Last Updated:
ಸೆಪ್ಟೆಂಬರ್ 3 ರಂದು, ಬಿಸಿಸಿಐ ಮುಂಬೈನಲ್ಲಿ ಸಭೆ ಕರೆದಿತ್ತು. ಟೀಮ್ ಇಂಡಿಯಾದ ಎಲ್ಲಾ ಉನ್ನತ ಸದಸ್ಯರು ಹಾಜರಿದ್ದರು. ಈ ವೇಳೆ ಟೀಮ್ ಇಂಡಿಯಾ ಭವಿಷ್ಯದ ಬಗ್ಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಭಾರತೀಯ ಕ್ರಿಕೆಟ್(Cricket)ನ ಭವಿಷ್ಯದ ಬಗ್ಗೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಸಿಸಿಐ (BCCI) ಸಭೆ ಕರೆದಿತ್ತು. ಬಿಸಿಸಿಐ ಮಹತ್ವದ ಸಭೆಯನ್ನು ಮುಂಬೈ(Mumbai)ನಲ್ಲಿ ನಡೆಸಿತು. ಟೀಮ್ ಇಂಡಿಯಾ (Team India) ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir), ಏಕದಿನ (ODI) ಮತ್ತು ಟೆಸ್ಟ್ (Test) ನಾಯಕ ಶುಭಮನ್ ಗಿಲ್ (Shubman Gill), ಟಿ20 ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ (VVS Laxman) ಕೂಡ ಈ ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಟೀಮ್ ಇಂಡಿಯಾದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ (Ajit Agarkar) ಸಭೆಯಲ್ಲಿ ಭಾಗವಹಿಸಿರಲಿಲ್ಲ.














