Taapsee Pannu: ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡಲಿ? ಜನರನ್ನೇ ಕೇಳಿದ ತಾಪ್ಸಿ ಪನ್ನು! | | ACTPnews

ಸೋಷಿಯಲ್ ಮೀಡಿಯಾಲ್ಲಿ ನಾನು ಏನು ಪೋಸ್ಟ್ ಮಾಡಲಿ? ಜನರನ್ನೆ ಕೇಳಿದ ತಾಪ್ಸಿ ಪನ್ನು!


Last Updated:

ಬಾಲಿವುಡ್ ನಟಿ ತಾಪ್ಸಿ ಪನ್ನು ಗೊಂದಲದಲ್ಲಿಯೇ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಾನು ಏನು ಪೋಸ್ಟ್ ಮಾಡಲಿ ಅಂತಲೂ ಕೇಳಿದ್ದಾರೆ. ಆದರೆ, ಇದನ್ನ ಯಾಕೆ ಕೇಳಿದರು? ಇವರಿಗೆ ಕೆಲಸ ಇಲ್ವೇ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ.

ಸೋಷಿಯಲ್ ಮೀಡಿಯಾಲ್ಲಿ ನಾನು ಏನು ಪೋಸ್ಟ್ ಮಾಡಲಿ? ಜನರನ್ನೆ ಕೇಳಿದ ತಾಪ್ಸಿ ಪನ್ನು!
ಸೋಷಿಯಲ್ ಮೀಡಿಯಾಲ್ಲಿ ನಾನು ಏನು ಪೋಸ್ಟ್ ಮಾಡಲಿ? ಜನರನ್ನೆ ಕೇಳಿದ ತಾಪ್ಸಿ ಪನ್ನು!

ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu) ಕನ್‌ಫ್ಯೂಸನ್ (Confusion) ಅಲ್ಲಿಯೇ ಇದ್ದಾರೆ. ತಮ್ಮ ಚಿತ್ರಗಳು ಮತ್ತು ತಮ್ಮ ಜೀವನ ಅಂತ ಬ್ಯುಸಿ ಇರ್ತಾರೆ. ಆದರೆ, ಇವರಿಗೆ ಒಂದು ವಿಚಾರ ಅರಿವಿಗೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ (social media) ಆ್ಯಕ್ಟೀವ್ ಆಗಿಲ್ಲ ಅಂದ್ರೆ ಮುಗಿತು. ಆಯಾ ನಟಿ ಕಳೆದು ಹೋದ್ರು ಅಂತಲೇ ಅರ್ಥ ಅನ್ನೋದು ಮನವರಿಕೆ ಆಗಿದೆ. ಪ್ರತಿ ದಿನವೂ ಒಂದು ಸುಂದರವಾದ ಜಾಗಕ್ಕೆ ಬರ್ತಾರೆ. ಕೈಯಲ್ಲಿ ಕಾಫಿ ಮಗ್ ಕೂಡ ಇರುತ್ತದೆ. ಆದರೆ, ಈ ಸಲ ಒಂದ ಕ್ಯಾಮರಾ ಇಟ್ಟುಕೊಂಡಿದ್ದಾರೆ. ತಮ್ಮ ಮನದಲ್ಲಿರೋ ಅಷ್ಟೂ ಕನ್ಫೂಸನ್ ಏನು ಅನ್ನೋದನ್ನ ಹೇಳಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಾನು ಏನು ಪೋಸ್ಟ್ (Post) ಮಾಡಲಿ ಅಂತ ಜನರನ್ನೆ ಕೇಳಿದ್ದಾರೆ. ಈ ವಿಡಿಯೋ ಇಂಟ್ರಸ್ಟಿಂಗ್ ಆಗಿದೆ. ಇದರ ವಿವರ ಮುಂದೆ ಇದೆ ಓದಿ.

ನಾನು ಏನು ಪೋಸ್ಟ್ ಮಾಡಲಿ..

ತಾಪ್ಸಿ ಪನ್ನು ಬ್ಯುಸಿ ಇದ್ದಾರೆ. ಸಿನಿಮಾ ಕೂಡ ಮಾಡ್ತಿದ್ದಾರೆ. ಆಯಾ ಸಿನಿಮಾಗಳ ಬಗ್ಗೇನೂ ಮಾತನಾಡುತ್ತಾರೆ. ಆದರೆ, ಇವರಿಗೆ ಒಂದು ಬೇಸರ ಇದೆ. ಸೋಷಿಯಲ್ ಮೀಡಿಯಾದಲ್ಲಿ ಸುಮ್ನೆ ಏನ್ ಬೇಕೋ ಅದನ್ನ ಪೋಸ್ಟ್ ಮಾಡೋಕೆ ಇಷ್ಟ ಆಗೋದಿಲ್ಲ.
what should i post on social media taapsee pannu ask question to people

ನಾನು ಏನು ಪೋಸ್ಟ್ ಮಾಡ್ಲಿ..

(ಚಿತ್ರ ಕೃಪೆ: ತಾಪ್ಸಿ ಪನ್ನು ಇನ್‌ಸ್ಟಾಗ್ರಾಮ್)

ಅದಕ್ಕೇನೆ ಇದರಿಂದ ದೂರವೇ ಇದ್ದೇನೆ. ಕೇಳುವವರಿಗೆ ನಾನು ನನ್ನ ಕೆಲಸದಲ್ಲಿ ಬ್ಯುಸಿ ಇದ್ದೇನೆ ಅಂತ ಹೇಳ್ತಾರೆ. ವೈಯಕ್ತಿಕ ಜೀವನದಲ್ಲೂ ಆರಾಮಾಗಿದ್ದೇನೆ ಅಂತಲೇ ಹೇಳ್ತಾರೆ.

ತಾಪ್ಸಿಗೆ ಈಗ ಗೊಂದಲ ಯಾಕೆ

ತಾಪ್ಸಿ ಪನ್ನು ಈಗ ಗೊಂದಲದಲ್ಲಿಯೇ ಇದ್ದಾರೆ. ಈ ಗೊಂದಲದಲ್ಲಿ ಎಲ್ಲರನ್ನೂ ಸೇರಿಸಿಕೊಳ್ಳಬೇಕು ಅಂತ ಯೋಚನೆ ಮಾಡಿದ್ದಾರೆ.

ನಾನು ಗೊಂದರಲ್ಲಿಯೇ ಇದ್ದೇನೆ. ಈ ಕನ್ಫ್ಯೂಸನ್ ಅಲ್ಲಿ ನಿಮ್ಮನ್ನೂ ಸೇರಿಸಿಕೊಳ್ಳಬೇಕು ಅಂತಲೆ ಅನಿಸಿದೆ. ಕಾರಣ ಎಲ್ಲರ ಜೊತೆಗೆ ಕನ್ಫ್ಯೂಸ್ ಆಗೋದರಲ್ಲಿ ಸಿಗೋ ಮಜಾನೇ ಬೇರೆ ಅಂತಲೂ ಬರೆದುಕೊಂಡಿದ್ದಾರೆ. ಅದು ಹೀಗಿದೆ, I thought why not involve u all in my confusion. Kyunki mil ke confuse hone mein jo maza hai woh akele nahi

ಈ ರೀತಿ ಅನೇಕರು ಯೋಚಿಸ್ತಾರೆ

ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಇದ್ದಾರೆ. ಟ್ರಾವೆಲ್ ವ್ಲಾಗ್ ಮಾಡೋರು ಇದ್ದಾರೆ. ಇದನ್ನ ನಾನು ಮೊದಲು ಮಾಡ್ತಾ ಇದ್ದೆ. ಈಗ ಯಾಕೋ ಸೆಟ್ ಆಗಲ್ಲ ಅನಿಸುತ್ತಿದೆ.

what should i post on social media taapsee pannu ask question to people

ಫಿಟ್‌ನೆಸ್ ವಿಡಿಯೋ ಮಾಡಿದ್ರೆ ಹೇಗೆ

(ಚಿತ್ರ ಕೃಪೆ: ತಾಪ್ಸಿ ಪನ್ನು ಇನ್‌ಸ್ಟಾಗ್ರಾಮ್)

ನಾನು ಧರಿಸಿಕೊಂಡ ಬಟ್ಟೆ, ನಾನು ಧರಿಸಿಕೊಂಡ ಎಕ್ಸಸರೀಸ್, ಹೀಗೆ ಇದನ್ನೂ ಮಾಡಬಹುದು. ಆದರೆ, ಇದು ಸರಿ ಹೋಗಲ್ಲ ಅನಿಸುತ್ತದೆ.

ಫಿಟ್‌ನೆಸ್ ವಿಡಿಯೋ ಮಾಡಿದ್ರೆ ಹೇಗೆ

ನಾನು ವರ್ಕೌಟ್ ಏನೋ ಮಾಡುತ್ತೇನೆ. ಆದರೆ, ಜಿಮ್ ಅಲ್ಲಿ ಕ್ಯಾಮರಾ ಇಡೋಕೆ ಬರೋದಿಲ್ಲ. ಅದನ್ನ ಎಲ್ಲಿ ಇಟ್ಟರೆ ಸಿರಿಯಾಗಿ ಕ್ಯಾಪ್ಚರ್ ಆಗುತ್ತದೆ ಅನ್ನೋದು ಗೊತ್ತಿಲ್ಲ.

ನಾನು ಏನು ಪೋಸ್ಟ್ ಮಾಡ್ಲಿ..

ತಾಪ್ಸಿ ಪನ್ನು ಈ ಪ್ರಶ್ನೆ ಕೇಳಿದ್ದಾರೆ. ಏನು ಪೋಸ್ಟ್ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ. ಅದಕ್ಕೆ ನಾನು ಏನು ಪೋಸ್ಟ್ ಮಾಡ್ಲಿ ಅಂತ ನೀವೇ ಹೇಳಿ ಅನ್ನುವ ಅರ್ಥದಲ್ಲಿಯೇ ತಾಪ್ಸಿ ಪನ್ನು ಪ್ರಶ್ನೆ ಕೇಳಿದ್ದಾರೆ.

ಆದರೆ, ಇದನ್ನ ಯಾಕೆ ಮಾಡ್ಬೇಕು ಅನ್ನೋದನ್ನು ಕ್ಲಿಯರ್ ಮಾಡಿದ್ದಾರೆ. ಈಗೀನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇರೋದು ಮುಖ್ಯವಾಗಿದೆ. ಇಲ್ಲ ಅಂದ್ರೆ ಏನು ಮಾಡ್ತಿಲ್ಲ ಅಂತ ತಿಳಿದುಕೊಳ್ಳುತ್ತಾರೆ. ಅದಕ್ಕೇನೆ ನಾನು ಸೋಷಿಯಲ್ ಮೀಡಿಯಾದಲ್ಲಿ ಏನು ಮಾಡ್ಲಿ ಅಂತಲೇ ಕೇಳಿದ್ದಾರೆ. ಇವರ ಈ ಒಂದು ವಿಡಿಯೋವನ್ನ ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿಯೇ ಹಂಚಿಕೊಂಡಿದ್ದಾರೆ. ಇದು ಈಗ ಎಲ್ಲರ ಗಮನ ಕೂಡ ಸೆಳೆಯುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed