Tara Anuradha: ತಾರಮ್ಮನ ಗುರು ಯಾರು? ಹಾಸ್ಯ ಪಾತ್ರ ಕೊಟ್ಟವರು ಯಾರು ಗೊತ್ತಾ? | | ACTPnews

ನಟಿ ತಾರಾ ಗುರು ಯಾರು; ಹಾಸ್ಯ ಪಾತ್ರ ಕೊಟ್ಟವರು ಯಾರು?


Last Updated:

ತಾರಾ ಅನುರಾಧಾ ಅವರು ಫಸ್ಟ್ ಟೈಮ್ ಜಡ್ಜ್ ಪಾತ್ರ ಮಾಡಿದ್ದಾರೆ. ಉತ್ತರ ಅನ್ನುವ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇದರ ನಡುವೆ ತಮ್ಮ ಗುರುಗಳು ಯಾರು ಅನ್ನೋದನ್ನು ತಾರಾ ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

ನಟಿ ತಾರಾ ಗುರು ಯಾರು; ಹಾಸ್ಯ ಪಾತ್ರ ಕೊಟ್ಟವರು ಯಾರು?
ನಟಿ ತಾರಾ ಗುರು ಯಾರು; ಹಾಸ್ಯ ಪಾತ್ರ ಕೊಟ್ಟವರು ಯಾರು?

ಸ್ಯಾಂಡಲ್‌ವುಡ್‌ನಲ್ಲಿ (Sandalwood) ಅಮ್ಮಂದಿರ ಪಾತ್ರಗಳನ್ನ ಮಾಡುವವರಲ್ಲಿ ನಟಿ ತಾರಾ ಅವರೂ ಒಬ್ಬರು. ಬೇಡಿಕೆಯಲ್ಲಿರೋ ಅಮ್ಮ ಅಂದ್ರು ತಪ್ಪಿಲ್ಲ. ಇವರು ಫಸ್ಟ್ ಟೈಮ್ ಇದೀಗ ಜಡ್ಜ್ ಪಾತ್ರ (Judge Role) ಮಾಡಿದ್ದಾರೆ. ಡೈರೆಕ್ಟರ್ ದಿನೇಶ್ ಬಾಬು (Dinesh Babu) ಅವರ ಸಿನಿಮಾದಲ್ಲಿಯೇ ಈ ಒಂದು ರೋಲ್ ಮಾಡಿದ್ದಾರೆ. ಈ ಚಿತ್ರದ ವಿಶೇಷ ಸಂದರ್ಭದಲ್ಲಿಯೇ ತಾರಾ (Tara) ಅವರು ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಹೇಳಿಕೊಂಡಿದ್ದಾರೆ. ತಮ್ಮ ಗುರು ಯಾರು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ತಮ್ಮಿಂದ ಹಾಸ್ಯ ಪಾತ್ರ ಮಾಡಿಸಿದ ಆ ಡೈರೆಕ್ಟರ್ ಯಾರು ಅನ್ನೋದನ್ನು ತಿಳಿಸಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ತಾರಾ ಗುರು ಯಾರು

ಡೈರೆಕ್ಟರ್ ದಿನೇಶ್ ಬಾಬು ಅವರನ್ನೆ ತಾರಾ ಅವರು ಮೆಂಟರ್ ಮತ್ತು ಗುರು ಅಂತ ಹೇಳೋದು. ಹೆಂಡ್ತಿಗೆ ಹೇಳ್ಬೇಡಿ ಚಿತ್ರದಲ್ಲಿ ತಾರಾ ಫಸ್ಟ್ ಟೈಮ್ ಇವರ ಜೊತೆಗೆ ಕೆಲಸ ಮಾಡಿದ್ದಾರೆ.
tara anuradha share unknown facts of director dinesh babu

ಫಸ್ಟ್ ಟೈಮ್ ಜಡ್ಜ್

ಈ ಚಿತ್ರ ಆದ್ಮೆಲೆ ಹಲವು ಸಿನಿಮಾಗಳನ್ನ ಮಾಡಿದ್ದಾರೆ. ಇನ್ನೂ ಒಂದು ವಿಶೇಷ ಅಂದ್ರೆ, ತಾರಾ ಅವರು ಸೀರಿಯಸ್ ಪಾತ್ರಗಳನ್ನೆ ಮಾಡಿದ್ದಾರೆ. ಆದರೆ, ಇವರಿಂದಲೂ ಹಾಸ್ಯ ಪಾತ್ರ ಮಾಡಿಸಬಹುದು ಅನ್ನುವುದನ್ನ ದಿನೇಶ್ ಬಾಬು ಅವರು ತೋರಿಸಿ ಕೊಟ್ಟಿದ್ದಾರೆ.

2 ಗಂಟೆ ಮೊದಲು

ತಾರಾ ಅವರು ಒಮ್ಮೆ ಚಿತ್ರೀಕರಣದ ಸ್ಪಾಟ್‌ಗೆ 2 ಗಂಟೆ ಮೊದಲು ಬಂದಿದ್ದರು. ಆದರೆ, ದಿನೇಶ್ ಬಾಬು ಅವರು ಇದಕ್ಕೂ ತಾರಾ ಅವರ ಜೊತೆಗೆ ಜಗಳ ಮಾಡಿದರು.

ನಾನು ಒಂದೇ ಒಂದು ದಿನವೂ ಕಲಾವಿದರನ್ನ ಕಾಯಿಸಿಲ್ಲ. ಎರಡು ಗಂಟೆ ನಿಮ್ಮನ್ನ ಕಾಯಿಸೋದು ಎಷ್ಟು ಸರಿ ಹೇಳಿ? ಅದಕ್ಕೇನೆ ನೀವು ಯಾಕೆ ಇಷ್ಟು ಬೇಗ ಬಂದ್ರಿ ಅಂತಲೂ ದಿನೇಶ್ ಬಾಬು ಅವರು ತಾರಾ ಬಗ್ಗೆ ಸಿಟ್ಟು ಮಾಡಿಕೊಂಡಿದ್ದರು.

ಸಣ್ಣ ಭಯ

ದಿನೇಶ್ ಬಾಬು ಅವರು ತುಂಬಾನೆ ಸ್ಟ್ರಿಕ್ಟ್ ಆಗಿದ್ದಾರೆ. ಟೈಮ್ ಅಂದ್ರೆ ಟೈಮ್ ನೋಡಿ. ಆ ರೀತಿನೆ ಕೆಲಸ ಮಾಡುತ್ತಿದ್ದರು. ಬೆಳಗ್ಗೆ 7 ಗಂಟೆಗೆ ಮೊದಲ ಶಾಟ್ ಅಂದ್ರೆ ಆ ಟೈಮ್‌ಗೆ ತೆಗೆದು ಬಿಡ್ತಾ ಇದ್ದರು.

tara anuradha share unknown facts of director dinesh babu

ತಾರಾ ಗುರು

ಕೆಲವೊಮ್ಮೆ ಹೇಳಿದ ಸಮಯಕ್ಕೂ ಅರ್ಧ ಗಂಟೆ ಮುಂಚೇನೆ ಶಾಟ್ ಮುಗಿಸಿ ಬಿಡ್ತಾ ಇದ್ದರು. ವಿಷ್ಣುವರ್ಧನ್ ಸೇರಿದಂತೆ ಎಲ್ಲರಿಗೂ ದಿನೇಶ್ ಬಾಬು ಅವರ ಬಗ್ಗೆ ಒಂದು ಗೌರವ ಇತ್ತು.

ಫಸ್ಟ್ ಟೈಮ್ ಜಡ್ಜ್

ತಾರಾ ಅವರು ಈ ಹಿಂದೆ ಎಲ್ಲ ರೀತಿಯ ಪಾತ್ರ ಮಾಡಿದ್ದಾರೆ. ಆದರೆ, ಜಡ್ಜ್ ಪಾತ್ರ ಮಾತ್ರ ಮಾಡಿರಲಿಲ್ಲ. ನೆಚ್ಚಿನ ಡೈರೆಕ್ಟರ್ ದಿನೇಶ್ ಬಾಬು ಅವರ “ಉತ್ತರ” ಚಿತ್ರದಲ್ಲಿ ತಾರಾ ಅವರು ಈಗ ಜಡ್ಜ್ ರೋಲ್ ಮಾಡಿದ್ದಾರೆ.

ಎರಡು ಟ್ರೈಲರ್ ರಿಲೀಸ್

ದಿನೇಶ್ ಬಾಬು ಅವರ ಎರಡು ಸಿನಿಮಾಗಳ ಟ್ರೈಲರ್ ಒಟ್ಟಿಗೆ ರಿಲೀಸ್ ಆಗಿವೆ. ಇದರಲ್ಲಿ ತಾರಾ ಅವರು ಅಭಿನಯದ ಉತ್ತರ ಚಿತ್ರದ ಟ್ರೈಲರ್ ಕೂಡ ಇದೆ. ಅಭ್ಯಂಜನ ಚಿತ್ರವೂ ಇದೆ.

ಈ ಎರಡೂ ಚಿತ್ರವನ್ನ ದಿನೇಶ್ ಬಾಬು ಅವರೇ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರಗಳಲ್ಲಿ ದಿನೇಶ್ ಬಾಬು ಅವರು ವಿಭಿನ್ನವಾದ ಕತೆಗಳನ್ನೆ ಹೇಳುತ್ತಿದ್ದಾರೆ. ದಿನೇಶ್ ಬಾಬು ಅವರ ಈ ಚಿತ್ರದ ಟ್ರೈಲರ್ ರಿಲೀಸ್‌ಗೆ ಬಂದ ತಾರಾ ಅವರು ಮೇಲೆ ಹೇಳಿದ ಮಾತುಗಳನ್ನ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed