Dhurandhar 2: ಒಟಿಟಿಯಲ್ಲೂ ದಾಖಲೆ ಬರೆದ ‘ಧುರಂಧರ್ 2’! ರಣವೀರ್ ಸಿಂಗ್ ಸಿನಿಮಾ ನೋಡಿದ್ದು ಎಷ್ಟು ಕೋಟಿ ಜನ ಗೊತ್ತಾ? | | ACTPnews

ಧುರಂಧರ್ ದಿ ರಿವೇಂಜ್


Last Updated:

Dhurandhar 2: ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಈ ಬಹುನಿರೀಕ್ಷಿತ ಸಿನಿಮಾ ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾದ ಬಳಿಕ ವೀಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿದೆ.

ಧುರಂಧರ್ ದಿ ರಿವೇಂಜ್
ಧುರಂಧರ್ ದಿ ರಿವೇಂಜ್

ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿರುವ ಚಿತ್ರವೆಂದರೆ ಧುರಂಧರ್ ದಿ ರಿವೇಂಜ್ (Dhurandhar The Revenge) . ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಈ ಬಹುನಿರೀಕ್ಷಿತ ಸಿನಿಮಾ ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾದ ಬಳಿಕ ವೀಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ 50 ಮಿಲಿಯನ್ ವೀಕ್ಷಕರನ್ನು ಸೆಳೆಯುವ ಮೂಲಕ ಈ ಸಿನಿಮಾ ಭಾರತೀಯ OTT ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.

ಡಿಜಿಟಲ್ ವೇದಿಕೆಗಳಲ್ಲಿ ದಿನದಿಂದ ದಿನಕ್ಕೆ ಸ್ಪರ್ಧೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಒಂದು ಸಿನಿಮಾ ಇಷ್ಟೊಂದು ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ವೀಕ್ಷಕರನ್ನು ಸೆಳೆಯುವುದು ಅಪರೂಪದ ಸಾಧನೆಯಾಗಿದೆ. ಇದೇ ಕಾರಣಕ್ಕೆ ಧುರಂಧರ್: ದಿ ರಿವೇಂಜ್ ಈಗ ದೇಶದ ಮನರಂಜನಾ ಕ್ಷೇತ್ರದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ.

ಧುರಂಧರ್ ಚಿತ್ರದ ಮೊದಲ ಭಾಗವೂ ಡಿಜಿಟಲ್ ವೇದಿಕೆಯಲ್ಲಿ ಉತ್ತಮ ಯಶಸ್ಸು ಕಂಡಿತ್ತು. ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲೇ 32 ಮಿಲಿಯನ್ ವೀಕ್ಷಣೆಗಳನ್ನು ಪಡೆದು ಮೊದಲ ಭಾಗ ದಾಖಲೆ ನಿರ್ಮಿಸಿತ್ತು.

ಐದು ಭಾಷೆಗಳಲ್ಲಿ ಭರ್ಜರಿ ಪ್ರದರ್ಶನ

ಧುರಂಧರ್: ದಿ ರಿವೇಂಜ್ ಕೇವಲ ಹಿಂದಿ ಪ್ರೇಕ್ಷಕರಿಗೆ ಮಾತ್ರ ಸೀಮಿತವಾಗಿಲ್ಲ. ಈ ಸಿನಿಮಾ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ದೇಶದ ವಿವಿಧ ಭಾಗಗಳ ಸಿನಿಪ್ರಿಯರನ್ನು ಸೆಳೆಯುತ್ತಿದೆ.

ಜಿಯೋಹಾಟ್‌ಸ್ಟಾರ್ ಹಂಚಿಕೊಂಡ ಮಾಹಿತಿಯ ಪ್ರಕಾರ, ಚಿತ್ರದ ಒಟ್ಟು ವೀಕ್ಷಣಾ ಸಮಯದ ಸುಮಾರು 60 ಶೇಕಡಾ ಭಾಗ ಸ್ಮಾರ್ಟ್ ಟಿವಿ ಅಥವಾ ಕನೆಕ್ಟೆಡ್ ಟಿವಿಗಳಿಂದ ಬಂದಿದೆ.

ಬಿಡಿಲೈಟ್, ಸ್ಯಾಮ್‌ಸಂಗ್, ವಿಮಲ್, ಪೆಪ್ಸಿ ಸ್ಟಿಂಗ್, ಎಲ್‌ಜಿ, ಹೀರೋ ಎಕ್ಸ್‌ಟ್ರೀಮ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಸ್ವಿಗ್ಗಿ ಸೇರಿದಂತೆ ಅನೇಕ ಪ್ರಮುಖ ಕಂಪನಿಗಳು ಜಾಹೀರಾತು ಅಭಿಯಾನಗಳಲ್ಲಿ ಭಾಗವಹಿಸಿದ್ದವು. ಚಿತ್ರದ ಭರ್ಜರಿ ವೀಕ್ಷಣೆಗಳಿಂದ ಜಾಹೀರಾತು ಆದಾಯವೂ ಗಮನಾರ್ಹವಾಗಿ ಹೆಚ್ಚಿದೆ ಎನ್ನಲಾಗುತ್ತಿದೆ.

ರಣವೀರ್ ಸಿಂಗ್‌ಗೆ ಮತ್ತೊಂದು ದೊಡ್ಡ ಗೆಲುವು

ಬಾಲಿವುಡ್‌ನಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ರಣವೀರ್ ಸಿಂಗ್‌ಗೆ ‘ಧುರಂಧರ್: ದಿ ರಿವೇಂಜ್’ ಮತ್ತೊಂದು ಮಹತ್ವದ ಯಶಸ್ಸಾಗಿ ಪರಿಣಮಿಸಿದೆ. ಆದಿತ್ಯ ಧರ್‌ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್‌ ಸಿಂಗ್‌ ಜೊತೆಗೆ ಸಾರಾ ಅರ್ಜುನ್‌, ರಾಕೇಶ್‌ ಬೇಡಿ, ಅರ್ಜುನ್‌ ರಾಮ್‌ಪಾಲ್‌, ಸಂಜಯ್‌ ದತ್‌, ಅಕ್ಷಯ್‌ ಖನ್ನಾ ಮುಂತಾದವರು ನಟಿಸಿದ್ದರು. ಜೊತೆಗೆ ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್‌ ನಿರ್ಮಾಣ ಮಾಡಿತ್ತು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports