Success Story: ಅಜ್ಜಿಯ ಗುಟ್ಟು, ಮೊಮ್ಮಗಳ ಬಿಸಿನೆಸ್; ಸಾಫ್ಟ್‌ವೇರ್ ಉದ್ಯೋಗ ಬಿಟ್ಟು ಲಡ್ಡು ಮಾರಿ ಲಕ್ಷ ಗಳಿಸುತ್ತಿರುವ ಗೃಹಿಣಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಗೋರಲ್ ಉದ್ಯಮಿ ಕಥೆ(Photo credit: The Better India)


Last Updated:

ಗೋರಲ್ ಬೆಂಗಳೂರಿನ ಅಡುಗೆಮನೆಯಿಂದ ಅಜ್ಜಿಯ ರೆಸಿಪಿ ಆಧಾರಿತ ಆರೋಗ್ಯಕರ ಲಡ್ಡು ತಯಾರಿಸಿ, ರಸೋಯಿ ಸ್ಟುಡಿಯೋ ಮೂಲಕ ದಿನಕ್ಕೆ 2 ಕೆಜಿ ಮಾರಾಟ, ಅನಿತಾ ಸಿಂಗ್ ಗೆ ಉದ್ಯೋಗ ನೀಡಿ ಸ್ಫೂರ್ತಿ ಮೂಡಿಸಿದ್ದಾರೆ

ಗೋರಲ್ ಉದ್ಯಮಿ ಕಥೆ(Photo credit: The Better India)
ಗೋರಲ್ ಉದ್ಯಮಿ ಕಥೆ(Photo credit: The Better India)

ಬೆಂಗಳೂರಿನ (Bengaluru) ಗದ್ದಲದ ನಡುವೆ ಒಂದು ಪುಟ್ಟ ಅಡುಗೆಮನೆಯಿಂದ ( Kitchen) ಹೊರಬರುತ್ತಿರುವ ಬೆಲ್ಲ ಮತ್ತು ತುಪ್ಪದ ಸುವಾಸನೆ ಇಂದು 300ಕ್ಕೂ ಹೆಚ್ಚು ಕುಟುಂಬಗಳ ನೆಚ್ಚಿನ ತಿಂಡಿಯಾಗಿದೆ. ಇದು ಕೇವಲ ಲಡ್ಡುಗಳ (Laddu) ಕಥೆಯಲ್ಲ, ಸೋಲನ್ನು ಗೆಲುವಾಗಿ ಪರಿವರ್ತಿಸಿದ ಒಬ್ಬ ಮಹಿಳೆಯ ದಿಟ್ಟ ಪಯಣ. ಯಾರಿವರು? ಏನಿದು ಅಜ್ಜಿಯ (Grand Mother) ಗುಟ್ಟು, ಮೊಮ್ಮಗಳ ಬಿಸಿನೆಸ್ ಗೊತ್ತಾ?

ಯಾರು ಈ ಗೋರಲ್?

ಕಷ್ಟದ ಬಾಲ್ಯ, 3ನೇ ತರಗತಿಯಲ್ಲೇ ಕುಟುಂಬದ ಜವಾಬ್ದಾರಿ, ಹಣಕಾಸಿನ ಮುಗ್ಗಟ್ಟು ಇವೆಲ್ಲವೂ ಗೋರಲ್ ಅವರನ್ನು ಕುಗ್ಗಿಸಲಿಲ್ಲ. ಬದಲಾಗಿ, ಆಹಾರದ ಬೆಲೆ ಏನು ಎಂಬುದನ್ನು ಕಲಿಸಿಕೊಟ್ಟವು. 10ನೇ ತರಗತಿಯಲ್ಲೇ ಪೂರ್ಣ ಪ್ರಮಾಣದ ಅಡುಗೆಯ ಜವಾಬ್ದಾರಿ ಹೊತ್ತ ಇವರು, ಇಂದು ‘ರಸೋಯಿ ಸ್ಟುಡಿಯೋ’ ಮೂಲಕ ಬೆಂಗಳೂರಿನಲ್ಲಿ ಸಂಚಲನ ಮೂಡಿಸುತ್ತಿದ್ದಾರೆ ಎಂದು ದಿ ಬೆಟ್ಟರ್ ಇಂಡಿಯಾ ವೆಬ್ ಸೈಟ್ ವರದಿ ಮಾಡಿದೆ.
ಏನಿದು ‘ರಸೋಯಿ ಸ್ಟುಡಿಯೋ’ ವಿಶೇಷ?

ನಾವು ಇಂದು ಮಾರುಕಟ್ಟೆಯಲ್ಲಿ ತಿನ್ನುವ ಬಹುತೇಕ ತಿಂಡಿಗಳು ಮೈದಾ ಮತ್ತು ಸಕ್ಕರೆಯಿಂದ ಕೂಡಿರುತ್ತವೆ. ಆದರೆ ಗೋರಲ್ ಅವರ ಲಡ್ಡುಗಳಲ್ಲಿ ಮೈದಾಕ್ಕೆ ಜಾಗವಿಲ್ಲ. ಅಜ್ಜಿಯ ಕಾಲದ ತರ್ಕದೊಂದಿಗೆ ರಾಗಿ, ಖರ್ಜೂರ, ಜೇನುತುಪ್ಪ ಮತ್ತು ಮಖಾನಾಗಳನ್ನು ಬಳಸಿ ಇವರು ತಯಾರಿಸುವ ಲಡ್ಡುಗಳು ಆರೋಗ್ಯದ ಗಣಿಯಾಗಿವೆ. ಕೇವಲ ವಾಟ್ಸಾಪ್ ಮೂಲಕವೇ ಪ್ರಚಾರ ಪಡೆದ ಇವರು, ಇಂದು ದಿನಕ್ಕೆ ಸರಾಸರಿ 2 ಕೆಜಿ ಲಡ್ಡುಗಳನ್ನು ಮಾರಾಟ ಮಾಡುತ್ತಿದ್ದಾರೆ. ರಸೋಯ್ ಸ್ಟುಡಿಯೋ ಎರಡು ವರ್ಷಗಳ ಹಿಂದೆ ನೋಂದಾಯಿಸಲ್ಪಟ್ಟಿತು. ವಾಟ್ಸಾಪ್ ಮೂಲಕವೇ ಈ ಬಉಸಿನೆಸ್ ಎಲ್ಲೆಡೆ ಹಬ್ಬದೆ.

ಕೆಲಸ ಸಿಗದಿದ್ದಾಗ ಹುಟ್ಟಿದ ಉದ್ಯಮಿ

ಹೆಚ್.ಆರ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಗೋರಲ್ ಅವರಿಗೆ ಮರಳಿ ವೃತ್ತಿಜೀವನಕ್ಕೆ ಹೋಗಲು ಹಾದಿ ಸುಲಭವಿರಲಿಲ್ಲ. ಆದರೆ, ನನ್ನದೇ ಆದದ್ದನ್ನು ಸಾಧಿಸಬೇಕು ಎಂಬ ಅವರ ಹಠ ಮತ್ತು ಯೋಗ್ಯತಾ ಪರೀಕ್ಷೆಯ ಫಲವಾಗಿ ಅವರಲ್ಲಿದ್ದ ಉದ್ಯಮಿ ಜಾಗೃತಗೊಂಡರು. ಇಂದು ಅವರು ಕೇವಲ ಉದ್ಯಮಿಯಷ್ಟೇ ಅಲ್ಲ, ಅನಿತಾ ಸಿಂಗ್ ಎಂಬುವವರಿಗೆ ಉದ್ಯೋಗ ನೀಡಿ ಬೆಳೆಸುತ್ತಿದ್ದಾರೆ.

ನಿಮಗೂ ಸ್ಫೂರ್ತಿ ಬೇಕೇ?

ಯಾವುದೇ ದೊಡ್ಡ ಹೂಡಿಕೆ ಇಲ್ಲದೆ, ಕೇವಲ ಮನೆಯ ಅಡುಗೆಮನೆಯಿಂದ ಪ್ರಾರಂಭಿಸಿ, ಇಂದು ನೂರಾರು ಕುಟುಂಬಗಳಿಗೆ ‘ಶುದ್ಧ ಆಹಾರ’ ನೀಡುತ್ತಿರುವ ಗೋರಲ್ ಅವರ ಕಥೆ ಪ್ರತಿಯೊಬ್ಬರಿಗೂ ಸ್ಫೂರ್ತಿ. ನಿಜವಾದ ಪದಾರ್ಥಗಳನ್ನು ಪ್ರೀತಿಯಿಂದ ತಯಾರಿಸಿದರೆ, ಮಾರುಕಟ್ಟೆ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂಬುದು ಇವರ ಮಂತ್ರ.

(Source: The Better India)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed