ತುಂಬಾಡ್ಚಿ ಮಂಜುಳಾ
(ಚಿತ್ರ ಕೃಪೆ: ಜೀಸ್ಟುಡಿಯೋ ಮರಾಠಿ ಇನ್‌ಸ್ಟಾಗ್ರಾಮ್)
ಆದರೆ, ಸು ಫ್ರಮ್ ಸೋ ಚಿತ್ರ ತಂಡದಿಂದ ಯಾರೂ ಈ ಮರಾಠಿ ಚಿತ್ರಕ್ಕೆ ಕೆಲಸ ಮಾಡಿಲ್ಲ. ಪಕ್ಕಾ ಮರಾಠಿ ಸಿನಿಮಾ ತಂಡವೇ ಸು ಫ್ರಮ್ ಸೋ ಚಿತ್ರವನ್ನ ಮರಾಠಿಗೆ ತಂದಿದೆ.
ತುಂಬಾಡ್ಚಿ ಮಂಜುಳಾ ಚಿತ್ರವನ್ನ ವಿವಿಧ್ ಕೊರ್ಗಾವ್ಕರ್ ಡೈರೆಕ್ಷನ್ ಮಾಡಿದ್ದಾರೆ. ಜಿತೇಂದ್ರ ಜೋಶಿ, ಓಂ ಭೂತ್ಕರ್, ಮಕರಂದ್ ಅನಾಸ್ಪುರೆ, ಸಾಯಿ ತಮ್ಹಾಂಕರ್, ಉಷಾ ನಾಡಕರ್ಣಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಸು ಫ್ರಮ್ ಸೋ ಚಿತ್ರದ ರವಿ ಅಣ್ಣನ ಪಾತ್ರವನ್ನ ಮರಾಠಿಯಲ್ಲಿ ಜಿತೇಂದ್ರ ಜೋಶಿ ಮಾಡಿದ್ದಾರೆ. ಯಾವ ಪಾತ್ರವನ್ನ ಯಾರು ಮಾಡಿದ್ದಾರೆ ಅನ್ನೋದು ಹೀಗಿದೆ.
ರವಿ ಅಣ್ಣ- ಜಿತೇಂದ್ರ ಜೋಶಿ
ಅಶೋಕ- ಓಂ ಭೂತ್ಕರ್
ಭಾನು- ಸಾಯಿ ತಮ್ಹಾಂಕರ್
ರಾಜ್ ಬಿ ಶೆಟ್ಟಿ (ಕರುಣಾಕರ ಗುರೂಜಿ)-ಗಣೇಶ್ ಪಂಡಿತ್ ಈ ರೋಲ್ ಮಾಡಿದ್ದಾರೆ. ಇನ್ನು ಹಳ್ಳಿಯ ಜನರ ಪಾತ್ರಗಳನ್ನ ಮರಾಠಿ ಚಿತ್ರರಂಗದ ಹಾಸ್ಯ ಕಲಾವಿದರೇ ಮಾಡಿದ್ದಾರೆ.
ಎಷ್ಟು ಲಕ್ಷಕ್ಕೆ ರೀಮೇಕ್ ಹಕ್ಕು ಸೇಲ್
(ಚಿತ್ರ ಕೃಪೆ: ಜೀಸ್ಟುಡಿಯೋ ಮರಾಠಿ ಇನ್‌ಸ್ಟಾಗ್ರಾಮ್)
ಕನ್ನಡದ ಸು ಫ್ರಮ್ ಸೋ ಚಿತ್ರದ ರೀಮೇಕ್ ಹಕ್ಕು ಒಳ್ಳೆ ರೇಟಿಗೆ ಹೋಗಿದೆ. ಅದು ಲಕ್ಷದ ಲೆಕ್ಕದಲ್ಲಿಯೇ ಇದೆ. ಜೀ ಸ್ಟುಡಿಯೋ ಈ ಚಿತ್ರದ ರೀಮೇಕ್ ಹಕ್ಕನ್ನ 25 ಲಕ್ಷಕ್ಕೆ ಖರೀದಿಸಿದೆ.
ಅದು ಬಿಟ್ಟರೆ, ಮರಾಠಿ ಚಿತ್ರ ಪ್ರೇಮಿಗಳು ಈ ಚಿತ್ರವನ್ನ ಎಂಜಾಯ್ ಮಾಡ್ತಾರೆ ಅನಿಸುತ್ತದೆ. ಪಕ್ಕಾ ಕಾಮಿಡಿ ಚಿತ್ರವಾಗಿಯೇ ಇದು ಹೊರ ಹೊಮ್ಮಿದೆ. ಜೂನ್-5 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ.
ಕನ್ನಡದ ಸು ಫ್ರಮ್ ಸೋ ಚಿತ್ರ ಕಳೆದ ವರ್ಷ 25.07.2025 ರಂದು ರಿಲೀಸ್ ಆಗಿತ್ತು. ಸುಮಾರು 6 ಕೋಟಿ ಬಜೆಟ್ ಅಲ್ಲಿ ಈ ಚಿತ್ರ ತಯರಾಗಿತ್ತು.
ಆದರೆ, ಈ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ ಹಂಗಾಮಾ ಮಾಡಿದೆ. 125 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಈ ಚಿತ್ರ ಹೊಸ ಅಲೆಯನ್ನ ಎಬ್ಬಿಸಿತ್ತು ಅಂತ ಹೇಳಬಹುದು.












