T20 World Cup 2026: ಪಾಕ್ ತಂಡದಲ್ಲಿ ಬಿಗ್ ಹೈಡ್ರಾಮಾ, ಆಟಗಾರ್ತಿಯ ರೂಮ್‌ಗೆ ಪತಿ ಎಂಟ್ರಿ! ವಿಶ್ವಕಪ್ ವೇಳೆ ವಿವಾದಕ್ಕೆ ಕಾರಣವಾದ ಪಾಕ್ ಪ್ಲೇಯರ್ | ಕ್ರೀಡಾ ಸುದ್ದಿ | ACTPnews

ಪಾಕಿಸ್ತಾನ ಮಹಿಳಾ ಕ್ರಿಕೆಟ್


Last Updated:

ಐಸಿಸಿ 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಹೀನಾಯ ಪರಿಸ್ಥಿತಿಯಲ್ಲಿದೆ. ಈ ಪಾಕ್ ತಂಡದಲ್ಲಿ ಬಿಗ್ ಹೈಡ್ರಾಮಾ ಶುರುವಾಗಿದೆ. ಅಷ್ಟಕ್ಕೂ ತಂಡದೊಳಗೆ ಆಗಿರುವುದೇನು?

ಪಾಕಿಸ್ತಾನ ಮಹಿಳಾ ಕ್ರಿಕೆಟ್
ಪಾಕಿಸ್ತಾನ ಮಹಿಳಾ ಕ್ರಿಕೆಟ್

ಇಂಗ್ಲೆಂಡ್‌(England)ನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ವಿಶ್ವಕಪ್‌(World Cup)ನಲ್ಲಿ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ನೀಡಿದೆ. ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಟೂರ್ನಿಯಿಂದ ಹೊರಬಿದ್ದಿದೆ. ಆಡಿದ ಸತತ ನಾಲ್ಕು ಪಂದ್ಯಗಳಲ್ಲಿ ಪಾಕಿಸ್ತಾನ ಸೋತಿದೆ. ಆಸ್ಟ್ರೇಲಿಯಾ (Australia) ವಿರುದ್ಧದ ಪಂದ್ಯದಲ್ಲೂ ಹೀನಾಯವಾಗಿ ಸೋತು ತನ್ನ ಗೌರವ ಕಳೆದುಕೊಂಡಿತ್ತು. ಅಂತಿಮ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಆ ಪಂದ್ಯವನ್ನಾದರೂ ಗೆದ್ದು ಮನೆಗೆ ಹೋಗಬೇಕೆಂದು ಪಾಕಿಸ್ತಾನ ಬಯಸುತ್ತಿದೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನ ಆಟಗಾರ್ತಿಯ ಕ್ರಮದಿಂದ ನಾಯಕಿ ಫಾತಿಮಾ ಸನಾ (Fatima Sana) ಬಹಳ ಕೋಪಗೊಂಡಿದ್ದರು ಎಂದು ಪಿಟಿಐ ವರದಿ ಮಾಡಿದೆ.

ಟಿ20 ವಿಶ್ವಕಪ್ ಆರಂಭವಾಗುವ ಮೊದಲು, ಪಾಕಿಸ್ತಾನ ತಂಡದ ಆಯ್ಕೆಗೆ ಸಂಬಂಧಿಸಿದಂತೆ ನಾಯಕಿ ಫಾತಿಮಾ ಸನಾ ಮತ್ತು ಮೆಂಟರ್, ಅನಧಿಕೃತ ಕೋಚ್ ವಹಾಬ್ ರಿಯಾಜ್ ನಡುವೆ ಗಂಭೀರ ಭಿನ್ನಾಭಿಪ್ರಾಯಗಳಿದ್ದವು. ಪಂದ್ಯವೊಂದರ ಸೋಲಿನ ನಂತರ ನಾಯಕಿ ಫಾತಿಮಾ ಸನಾ ನೇರವಾಗಿ ಕೋಚ್ ವಹಾಬ್‌ ರಿಯಾಜ್ ವಿರುದ್ಧವೇ ಬೆರಳು ತೋರಿಸಿದ್ದು ಭಾರೀ ಚರ್ಚೆ ಆಗಿತ್ತು.

