Last Updated:
ಬಾಲಿವುಡ್ ನಟಿ ತಾಪ್ಸಿ ಪನ್ನು ಗೊಂದಲದಲ್ಲಿಯೇ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಾನು ಏನು ಪೋಸ್ಟ್ ಮಾಡಲಿ ಅಂತಲೂ ಕೇಳಿದ್ದಾರೆ. ಆದರೆ, ಇದನ್ನ ಯಾಕೆ ಕೇಳಿದರು? ಇವರಿಗೆ ಕೆಲಸ ಇಲ್ವೇ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ.
ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu) ಕನ್‌ಫ್ಯೂಸನ್ (Confusion) ಅಲ್ಲಿಯೇ ಇದ್ದಾರೆ. ತಮ್ಮ ಚಿತ್ರಗಳು ಮತ್ತು ತಮ್ಮ ಜೀವನ ಅಂತ ಬ್ಯುಸಿ ಇರ್ತಾರೆ. ಆದರೆ, ಇವರಿಗೆ ಒಂದು ವಿಚಾರ ಅರಿವಿಗೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ (social media) ಆ್ಯಕ್ಟೀವ್ ಆಗಿಲ್ಲ ಅಂದ್ರೆ ಮುಗಿತು. ಆಯಾ ನಟಿ ಕಳೆದು ಹೋದ್ರು ಅಂತಲೇ ಅರ್ಥ ಅನ್ನೋದು ಮನವರಿಕೆ ಆಗಿದೆ. ಪ್ರತಿ ದಿನವೂ ಒಂದು ಸುಂದರವಾದ ಜಾಗಕ್ಕೆ ಬರ್ತಾರೆ. ಕೈಯಲ್ಲಿ ಕಾಫಿ ಮಗ್ ಕೂಡ ಇರುತ್ತದೆ. ಆದರೆ, ಈ ಸಲ ಒಂದ ಕ್ಯಾಮರಾ ಇಟ್ಟುಕೊಂಡಿದ್ದಾರೆ. ತಮ್ಮ ಮನದಲ್ಲಿರೋ ಅಷ್ಟೂ ಕನ್ಫೂಸನ್ ಏನು ಅನ್ನೋದನ್ನ ಹೇಳಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಾನು ಏನು ಪೋಸ್ಟ್ (Post) ಮಾಡಲಿ ಅಂತ ಜನರನ್ನೆ ಕೇಳಿದ್ದಾರೆ. ಈ ವಿಡಿಯೋ ಇಂಟ್ರಸ್ಟಿಂಗ್ ಆಗಿದೆ. ಇದರ ವಿವರ ಮುಂದೆ ಇದೆ ಓದಿ.
ನಾನು ಏನು ಪೋಸ್ಟ್ ಮಾಡ್ಲಿ..
(ಚಿತ್ರ ಕೃಪೆ: ತಾಪ್ಸಿ ಪನ್ನು ಇನ್‌ಸ್ಟಾಗ್ರಾಮ್)
ಅದಕ್ಕೇನೆ ಇದರಿಂದ ದೂರವೇ ಇದ್ದೇನೆ. ಕೇಳುವವರಿಗೆ ನಾನು ನನ್ನ ಕೆಲಸದಲ್ಲಿ ಬ್ಯುಸಿ ಇದ್ದೇನೆ ಅಂತ ಹೇಳ್ತಾರೆ. ವೈಯಕ್ತಿಕ ಜೀವನದಲ್ಲೂ ಆರಾಮಾಗಿದ್ದೇನೆ ಅಂತಲೇ ಹೇಳ್ತಾರೆ.
ತಾಪ್ಸಿ ಪನ್ನು ಈಗ ಗೊಂದಲದಲ್ಲಿಯೇ ಇದ್ದಾರೆ. ಈ ಗೊಂದಲದಲ್ಲಿ ಎಲ್ಲರನ್ನೂ ಸೇರಿಸಿಕೊಳ್ಳಬೇಕು ಅಂತ ಯೋಚನೆ ಮಾಡಿದ್ದಾರೆ.
ನಾನು ಗೊಂದರಲ್ಲಿಯೇ ಇದ್ದೇನೆ. ಈ ಕನ್ಫ್ಯೂಸನ್ ಅಲ್ಲಿ ನಿಮ್ಮನ್ನೂ ಸೇರಿಸಿಕೊಳ್ಳಬೇಕು ಅಂತಲೆ ಅನಿಸಿದೆ. ಕಾರಣ ಎಲ್ಲರ ಜೊತೆಗೆ ಕನ್ಫ್ಯೂಸ್ ಆಗೋದರಲ್ಲಿ ಸಿಗೋ ಮಜಾನೇ ಬೇರೆ ಅಂತಲೂ ಬರೆದುಕೊಂಡಿದ್ದಾರೆ. ಅದು ಹೀಗಿದೆ, I thought why not involve u all in my confusion. Kyunki mil ke confuse hone mein jo maza hai woh akele nahi
ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಇದ್ದಾರೆ. ಟ್ರಾವೆಲ್ ವ್ಲಾಗ್ ಮಾಡೋರು ಇದ್ದಾರೆ. ಇದನ್ನ ನಾನು ಮೊದಲು ಮಾಡ್ತಾ ಇದ್ದೆ. ಈಗ ಯಾಕೋ ಸೆಟ್ ಆಗಲ್ಲ ಅನಿಸುತ್ತಿದೆ.
ಫಿಟ್‌ನೆಸ್ ವಿಡಿಯೋ ಮಾಡಿದ್ರೆ ಹೇಗೆ
(ಚಿತ್ರ ಕೃಪೆ: ತಾಪ್ಸಿ ಪನ್ನು ಇನ್‌ಸ್ಟಾಗ್ರಾಮ್)
ನಾನು ಧರಿಸಿಕೊಂಡ ಬಟ್ಟೆ, ನಾನು ಧರಿಸಿಕೊಂಡ ಎಕ್ಸಸರೀಸ್, ಹೀಗೆ ಇದನ್ನೂ ಮಾಡಬಹುದು. ಆದರೆ, ಇದು ಸರಿ ಹೋಗಲ್ಲ ಅನಿಸುತ್ತದೆ.
ನಾನು ವರ್ಕೌಟ್ ಏನೋ ಮಾಡುತ್ತೇನೆ. ಆದರೆ, ಜಿಮ್ ಅಲ್ಲಿ ಕ್ಯಾಮರಾ ಇಡೋಕೆ ಬರೋದಿಲ್ಲ. ಅದನ್ನ ಎಲ್ಲಿ ಇಟ್ಟರೆ ಸಿರಿಯಾಗಿ ಕ್ಯಾಪ್ಚರ್ ಆಗುತ್ತದೆ ಅನ್ನೋದು ಗೊತ್ತಿಲ್ಲ.
ತಾಪ್ಸಿ ಪನ್ನು ಈ ಪ್ರಶ್ನೆ ಕೇಳಿದ್ದಾರೆ. ಏನು ಪೋಸ್ಟ್ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ. ಅದಕ್ಕೆ ನಾನು ಏನು ಪೋಸ್ಟ್ ಮಾಡ್ಲಿ ಅಂತ ನೀವೇ ಹೇಳಿ ಅನ್ನುವ ಅರ್ಥದಲ್ಲಿಯೇ ತಾಪ್ಸಿ ಪನ್ನು ಪ್ರಶ್ನೆ ಕೇಳಿದ್ದಾರೆ.
ಆದರೆ, ಇದನ್ನ ಯಾಕೆ ಮಾಡ್ಬೇಕು ಅನ್ನೋದನ್ನು ಕ್ಲಿಯರ್ ಮಾಡಿದ್ದಾರೆ. ಈಗೀನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇರೋದು ಮುಖ್ಯವಾಗಿದೆ. ಇಲ್ಲ ಅಂದ್ರೆ ಏನು ಮಾಡ್ತಿಲ್ಲ ಅಂತ ತಿಳಿದುಕೊಳ್ಳುತ್ತಾರೆ. ಅದಕ್ಕೇನೆ ನಾನು ಸೋಷಿಯಲ್ ಮೀಡಿಯಾದಲ್ಲಿ ಏನು ಮಾಡ್ಲಿ ಅಂತಲೇ ಕೇಳಿದ್ದಾರೆ. ಇವರ ಈ ಒಂದು ವಿಡಿಯೋವನ್ನ ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿಯೇ ಹಂಚಿಕೊಂಡಿದ್ದಾರೆ. ಇದು ಈಗ ಎಲ್ಲರ ಗಮನ ಕೂಡ ಸೆಳೆಯುತ್ತಿದೆ.
Jun 03, 2026 10:57 PM IST













