬಿಡಲಾಗಿದೆ. ಟೀಮ್ ಇಂಡಿಯಾದ ತಂಡವನ್ನು ನೋಡಿದಾಗ, 10 ಐಪಿಎಲ್ ತಂಡಗಳಲ್ಲಿ 9 ತಂಡಗಳು ಟೀಮ್ ಇಂಡಿಯಾದಲ್ಲಿ ಕನಿಷ್ಠ ಒಬ್ಬ ಆಟಗಾರನನ್ನು ಹೊಂದಿವೆ. ಆದರೆ ಟೀಮ್ ಇಂಡಿಯಾನಲ್ಲಿ ಆಟಗಾರನಿಲ್ಲದ ಏಕೈಕ ತಂಡವೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆರ್‌ಸಿಬಿ ಸತತತ ಎರಡು ಬಾರಿಗೆ ಐಪಿಎಲ್ ಚಾಂಪಿಯನ್ ಆಗಿದೆ.
ಟಿ20 ಸರಣಿ ಮತ್ತು ಏಷ್ಯನ್ ಗೇಮ್ಸ್ 2026 ರ ಟೂರ್ನಿಗಾಗಿ ಘೋಷಿಸಲಾದ ಟೀಮ್ ಇಂಡಿಯಾದಲ್ಲಿ, ಐಪಿಎಲ್ 2026 ರ ಆವೃತ್ತಿಯ ತಂಡಗಳಿಗೆ ಹೋಲಿಸಿದರೆ ಸನ್‌ರೈಸರ್ಸ್ ಹೈದರಾಬಾದ್ ಹೆಚ್ಚಿನ ಆಟಗಾರರಿದ್ದಾರೆ. ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಭಾರತ ತಂಡಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚುವರಿಯಾಗಿ, ಆರು ತಂಡಗಳು ಟೀಮ್ ಇಂಡಿಯಾದಿಂದ ತಲಾ ಇಬ್ಬರು ಆಟಗಾರರನ್ನು ಪಡೆದಿವೆ. ಪಂಜಾಬ್ ಕಿಂಗ್ಸ್ ತಂಡದಿಂದ ಹೊಸ ಟಿ20 ನಾಯಕ ಶ್ರೇಯಸ್ ಅಯ್ಯರ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಸೇರಿಸಿಕೊಂಡರೆ, ರಾಜಸ್ಥಾನ್ ರಾಯಲ್ಸ್ನಿಂದ ವೈಭವ್ ಸೂರ್ಯವಂಶಿ ಮತ್ತು ರವಿ ಬಿಷ್ಣೋಯ್ ಸ್ಥಾನ ಪಡೆದಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ಕೂಡ ಟೀಮ್ ಇಂಡಿಯಾದಲ್ಲಿದ್ದಾರೆ. ಇನ್ನೂ ಡೆಲ್ಲಿ ಕ್ಯಾಪಿಟಲ್ಸ್‌ನ ಅಕ್ಸರ್ ಪಟೇಲ್ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ನ ವೇಗದ ಬೌಲರ್ ಪ್ರಿನ್ಸ್ ಯಾದವ್ ಅವರ ಹೆಸರುಗಳನ್ನು ಸೇರಿಸಲಾಗಿದೆ. ಆದರೆ, ಎಲ್ಲಿಯೂ ಡಬಲ್ ಚಾಂಪಿಯನ್ ಆರ್‌ಸಿಬಿ ಆಟಗಾರರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಇದು ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಐಪಿಎಲ್ 2026 ರ ಅವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿ, ತಮ್ಮ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿತು. ಈ ಆವೃತ್ತಿಯಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಬ್ಯಾಟಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿದರು. ಪಾಟೀದಾರ್ 15 ಪಂದ್ಯಗಳಲ್ಲಿ 501 ರನ್ ಗಳಿಸಿದರು.
ಇದು ರಜತ್ ಪಾಟೀದಾರ್ ಅವರನ್ನು ಭಾರತ ಟಿ20 ತಂಡಕ್ಕೆ ಆಯ್ಕೆಯಾಗುತ್ತಾರೆ ಎಂಬ ಭರವಸೆಯನ್ನು ಹುಟ್ಟು ಹಾಕಿತ್ತು. ತಿಲಕ್ ವರ್ಮಾ ಬದಲಿಗೆ ರಜತ್ ಪಾಟೀದಾರ್ ಆಯ್ಕೆಯಾಗಬಹುದು ಎಂಬ ಚರ್ಚೆಗಳು ನಡೆದಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಜೂನ್ 9 ರಿಂದ ಶ್ರೀಲಂಕಾದಲ್ಲಿ ಪ್ರಾರಂಭವಾಗುವ ಎ-ತಂಡದ ಏಕದಿನ ತ್ರಿಕೋನ ಸರಣಿಗೆ ಟೀಮ್ ಇಂಡಿಯಾ ತಂಡದಲ್ಲಿ ಒಬ್ಬ ಆರ್‌ಸಿಬಿ ಆಟಗಾರನನ್ನು ಸೇರಿಸಿಲ್ಲ.













