Surprising Story: ಒಂದೇ ರಾತ್ರಿಯಲ್ಲಿ ಅದೃಷ್ಟ ಬದಲಿಸಿತು ʼ2ʼ; ಸಾಲದ ಮೇಲೆ ಸಾಲ, ಮನೆಗೂ ಕಂಟಕ, 76 ವರ್ಷದ ಅಜ್ಜನ ಬದುಕಲ್ಲಿ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಭಾಗ್ಯವಂತರು!


Last Updated:

ಕೇರಳದ ಕೊಲ್ಲಂನ ಸೂರನಾಡ್ ನಿವಾಸಿ ಲಾಟರಿ ಮಾರಾಟಗಾರ ಪೊನ್ನನ್ ಕುಟುಂಬ, ಕೇರಳ ರಾಜ್ಯ ಲಾಟರಿಯ ವಿಶು ಬಂಪರ್ ಬಿಆರ್-109 ನಲ್ಲಿ VB 135452 ಟಿಕೆಟ್ ಮೂಲಕ 12 ಕೋಟಿ ಮೊದಲ ಬಹುಮಾನ ಗೆದ್ದು ಸಾಲಬಾಧೆಯಿಂದ ಹೊರಬಂದಿದೆ

ಭಾಗ್ಯವಂತರು!
ಭಾಗ್ಯವಂತರು!

ಕೇರಳ: ಅದೃಷ್ಟ ಅನ್ನೋದು ಯಾವಾಗ, ಯಾರಿಗೆ, ಹೇಗೆ ಒಲಿಯುತ್ತೆ ಅಂತ ಯಾರೂ ಊಹಿಸಲು ಸಾಧ್ಯವಿಲ್ಲ! ಇಲ್ಲೊಂದು ಬಡ ಕುಟುಂಬಕ್ಕೆ ರಾತ್ರೋರಾತ್ರಿ ಅದೃಷ್ಟದ ದೇವತೆ (Goddess) ಭರ್ಜರಿಯಾಗಿ ಒಲಿದಿದ್ದಾಳೆ. ಪ್ರತಿದಿನ ರಸ್ತೆ ಬದಿಯಲ್ಲಿ ಲಾಟರಿ ಟಿಕೆಟ್ ಮಾರಾಟ (Ticket Sale) ಮಾಡಿ ಜೀವನ ನಡೆಸುತ್ತಿದ್ದ ಕುಟುಂಬವೊಂದು (Family) ಈಗ ಬರೋಬ್ಬರಿ 12 ಕೋಟಿ ರೂಪಾಯಿ ಮೊತ್ತದ ಮೊದಲ ಬಹುಮಾನ ಗೆದ್ದು ಇಡೀ ದೇಶವೇ (Nation) ತನ್ನತ್ತ ತಿರುಗಿ ನೋಡುವಂತೆ ಮಾಡಿದೆ! ಶನಿವಾರ ನಡೆದ ಕೇರಳ ರಾಜ್ಯ ಲಾಟರಿಯ ‘ವಿಶು ಬಂಪರ್ ಬಿಆರ್-109’ ಡ್ರಾದಲ್ಲಿ ಈ ಪವಾಡ ನಡೆದಿದ್ದು, ವಿಬಿ 135452 (VB 135452) ಸಂಖ್ಯೆಯ ಟಿಕೆಟ್‌ಗೆ ಈ ಅಗ್ರ ಬಹುಮಾನ ಬಂದಿದೆ.

ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಲಾಟರಿ

ಕೇರಳದ ಕೊಲ್ಲಂ ಜಿಲ್ಲೆಯ ಕರುಣಗಪ್ಪಳ್ಳಿಯ ಸೂರನಾಡ್ ನಿವಾಸಿ, 76 ವರ್ಷದ ಪೊನ್ನನ್, ಅವರ ಪತ್ನಿ ರಾಧಾಮಣಿ ಮತ್ತು ಮಗ ವಿನೋದ್ ಈ ಮಹಾ ಲಾಟರಿ ಗೆದ್ದ ಅದೃಷ್ಟವಂತರು. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಈ ಮೂವರೂ ಲಾಟರಿ ಟಿಕೆಟ್ ಮಾರಾಟ ಮಾಡಲು ಪ್ರಾರಂಭಿಸಿದ್ದರು. ಪ್ರತಿದಿನ ರಸ್ತೆ ರಸ್ತೆಯಲ್ಲಿ ನಡೆದುಕೊಂಡು ಹೋಗಿ ಲಾಟರಿ ಮಾರುತ್ತಿದ್ದ ಪೊನ್ನನ್ ಮತ್ತು ಮಗ ವಿನೋದ್, ಈ ಬಾರಿಯೂ ಮಾರಲು ತಂದಿದ್ದ ಟಿಕೆಟ್‌ಗಳಲ್ಲಿ ತಮಗಾಗಿ ಒಂದು ಟಿಕೆಟ್ ಇಟ್ಟುಕೊಂಡಿದ್ದರು. ಅದೇ ಟಿಕೆಟ್ ಈಗ ಇವರ ಇಡೀ ಬದುಕನ್ನೇ ಬದಲಾಯಿಸಿದೆ!