ವಿವಾದಕ್ಕೆ ಕಾರಣವಾದ ಪಾಕ್ ಪ್ಲೇಯರ್

ಮತ್ತೊಂದೆಡೆ, ತಂಡದ ಹಿರಿಯ ಆಟಗಾರ್ತಿ ಆಲಿಯಾ ರಿಯಾಜ್ ಕೂಡ ವಿವಾದದ ಸುಳಿಗೆ ಸಿಲುಕಿದ್ದು, ಟೂರ್ನಿಯ ವೇಳೆಯಲ್ಲಿ ಗಂಡನ ಜೊತೆ ಟೀಮ್ ಹೋಟೆಲ್‌ನಲ್ಲಿ ತಂಗಿದ್ದಕ್ಕೆ ಸನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೂನ್ 23 ರಂದು ಲೀಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋಲುತ್ತಿದ್ದಂತೆ ಪಾಕಿಸ್ತಾನ ತಂಡದೊಳಗಿನ ಈ ಎಲ್ಲಾ ವಿವಾದಗಳು ಒಂದೊಂದಾಗಿ ಹೊರಬರುತ್ತಿವೆ.

ಏನಿದು ವಿವಾದ?

ದಿನ ಇಡೀ ಪಾಕಿಸ್ತಾನ ತಂಡ ಅಭ್ಯಾಸ ಮಾಡುತ್ತಿದ್ದಾಗ, ಆಲಿಯಾ ರಿಯಾಜ್ ಮತ್ತು ಅವರ ಪತಿ ಲಂಡನ್ ಸಿಟಿ ನೋಡಲು ಹೋಗಿದ್ದರು ಎಂಬ ಆರೋಪಗಳೂ ಇವೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಅನುಭವಿ ಆಲಿಯಾ ರಿಯಾಜ್‌ಗೆ ವಿಶ್ರಾಂತಿ ನೀಡಲು ನಾಯಕಿ ಫಾತಿಮಾ ಬಯಸಿದ್ದರು. ಆದರೆ ಕೋಚ್ ವಹಾಬ್ ರಿಯಾಜ್ ಮಾತ್ರ ಆಲಿಯಾ ರಿಯಾಜ್‌ನನ್ನು ತಂಡದಲ್ಲಿ ಆಡಿಸಲೇಬೇಕು ಎಂದು ಪಟ್ಟು ಹಿಡಿದರು.

ಇದಾದ ನಂತರ ಫಾತಿಮಾ ಸನಾ ಬಾಂಗ್ಲಾದೇಶ ವಿರುದ್ಧದ ಸೋಲಿಗೆ ವಹಾಬ್ ರಿಯಾಜ್ ಅವರನ್ನು ದೂಷಿಸಿದ್ದಾರೆ ಎಂದು ವರದಿಗಳಾಗಿವೆ. 2026 ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಲಿಯಾ ರಿಯಾಜ್ ಅಟ್ಟರ್ ಫ್ಲಾಪ್ ಆಗಿದ್ದಾರೆ. ಆಕಿಯಾ ಆಡಿದ 4 ಪಂದ್ಯಗಳಲ್ಲಿ ಕೇವಲ 35 ರನ್ ಗಳಿಸಿದ್ದು, ಅವರ ಸ್ಟ್ರೈಕ್ ರೇಟ್ ಕೂಡ ತೀರಾ ಕಳಪೆಯಾಗಿದ್ದು (77.77) ಪಾಕಿಸ್ತಾನ ತಂಡದ ಹೀನಾಯ ಸೋಲಿಗೆ ಪ್ರಮುಖ ಕಾರಣವಾಗಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

T20 World Cup 2026: ಪಾಕ್ ತಂಡದಲ್ಲಿ ಬಿಗ್ ಹೈಡ್ರಾಮಾ, ಆಟಗಾರ್ತಿಯ ರೂಮ್‌ಗೆ ಪತಿ ಎಂಟ್ರಿ! ವಿಶ್ವಕಪ್ ವೇಳೆ ವಿವಾದಕ್ಕೆ ಕಾರಣವಾದ ಪಾಕ್ ಪ್ಲೇಯರ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed