Last Updated:
ತಮ್ಮ ಪೂರ್ವಜರ 10 ಎಕರೆ ಜಮೀನಿನಲ್ಲಿ ಚೇತನ್ ಮಾಡಿದ ಪ್ರಯೋಗವೇ ‘ರಂಬೂಟನ್ ಮತ್ತು ಮ್ಯಾಂಗೋಸ್ಟಿನ್’ ಕೃಷಿ. ಆರಂಭದಲ್ಲಿ ನೂರಾರು ಸಸಿಗಳನ್ನು ನೆಟ್ಟು, ಹಗಲಿರುಳು ಬೆವರು ಸುರಿಸಿ ಬೆಳೆಸಿದರು.
ದಕ್ಷಿಣ ಕನ್ನಡ: ಇಂದಿನ ಯುವಕರಿಗೆ ನಗರದ ಲೈಫ್‍ಸ್ಟೈಲ್ ಅಂದರೆ ಇಷ್ಟ. ಕೈತುಂಬಾ ಸಂಬಳ (Salary), ಎಸಿ ಆಫೀಸ್, ಐಷಾರಾಮಿ ಜೀವನ – ಇದಕ್ಕಾಗಿಯೇ ಕಷ್ಟಪಟ್ಟು ಓದಿ, ಸಾಫ್ಟ್ ವೇರ್ ಅಥವಾ ಇಂಜಿನಿಯರಿಂಗ್ ಉದ್ಯೋಗದ (Job) ಹಿಂದೆ ಓಡುತ್ತಾರೆ. ಆದರೆ, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯದ (Sulya) ಈ ಯುವಕ ಮಾತ್ರ ಹಾದಿ ತಪ್ಪಿದರೂ, ಅದು ತನ್ನ ಜೀವನಕ್ಕೆ ಅತಿದೊಡ್ಡ ‘ಬಂಪರ್’ ಅವಕಾಶವಾಗಿ ಬದಲಾಗಲಿದೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ.
ಕೇವಲ ಫಸಲು ಬೆಳೆಯುವುದಷ್ಟೇ ಅಲ್ಲ, ಬೆಂಗಳೂರಿನ ಅಪಾರ್ಟ್‍ಮೆಂಟ್‍ಗಳಿಗೆ ಹೋಗಿ ಮಾರಾಟ ಮಾಡುವುದರಿಂದ ಹಿಡಿದು, ಇಂದು ದೇಶ-ವಿದೇಶಗಳಿಗೆ ಹಣ್ಣುಗಳನ್ನು ರಫ್ತು ಮಾಡುವ ಮಟ್ಟಕ್ಕೆ ಚೇತನ್ ಬೆಳೆದಿದ್ದಾರೆ. ಖರ್ಚುಗಳೆಲ್ಲಾ ಹೋಗಿ ವರ್ಷಕ್ಕೆ 15 ಲಕ್ಷ ರೂಪಾಯಿ ಲಾಭ ಗಳಿಸುತ್ತಿರುವ ಚೇತನ್, ಕೃಷಿ ನಷ್ಟದ ಉದ್ಯೋಗವಲ್ಲ, ಸರಿಯಾಗಿ ಮಾಡಿದರೆ ಇದಕ್ಕಿಂತ ಲಾಭದಾಯಕ ಕೆಲಸ ಮತ್ತೊಂದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
Dakshina Kannada,Karnataka