ಅದೃಷ್ಟದ ಸಂಖ್ಯೆ ತಂದ ಭಾಗ್ಯ

“ನನ್ನ ಅದೃಷ್ಟದ ಸಂಖ್ಯೆ 2. ನಾನು ತಂದಿದ್ದ ಟಿಕೆಟ್‌ನ ಕೊನೆಯ ಸಂಖ್ಯೆಯೂ 2 ಆಗಿತ್ತು. ನಾನು ಗೆದ್ದಿದ್ದೇನೆ ಎಂದು ಖಚಿತಪಡಿಸಿಕೊಳ್ಳಲು ಹತ್ತಾರು ಬಾರಿ ನಂಬರ್ ಚೆಕ್ ಮಾಡಿದೆ, ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ!” ಎಂದು ಪೊನ್ನನ್ ಆಶ್ಚರ್ಯದಿಂದ ಹೇಳಿದ್ದಾರೆ. ಇತ್ತ ಪತ್ನಿ ರಾಧಾಮಣಿ “ನನ್ನ ಗಂಡ ಈಗ ಕೋಟ್ಯಧಿಪತಿಯಾಗಿದ್ದಾರೆ” ಎಂದು ಸಂತೋಷದಿಂದ ಕಣ್ಣೀರು ಹಾಕಿದ್ದಾರೆ.

ಮನೆ ಹರಾಜಾಗುವ ಭೀತಿಯಲ್ಲಿದ್ದ ಕುಟುಂಬಕ್ಕೆ ಸಿಕ್ತು ಮುಕ್ತಿ!

ಈ ಲಾಟರಿ ಗೆಲುವು ಕೇವಲ ಹಣ ತಂದಿಲ್ಲ, ಬದಲಿಗೆ ಒಂದು ಬಡ ಕುಟುಂಬವನ್ನು ಬೀದಿಗೆ ಬೀಳುವುದರಿಂದ ಬದುಕಿಸಿದೆ. ಹೌದು, ಪೊನ್ನನ್ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಅವರ ಮನೆಯು ಸಾಲದ ಸುಳಿಗೆ ಸಿಲುಕಿ ಮುಟ್ಟುಗೋಲು (Foreclosure) ಹಾಕಿಕೊಳ್ಳುವ ಭೀತಿ ಎದುರಿಸುತ್ತಿತ್ತು. ಆಸ್ತಿ ಉಳಿಸಿಕೊಳ್ಳಲು ಹಲವರಿಂದ ಸಾಲ ಪಡೆದು ದಿನ ದೂಡುತ್ತಿದ್ದ ಕುಟುಂಬಕ್ಕೆ ಈ ಲಾಟರಿ ವರದಾನವಾಗಿ ಬಂದಿದೆ. ಈ ಹಣದಿಂದ ತಮ್ಮ ಎಲ್ಲಾ ಸಾಲಗಳನ್ನು ತೀರಿಸುವುದಾಗಿ ಪೊನ್ನನ್ ಪತ್ನಿ ತಿಳಿಸಿದ್ದಾರೆ.
ಕೋಟಿ ಹಣ ಬಂದ ತಕ್ಷಣ ಪೊನ್ನನ್ ಮಾಡಲಿರುವ ಆ ಮುಖ್ಯ ಕೆಲಸ ಏನು?

12 ಕೋಟಿ ರೂಪಾಯಿ ಕೈಗೆ ಬರುತ್ತಿದ್ದಂತೆ ಪೊನ್ನನ್ ಅವರು ತಮ್ಮ ಮುಂದಿನ ಪ್ರಮುಖ ಆದ್ಯತೆಗಳ ಬಗ್ಗೆ ಮಾತನಾಡಿದ್ದಾರೆ, ಪೊನ್ನನ್ ಅವರ ಮಗ ವಿನೋದ್‌ಗೆ ಮದುವೆ ಮಾಡಲು ಒಳ್ಳೆಯ ಹೆಣ್ಣು ಸಿಗುತ್ತಿರಲಿಲ್ಲ. ಈ ಬಗ್ಗೆ ಮನಬಿಚ್ಚಿ ಮಾತನಾಡಿದ ಪೊನ್ನನ್, “ಬಡ ಕುಟುಂಬದಲ್ಲಿ ಯಾರಿಗಾದರೂ ವಧು ಸಿಗುವುದು ತುಂಬಾ ಕಷ್ಟ. ಆದರೆ ಈಗ ನಮ್ಮ ಬಳಿ ಕೋಟ್ಯಂತರ ಹಣವಿದೆ. ಇನ್ಮುಂದೆಯಾದರೂ ನನ್ನ ಮಗನಿಗೆ ಒಳ್ಳೆಯ ಸಂಬಂಧ ಸಿಗುತ್ತಾ ಎಂದು ನೋಡಬೇಕು” ಎಂದು ಹೇಳಿದ್ದಾರೆ.

ಹೊಟ್ಟೆ ಹೊರೆಯುತ್ತಿದ್ದ ಲಾಟರಿ ಹೊನ್ನಿನಂತಹ ಕೊಡುಗೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed