Suman Nagarkar: ಬೆಳದಿಂಗಳ ಬಾಲೆಯಲ್ಲಿ ಚಿನ್ನವೂ ಇಲ್ಲ, ಬೆಳ್ಳಿಯೂ ಇಲ್ಲ! ಯಾಕೆ? | | ACTPnews

ಬೆಳದಿಂಗಳ ಬಾಲೆ ಹತ್ರ ಚಿನ್ನ ಬೆಳ್ಳಿ ಕಲೆಕ್ಷನೆ ಇಲ್ಲ ನೋಡಿ!


Last Updated:

ಬೆಳದಿಂಗಳ ಬಾಲೆ ಸುಮನ್ ನಗರ್ಕರ್ ಅವರಿಗೆ ಚಿನ್ನಾಭರಣದ ಕ್ರೇಜ್ ಏನೂ ಇಲ್ಲ. ಬೆಳ್ಳಿ ಬಂಗಾರದ ಆಭರಣಗಳ ಯಾವ ಕಲೆಕ್ಷನ್ ಕೂಡ ಇಲ್ಲ. ಎಷ್ಟು ಸಾಧ್ಯವೋ ಅಷ್ಟು ಸಿಂಪಲ್ ಆಗಿಯೇ ಇರ್ತಾರೆ. ಅದನ್ನ ಸುಮನ್ ನಗರ್ಕರ್ ಅವರೇ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ.

ಬೆಳದಿಂಗಳ ಬಾಲೆ ಹತ್ರ ಚಿನ್ನ ಬೆಳ್ಳಿ ಕಲೆಕ್ಷನೆ ಇಲ್ಲ ನೋಡಿ!
ಬೆಳದಿಂಗಳ ಬಾಲೆ ಹತ್ರ ಚಿನ್ನ ಬೆಳ್ಳಿ ಕಲೆಕ್ಷನೆ ಇಲ್ಲ ನೋಡಿ!

ಬೆಳದಿಗಳ ಬಾಲೆ ಚಿತ್ರ (Beladingala Baale Movie) ಖ್ಯಾತಿಯ ನಟ ಸುಮನ್ ನಗರ್ಕರ್ (Suman Nagarkar) ಅವರು ತುಂಬಾನೆ ಸಿಂಪಲ್ (Simple) ಆಗಿದ್ದಾರೆ. ಎಲ್ಲ ಹೆಣ್ಣುಮಕ್ಕಳ ರೀತಿ ಹೆಚ್ಚಾಗಿ ಅಲಂಕಾರ ಮಾಡಿಕೊಳ್ಳುವುದು ಇಲ್ಲ. ಅಷ್ಟೆ ಯಾಕೆ ಚಿನ್ನಾಭರಣ ಅಂತಲೂ ಯೋಚನೆ ಮಾಡೋದಿಲ್ಲ. ತಾವು ಹೈಸ್ಕೂಲ್ ಓದೋಕೆ ಬರೋ ಮುಂಚೇನೆ ಚಿನ್ನದ ಆಭರಣ ಹಾಕೋದನ್ನ ಬಿಟ್ಟು ಬಿಟ್ಟಿದ್ದಾರೆ. ಸುಮನ್ ನಗರ್ಕರ್ ಇರೋದೇ ಹಾಗೆ ನೋಡಿ. ಇದನ್ನ ಸ್ವತಃ ಸುಮನ್ ನಗರ್ಕರ್ (Suman Nagarkar) ಅವರೇ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಸಿಂಪಲ್ ಬೆಳದಿಂಗಳ ಬಾಲೆ

ಕನ್ನಡದ ನಟಿ ಸುಮನ್ ನಗರ್ಕರ್ ಸದಾ ಸಿಂಪಲ್ ಆಗಿಯೇ ಇರ್ತಾರೆ. ಚಿನ್ನದ ಆಭರಣ ಧರಿಸೋದರಿಂದ ಸದಾ ದೂರ ಮತ್ತು ದೂರವೇ ಇರ್ತಾರೆ.
Beladingala Baale Fame Suman Nagarkar Unknown Facts

ಸಿಂಪಲ್ ಬೆಳದಿಂಗಳ ಬಾಲೆ

ಚಿನ್ನದ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲವೇ ಇಲ್ಲ. ಇದು ಇತ್ತೀಚಿಗೆ ಬಂದಿರೋ ನಿರಾಸಕ್ತಿ ಅಲ್ವೆ ಅಲ್ಲ. ಹೈಸ್ಕೂಲ್‌ಗೆ ಬರುವ ಮೊದಲೇ ಈ ಒಂದು ಚಿನ್ನದಾಸಕ್ತಿಯಿಂದ ದೂರ ಸರಿದಿದ್ದಾರೆ.

ಏನು ಕಾರಣ ಗೊತ್ತಾ

ಸುಮನ್ ನಗರ್ಕರ್ ಅವರು ಯಾಕೆ ಚಿನ್ನದ ಬಗ್ಗೆ ಅಷ್ಟೊಂದು ಆಸಕ್ತಿ ಹೊಂದಿಲ್ಲ? ಏನು ಇದರ ಕಾರಣ? ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಹೈಸ್ಕೂಲ್‌ಗೆ ಬರೋ ಮೊದಲೇ ಚಿನ್ನ ಧರಿಸೋದನ್ನ ಬಿಟ್ಟಿದ್ದಾರೆ.

ಇದನ್ನ ನ್ಯೂಸೋ ನ್ಯೂಸು ಪಾಡ್‌ಕಾಸ್ಟ್ ಅಲ್ಲಿಯೇ ಸುಮನ್ ನಗರ್ಕರ್ ಹೇಳಿಕೊಂಡಿದ್ದಾರೆ. ಇದರೊಟ್ಟಿಗೆ ಇವರ ಬಳಿ ಚಿನ್ನ ಮತ್ತು ಬೆಳ್ಳಿಯ ಯಾವುದೇ ಆಭರಣದ ಕಲೆಕ್ಷನ್ ಕೂಡ ಇಲ್ಲ ಅನ್ನುವುದನ್ನು ಹೇಳಿದ್ದಾರೆ.

ಸಿನಿಮಾಗಳ ಕ್ರೇಜ್

ಸುಮನ್ ನಗರ್ಕರ್ ಅವರಿಗೆ ಸಿನಿಮಾಗಳ ಬಗ್ಗೆ ಭಾರೀ ಕ್ರೇಜ್ ಇದೆ. ಅದು ಇಂದು ನಿನ್ನೆಯದಲ್ಲ. ಬಾಲ್ಯದಲ್ಲಿಯೇ ಚಿತ್ರ ನೋಡುವ ಆಸಕ್ತಿ ಬೆಳೆದಿದೆ. ಅದನ್ನ ಸುಮನ್ ನಗರ್ಕರ್ ಅವರ ಪೋಷಕರೆ ಬೆಳೆಸಿದ್ದಾರೆ.

ಕನ್ನಡ ಚಿತ್ರಗಳನ್ನ ನೋಡ್ಬೇಕು ಅಂದ್ರೆ ಆಯಿತು. ಮಕ್ಕಳಿಬ್ಬರನ್ನು ಕರೆದುಕೊಂಡು ಥಿಯೇಟರ್‌ಗೆ ಹೋಗಿ ಬಿಡ್ತಾ ಇದ್ದರು. ಒಂದು ವೇಳೆ ಟಿಕೆಟ್ ಮುಂದಿನ ಶೋದ ಸಿಕ್ಕರೂ ಅಷ್ಟೆ. ಟಿಕೆಟ್ ಕೊಂಡು ಟೈಮ್ ಆಗುವವರೆಗೂ ಮಜೆಸ್ಟಿಕ್ ಅಲ್ಲಿ ಓಡಾಡ್ತಿದ್ದರು. ಆ ರೀತಿ ಸಿನಿಮಾ ನೋಡುವ ಕ್ರೇಜ್ ಅನ್ನ ಇವರು ಬೆಳೆಸಿಕೊಂಡಿದ್ರು.

Beladingala Baale Fame Suman Nagarkar Unknown Facts

ಯಾರ ಬಳಿನೂ ಅವಕಾಶ ಕೇಳಲಿಲ್ಲ..
ಯಾರ ಬಳಿನೂ ಅವಕಾಶ ಕೇಳಲಿಲ್ಲ..

ಸುಮನ್ ನಗರ್ಕರ್ ಅವರು ಯಾರ ಬಿಳಿಗೂ ಅವಕಾಶ ಕೇಳಿಕೊಂಡು ಹೋದವರೇ ಅಲ್ಲ, ತಮ್ಮನ್ನ ಹುಡುಕಿಕೊಂಡು ಬರುವ ಪಾತ್ರಗಳನ್ನ ಅಷ್ಟೆ ಅಚ್ಚಕಟ್ಟಾಗಿಯೇ ಮಾಡಿಕೊಂಡು ಬಂದಿದ್ದಾರೆ.

ಅದಕ್ಕೂ ಹೆಚ್ಚಾಗಿ ಅಂತಹ ಪಾತ್ರಗಳು ಇವರಿಗೆ ಇಷ್ಟ ಆಗಿದ್ದರೆ ಮಾತ್ರ ಒಪ್ಪಿಕೊಳ್ಳುತ್ತಿದ್ದರು. ಹಾಗಾಗಿಯೇ ಇವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡೋಕೆ ಹೋಗ್ಲಿಲ್ಲ. ಆದರೆ, ಇವರು ಕೆನಡಾದಲ್ಲಿಯೇ ಇರೋದು ನೋಡಿ.

ಸುಮನ್ ನಗರ್ಕರ್ ಆಗಾಗ ಬರ್ತಾರೆ

ಸುಮನ್ ನಗರ್ಕರ್ ಅವರು ಕೆನಡಾದಲ್ಲಿಯೇ ಇರುತ್ತಾರೆ. ಬೆಂಗಳೂರಿಗೂ ಬರೋದು ಇದೆ. ಸಿನಿಮಾ ಕಾರ್ಯಕ್ರಮಗಳಲ್ಲೂ ಭಾಗಿ ಆಗುತ್ತಾರೆ.

ಇದನ್ನೂ ಓದಿ: Peddi Movie: ತಂಗಿ ನೋಡಿ ಅಕ್ಕನ ಸೆಲೆಕ್ಟ್ ಮಾಡಿರೋ ಕತೆ; ಪೆದ್ದಿ ಚಿತ್ರಕ್ಕೆ ಜಾನ್ವಿ ಮೊದಲ ಆಯ್ಕೆ ಅಲ್ವೇ ಅಲ್ಲ!

ಬಬ್ರು ಅನ್ನುವ ಒಂದು ಚಿತ್ರವನ್ನು ಇವರು ನಿರ್ಮಾಣ ಮಾಡಿದ್ದರು. ಇದು ಅಮೆರಿಕದಲ್ಲಿಯೇ ಚಿತ್ರೀಕರಣ ಆಗಿದೆ. ಪೂರ್ಣ ಪ್ರಮಾಣದಲ್ಲಿ ಅಮೆರಿಕದಲ್ಲಿ ಚಿತ್ರೀಕರಿಸಿದ ಕನ್ನಡ ಸಿನಿಮಾ ಇದು ಅನ್ನುವ ಹೆಗ್ಗಳಿಕೆ ಕೂಡ ಈ ಚಿತ್ರಕ್ಕಿದೆ. ಬಬ್ರು ಆದ್ಮೇಲೆ ಬ್ರಾಹ್ಮಿ ಅನ್ನೋ ಚಿತ್ರವನ್ನ ಇವರು ಆರಂಭಿಸಿದ್ದರು ಅನ್ನುವ ಮಾಹಿತಿನೂ ಇದೆ. ಹಾಗೆ ಇವರು ಸುಮನ್ ನಗರ್ಕರ್ ಅವರು ಎವರೆಸ್ಟ್ ಬೇಸ್ ಕ್ಯಾಂಪ್ ಚಾರಣ ಮುಗಿಸಿ ಬಂದಿದ್ದಾರೆ.

ಎವರೆಸ್ಟ್ ಕ್ಯಾಂಪ್‌

ಸುಮನ್ ನಗರ್ಕರ್ ಅವರು ಒಂದು ಹೊಸ ದಾಖಲೆ ಮಾಡಿದ್ದಾರೆ. ತಮ್ಮ 54 ನೇ ವಯಸ್ಸಿನಲ್ಲಿ ಪತಿ ಗುರುದೇವ್ ನಾಗರಾಜ ಅವರೊಟ್ಟಿಗೆ ಎವರೆಸ್ಟ್ ಬೇಸ್ ಕ್ಯಾಂಪ್ (EBC) ಚಾರಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇತರರಿಗೂ ಸ್ಪೂರ್ತಿ ಆಗಿದ್ದಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed