Shiva Rajkumar: 9 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಶಿವಣ್ಣ-ವಿಜಯ್ ರಾಘವೇಂದ್ರ; ಮಾಸ್ ಲೀಡರ್ ಕೊನೆ ಸಿನಿಮಾ! | | ACTPnews

Shiva Rajkumar and Vijay Raghavendra Acted After 9 Years in Mahaan Movie


ಮಹಾನ್ ಸಿನಿಮಾ

ಮಹಾನ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅಭಿನಯಿಸಿದ್ದಾರೆ. ಈ ಒಂದು ಮಾಹಿತಿ ಅಧಿಕೃತವಾಗಿಯೇ ಹೊರ ಬಂದಿದೆ. ಚಿತ್ರದಲ್ಲಿ ಶಿವಣ್ಣ ನಿರ್ವಹಿಸಿದ ಪಾತ್ರದ ಲುಕ್ ಆ್ಯಂಡ್ ಫೀಲ್ ಕೂಡ ರಿವೀಲ್ ಆಗಿದೆ.
9 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಶಿವಣ್ಣ-ವಿಜಯ್ ರಾಘವೇಂದ್ರ (ಚಿತ್ರ ಕೃಪೆ: ವಿಜಯ್ ರಾಘವೇಂದ್ರ ಇನ್‌ಸ್ಟಾಗ್ರಾಮ್)

ಈ ಚಿತ್ರದಲ್ಲಿ ಇವರು ಒಬ್ಬ ಲಾಯರ್ ಆಗಿದ್ದಾರೆ. ಈ ಲಾಯರ್ ಪಾತ್ರದ ಪೋಸ್ಟರ್ ರಿವೀಲ್ ಆಗಿದೆ. ಇದರ ಜೊತೆಗೆ ಇನ್ನೂ ಒಂದು ವಿಷಯವೂ ರಿವೀಲ್ ಆಗಿದೆ.

‘ಮಹಾನ್’ ವ್ಯಕ್ತಿ ಯಾರು

ಈ ಚಿತ್ರಕ್ಕೆ ಮಹಾನ್ ಅಂತ ಹೆಸರಿಟ್ಟಿದ್ದಾರೆ. ಆದರೆ, ಆ ‘ಮಹಾನ್’ ವ್ಯಕ್ತಿ ಯಾರು ಅನ್ನುವ ಪ್ರಶ್ನೆನೂ ಬರುತ್ತದೆ. ಅದಕ್ಕೆ ಡೈರೆಕ್ಟರ್ ಪಿ.ಸಿ.ಶೇಖರ್ ಉತ್ತರ ಕೊಟ್ಟಿದ್ದಾರೆ.

ಮನೆಯಲ್ಲಿ ನಾವು ತಪ್ಪು ಮಾಡಿದರೆ ಅಪ್ಪ ಮತ್ತು ಅಮ್ಮ ಬುದ್ಧಿ ಹೇಳುತ್ತಾರೆ. ಆದರೆ, ಸಮಾಜದಲ್ಲಿಯೇ ಆ ತಪ್ಪುಗಳಾದರೆ ಏನ್ ಆಗ್ಬೇಕು. ಅದನ್ನ ತಿದ್ದುವ ಕೆಲಸವನ್ನ ಮಹಾನ್ ವ್ಯಕ್ತಿ ಮಾಡ್ತಾರೆ ಅಂತಲೂ ಪಿ.ಸಿ.ಶೇಖರ್ ಹೇಳಿಕೊಂಡಿದ್ದಾರೆ.

ಮಹಾನ್ ವ್ಯಕ್ತಿ ಶಿವಣ್ಣ

ಶಿವರಾಜ್ ಕುಮಾರ್ ಅವರೇ ಈ ಚಿತ್ರದಲ್ಲಿ ‘ಮಹಾನ್’ ವ್ಯಕ್ತಿಯ ಪಾತ್ರ ಮಾಡಿದ್ದಾರೆ. ಇದನ್ನ ಸ್ವತಃ ಪಿ.ಸಿ.ಶೇಖರ್ ಹೇಳಿಕೊಂಡಿದ್ದಾರೆ.

Shiva Rajkumar and Vijay Raghavendra Acted After 9 Years in Mahaan Movie

ಮಹಾನ್ ಸಿನಿಮಾ

(ಚಿತ್ರ ಕೃಪೆ: ವಿಜಯ್ ರಾಘವೇಂದ್ರ ಇನ್‌ಸ್ಟಾಗ್ರಾಮ್)

ಶಿವಣ್ಣನ ಜೊತೆಗೆ ಎಲ್ಲರೂ ಕೆಲಸ ಮಾಡೋಕೆ ಇಷ್ಟಪಡ್ತಾರೆ. ನನಗೂ ಆ ಆಸೆ ಇತ್ತು. ಅದು ಈಗ ಈಡೇರಿದೆ ಅಂತಲೇ ಡೈರೆಕ್ಟರ್ ಪಿ.ಸಿ.ಶೇಖರ್ ಹೇಳಿದ್ದಾರೆ.

ಶಿವಣ್ಣ-ಚಿನ್ನಾರಿ ಮುತ್ತ

ಈ ಹಿಂದೆ ಶಿವಣ್ಣ ಮತ್ತು ವಿಜಯ್ ರಾಘವೇಂದ್ರ ಒಟ್ಟಿಗೆ ಸಿನಿಮಾ ಮಾಡಿದ್ದಾರೆ. ರಿಷಿ ಅನ್ನೋ ಚಿತ್ರದಲ್ಲಿ ಇವರು ನಟಿಸಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಕೂಡ ಆಗಿತ್ತು.

ಮಹಾನ್ ಅಲ್ಲಿ ಏನು

ಮಹಾನ್ ಚಿತ್ರದಲ್ಲಿ ಶಿವಣ್ಣ ಲಾಯರ್ ರೋಲ್ ಮಾಡಿದ್ದಾರೆ. ವಿಜಯ್ ರಾಘವೇಂದ್ರ ಇಲ್ಲಿ ರೈತನ ಪಾತ್ರ ಮಾಡಿದ್ದಾರೆ. ಮಾಸ್ ಲೀಡರ್ ಆದ್ಮೇಲೆ ಶಿವಣ್ಣ ಹಾಗೂ ವಿಜಯ್ ರಾಘವೇಂದ್ರ ನಟಿಸಿರಲಿಲ್ಲ.

Shiva Rajkumar and Vijay Raghavendra Acted After 9 Years in Mahaan Movie

ಮಹಾನ್ ವ್ಯಕ್ತಿ ಶಿವಣ್ಣ

ಆದರೆ, 9 ವರ್ಷದ ಬಳಿಕ ಈಗ ಮಹಾನ್ ಚಿತ್ರದಲ್ಲಿ ಇವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಇವರ ಈ ಚಿತ್ರದಲ್ಲಿ ಮಿತ್ರ ಇದ್ದಾರೆ. ರಾಧಿಕಾ ನಾರಾಯಣ್ ನಟಿಸಿದ್ದಾರೆ. ನಮ್ರತಾ ಗೌಡ, ಕಿರಣ್ ಶ್ರೀನಿವಾಸ್, ವರ್ಷ ಬೋಳಮ್ಮ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಮಹಾನ್ ರೈತರ ಸಿನಿಮಾ

ಈ ಮಹಾನ್ ಚಿತ್ರ ರೈತರ ಬಗೆಗಿನ ಚಿತ್ರವೇ ಆಗಿದೆ. ಈ ಕತೆ ಮೇಲೆ ಡೈರೆಕ್ಟರ್ ಪಿ.ಸಿ.ಶೇಖರ್ ಸಾಕಷ್ಟು ಕೆಲಸ ಮಾಡಿದ್ದಾರೆ. ಅದನ್ನ ಅಷ್ಟೆ ನೀಟ್ ಆಗಿಯೂ ತೆರೆಗೆ ತರ್ತಿದ್ದಾರೆ.

ಇದರ ನಡುವೆ ಒಂದು ಪ್ರಶ್ನೆ ಇತ್ತು. ಈ ಚಿತ್ರಕ್ಕೆ ಮಹಾನ್ ಅನ್ನುವ ಪ್ರಶ್ನೇ ಏನೋ ಇತ್ತು. ಆದರೆ, ಆ ಮಹಾನ್ ವ್ಯಕ್ತಿ ಯಾರು ಅನ್ನೋದು ಕುತೂಹಲವೂ ಇತ್ತು. ಅದಕ್ಕೆ ಈಗ ಶಿವರಾಜ್ ಕುಮಾರ್ ರೂಪದಲ್ಲಿ ತೆರೆ ಬಿದಿದ್ದೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed