Last Updated:
ಆರ್ಸಿಬಿ ಮತ್ತು ಎಸ್ಆರ್ಹೆಚ್ ತಂಡಗಳು ಲೀಗ್ ಹಂತದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡುತ್ತಿವೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಹೆಚ್ ತಂಡ ಆರ್ಸಿಬಿಗೆ 256 ರನ್ಗಳನ್ನ ಟಾರ್ಗೆಟ್ ನೀಡಿದೆ. ಇದರ ನಡುವೆ ಆರ್ಸಿಬಿ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಳ್ಳಲು ಎಷ್ಟು ರನ್ ಗಳಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಐಪಿಎಲ್ (IPL) 2026 ರ 67ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎದುರಿಸುತ್ತಿದೆ. ಹೈದರಾಬಾದ್ನ ರಾಜೀವ್ ಗಾಂಧಿ (Rajiv Gandhi) ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ರೋಚಕ ಪಂದ್ಯ (Match) ನಡೆಯುತ್ತಿದೆ. ಸನ್ರೈಸರ್ಸ್ ಹೈದರಾಬಾದ್ ಆರ್ಸಿಬಿ ಗೆಲುವಿಗೆ 256 ರನ್ಗಳ ಗುರಿಯನ್ನು ನೀಡಿದೆ. ಎರಡೂ ತಂಡಗಳು ಪ್ಲೇಆಫ್ (Playoff) ಗೆ ಪ್ರವೇಶಿಸಿದ್ದು, ಅಗ್ರ 2 ಸ್ಥಾನಗಳಿಗೆ ಭಾರೀ ಪೈಪೋಟಿ ನಡೆಯುತ್ತಿದೆ. ಪ್ರಸ್ತುತ ಮೂರನೇ ಸ್ಥಾನದಲ್ಲಿರುವ ಹೈದರಾಬಾದ್ ತಂಡಕ್ಕೆ ಕ್ವಾಲಿಫೈಯರ್-1 (Qualifier 1) ಆಡಲು ಕೊನೆಯ ಅವಕಾಶವಿದೆ. ಮತ್ತೊಂದೆಡೆ ಆರ್ಸಿಬಿ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಳ್ಳಲು ಎಷ್ಟು ರನ್ ಗಳಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಎಸ್ಆರ್ಹೆಚ್ ಮತ್ತು ಆರ್ಸಿಬಿ ತಂಡಗಳು ಈಗಾಗಲೇ ಪ್ಲೇಆಫ್ಗೆ ಅರ್ಹತೆ ಪಡೆದಿವೆ. ಎಸ್ಆರ್ಹೆಚ್ ತಂಡವು ಆಡಿರುವ 13 ಪಂದ್ಯಗಳಲ್ಲಿ ಎಂಟು ಪಂದ್ಯಗಳನ್ನು ಗೆದ್ದು 16 ಅಂಕಗಳನ್ನು ಹೊಂದಿದೆ. ಆರ್ಸಿಬಿ ತಂಡವು ಆಡಿರುವ 13 ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳನ್ನು ಗೆದ್ದು 18 ಅಂಕಗಳನ್ನು ಹೊಂದಿದೆ. ನೆಟ್ ರನ್ ರೇಟ್ ವಿಷಯದಲ್ಲಿ ಆರ್ಸಿಬಿ ಹೈದರಾಬಾದ್ ತಂಡಕ್ಕಿಂತ ತುಂಬಾ ಮುಂದಿದೆ. ಆರ್ಸಿಬಿ ರನ್ ರೇಟ್ +1.065 ಇದ್ದರೆ, ಹೈದರಾಬಾದ್ +0.350 ಹೊಂದಿದೆ.
ಹೈದರಾಬಾದ್ ತಂಡವು ಅಗ್ರ 2 ಸ್ಥಾನ ಪಡೆಯಲು, ಆರ್ಸಿಬಿ ವಿರುದ್ಧದ ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲಬೇಕಾಗುತ್ತದೆ. ಆದರೆ ಹೈದರಾಬಾದ್ಗೆ ಈ ಲೆಕ್ಕಾಚಾರ ಸುಲಭವಲ್ಲವಾಗಿಲ್ಲ. ಹೌದು, ಪಂದ್ಯದಲ್ಲಿ ಆರ್ಸಿಬಿ ತಂಡಕ್ಕೆ 256 ರನ್ಗಳ ಗುರಿಯನ್ನು ನೀಡಿದ್ದರೂ, ಎಸ್ಆರ್ಹೆಚ್ ಕಡಿಮೆ ಅಂತರದಿಂದ ಹಾಲಿ ಚಾಂಪಿಯನ್ಗಳನ್ನು ಕಟ್ಟಿಹಾಕುವುದು ಅಸಾಧ್ಯ.
