Last Updated:
ನಟಿ ಗೌತಮಿ ತಡಿಮಲ್ಲ AIADMK ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಈ ಬೆಳವಣಿಗೆ 2026 ತಮಿಳುನಾಡು ಚುನಾವಣಾ ಸೋಲಿನ ಬಳಿಕ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಖ್ಯಾತ ಹಿರಿಯ ನಟಿ ಮತ್ತು ಎಐಎಡಿಎಂಕೆ (AIADMK) ಪಕ್ಷದ ಡೆಪ್ಯುಟಿ ಪ್ರೊಪಗಾಂಡಾ ಸೆಕ್ರೆಟರಿ (Deputy Propaganda Secretary) ಗೌತಮಿ ತಡಿಮಲ್ಲ ಅವರು ಭಾನುವಾರ, ಜೂನ್ 14 ರಂದು ತಮ್ಮ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.
ತಮ್ಮ ರಾಜೀನಾಮೆ ನಿರ್ಧಾರದ ಕುರಿತು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ‘X’ (ಟ್ವಿಟರ್) ನಲ್ಲಿ ಪತ್ರವೊಂದನ್ನು ಶೇರ್ ಮಾಡಿರುವ ಗೌತಮಿ, AIADMK ಜನರಲ್ ಸೆಕ್ರೆಟರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ.
‘ಇಂದಿನಿಂದಲೇ, 14/06/2026 ಜಾರಿಗೆ ಬರುವಂತೆ, ಪ್ರಸ್ತುತ ಇರುವ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾನು ಭಾರವಾದ ಹೃದಯದಿಂದ AIADMK ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಡೆಪ್ಯೂಟಿ ಪ್ರೊಪಗಾಂಡಾ ಸೆಕ್ರೆಟರಿ ಹುದ್ದೆಗೆ ರಿಸೈನ್ ಮಾಡುತ್ತಿದ್ದೇನೆ. ಸಮಾಜ ಸೇವೆಯನ್ನು ಸರಿಯಾದ ರೀತಿಯಲ್ಲಿ ಮುಂದುವರಿಸಲು ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಗೌತಮಿ ಪತ್ರದಲ್ಲಿ ಬರೆದುಕೊಂಡಿದ್ದಾರೆ.
ರಾಜೀನಾಮೆ ಪತ್ರ
ತಮ್ಮ ರಾಜಕೀಯ ಜರ್ನಿಯಲ್ಲಿ ಸಾಥ್ ನೀಡಿದ ಎಲ್ಲಾ ನಾಯಕರಿಗೆ ಗೌತಮಿ ಧನ್ಯವಾಗಳನ್ನು ಅರ್ಪಿಸಿದ್ದಾರೆ. ‘ನಾನು ಪಕ್ಷಕ್ಕೆ ಸೇರಿದ ದಿನದಿಂದ ಇಂದಿನವರೆಗೂ ನನಗೆ ಪ್ರತಿಯೊಂದು ಹಂತದಲ್ಲೂ ಸಪೋರ್ಟ್ ಮಾಡಿದ ಮಾಜಿ ಮಂತ್ರಿಗಳು, ಪಕ್ಷದ ಪ್ರಧಾನ ಕಚೇರಿಯ ಎಕ್ಸಿಕ್ಯೂಟಿವ್‌ಗಳು, ವಿವಿಧ ವಿಭಾಗಗಳ ರಾಜ್ಯ ಕಾರ್ಯದರ್ಶಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳಿಗೆ ನನ್ನ ಹೃತ್ಪೂರ್ವಕ ನಮನಗಳು’ ಎಂದು ಗೌತಮಿ ಹೇಳಿದ್ದಾರೆ.