ಎಸ್ಆರ್ಹೆಚ್ ನೀಡಿರುವ 256 ರನ್ಗಳ ಗುರಿಯನ್ನು ಬೆನ್ನಟ್ಟಿರುವ ಆರ್ಸಿಬಿ ಉತ್ತಮ ಆರಂಭ ಪಡೆದುಕೊಳ್ಳುತ್ತಿದೆ. ಐಪಿಎಲ್ 2026 ರ ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ ಮೊದಲ ಸ್ಥಾನದಲ್ಲಿದೆ. ಆರ್ಸಿಬಿ ಮೊದಲ ಸ್ಥಾನದಲ್ಲಿರಲು ಪ್ರಮುಖ ಕಾರಣ ರನ್ ರೇಟ್ +1.065. ಹೀಗಾಗಿ ಈ ಪಂದ್ಯದಲ್ಲಿ ಆರ್ಸಿಬಿ ಸೋತರೂ, ಅಗ್ರಸ್ಥಾನದಲ್ಲಿ ಉಳಿಯಲು ಕನಿಷ್ಠ 180 ಪ್ಲಸ್ ರನ್ ಗಳಿಸಬೇಕಾಗಿದೆ.
ಟಾಪ್-2 ರಲ್ಲಿ ಉಳಿಯಲು ಆರ್ಸಿಬಿ ಕನಿಷ್ಠ 166 ರನ್ ಗಳಿಸಬೇಕಾಗಿದೆ. ಒಂದು ವೇಳೆ ಆರ್ಸಿಬಿ 160 ರನ್ಗಳ ಒಳಗೆ ಆಲೌಟಾದರೆ, ಗುಜರಾತ್ ಟೈಟನ್ಸ್ ಮತ್ತು ಎಸ್ಆರ್ಹೆಚ್ ಟಾಪ್-2 ರಲ್ಲಿ ಸ್ಥಾನ ಪಡೆಯಲಿವೆ. ಈ ಮೂಲಕ ಕ್ವಾಲಿಫೈಯರ್-1 ರ ಪಂದ್ಯವನ್ನು ಜಿಟಿ ಮತ್ತು ಎಸ್ಆರ್ಹೆಚ್ ಆಡಲಿವೆ. ಟೂರ್ನಿಯುದ್ದಕ್ಕೂ ಆರ್ಸಿಬಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಆರ್ಸಿಬಿ ತಂಡವನ್ನು 160 ರನ್ಗಳ ಒಳಗೆ ಕಟ್ಟಿಹಾಕುವುದು ಎಸ್ಆರ್ಹೆಚ್ ತಂಡಕ್ಕೆ ಸವಾಲಾಗಿದೆ.
ಎಸ್ಆರ್ಹೆಚ್ ವಿರುದ್ಧ ಆರ್ಸಿಬಿ ಚರಿತ್ರೆ ಸೃಷ್ಟಿಸುವ ಅವಕಾಶವನ್ನು ಹೊಂದಿದೆ. ಪಂದ್ಯದಲ್ಲಿ ಆರ್ಸಿಬಿ 256 ರನ್ಗಳ ಗುರಿಯನ್ನು ಬೆನ್ನಟ್ಟಿದರೆ, ಒಂದು ದಾಖಲೆ ಸೃಷ್ಟಿಯಾಗುತ್ತದೆ. ಎಸ್ಆರ್ಹೆಚ್ ವಿರುದ್ಧ ವಿರುದ್ಧ ಇಲ್ಲಿವರೆಗ ಅತ್ಯಧಿಕ ಮೊತ್ತವನ್ನು ಆರ್ಸಿಬಿ ಚೇಸ್ ಮಾಡಿಲ್ಲ. 2024 ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಎಸ್ಆರ್ಹೆಚ್ 287 ರನ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆಯಿತು.
ಈ ದಾಖಲೆಯ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತ್ತು. ಈ ಮೂಲಕ ಆರ್ಸಿಬಿ 25 ರನ್ಗಳ ಸೋಲನ್ನು ಎದುರಿಸಿತ್ತು. ಈಗ ಎಸ್ಆರ್ಹೆಚ್ ವಿರುದ್ಧ ಆರ್ಸಿಬಿ ದಾಖಲೆ ಸೃಷ್ಟಿಸುವ ಅವಕಾಶವನ್ನು ಹೊಂದಿದೆ.
SRH vs RCB: ಆರ್ಸಿಬಿ ಇಷ್ಟು ರನ್ ಗಳಿಸಿದರೆ ಮೊದಲ ಸ್ಥಾನ ಸೇಫ್! ಎಸ್ಆರ್ಹೆಚ್ ವಿರುದ್ಧ ಚರಿತ್ರೆ ಸೃಷ್ಟಿಸುತ್ತಾ ಹಾಲಿ ಚಾಂಪಿಯನ್?













