SRH vs RCB: ಕೃನಾಲ್ ಪಾಂಡ್ಯ ಬೌಲಿಂಗ್ ನೋಡಿ ಕಾವ್ಯಾ ಮಾರನ್ ಶಾಕ್! ಬೌನ್ಸರ್​ ನೋಡಿ ಅಸಹನೆ ಹೊರ ಹಾಕಿದ ಎಸ್​​ಆರ್​​ಹೆಚ್​ ಮಾಲಕಿ | ಕ್ರೀಡಾ ಸುದ್ದಿ | ACTPnews

ಕಾವ್ಯ ಮಾರನ್- ಕೃನಾಲ್ ಪಾಂಡ್ಯ


Last Updated:

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪಿನ್ನರ್ ಕೃನಾಲ್ ಪಾಂಡ್ಯ ತಮ್ಮ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕೃನಾಲ್ ಪಾಂಡ್ಯ ಬೌಲಿಂಗ್ ಅನ್ನು ಲೈವ್ ಆಗಿ ವೀಕ್ಷಿಸಿದ ಕಾವ್ಯ ಮಾರನ್ ಆಘಾತಕ್ಕೊಳಗಾಗಿದ್ದಾರೆ.

ಕಾವ್ಯ ಮಾರನ್- ಕೃನಾಲ್ ಪಾಂಡ್ಯ
ಕಾವ್ಯ ಮಾರನ್- ಕೃನಾಲ್ ಪಾಂಡ್ಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಮುಗಿದಿದ್ದರೂ, ಅದಕ್ಕೆ ಸಂಬಂಧಿಸಿದ ವಿವಾದಗಳು ಕಡಿಮೆಯಾಗುತ್ತಿಲ್ಲ. ಪಂದ್ಯದಲ್ಲಿ ಆರ್‌ಸಿಬಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರ ಬೌಲಿಂಗ್ ಶೈಲಿಯ ಬಗ್ಗೆ ಎಸ್‌ಆರ್‌ಹೆಚ್ ಮಾಲಕಿ ಕಾವ್ಯಾ ಮಾರನ್ ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೃನಾಲ್ ಪಾಂಡ್ಯ ಬೌಲಿಂಗ್ ಮಾಡುವಾಗ ‘ಚಕ್’ ಮಾಡುತ್ತಿದ್ದರು ಎಂಬ ಕಾವ್ಯಾ ಮಾರನ್ ಅವರ ಆರೋಪವು ಈಗ ಕ್ರಿಕೆಟ್ ಗಲ್ಲಿಗಳಲ್ಲಿ ಚರ್ಚೆ ನಡೆಯುತ್ತಿದೆ.

ಸ್ಪಿನ್ನರ್ ಕೃನಾಲ್ ಪಾಂಡ್ಯ ಇತ್ತೀಚೆಗೆ ಟಿ20 ಕ್ರಿಕೆಟ್‌ನಲ್ಲಿ ಸ್ಪೋಟಕ ಬ್ಯಾಟರ್​​ಗಳನ್ನು ತಡೆಯಲು ಹೊಸ ವಿಧಾನಗಳನ್ನು ಪ್ರಯೋಗಿಸುತ್ತಿದ್ದಾರೆ. ಅವರು ಬೌನ್ಸರ್‌ಗಳು ಮತ್ತು ಯಾರ್ಕರ್‌ಗಳೊಂದಿಗೆ ಬ್ಯಾಟರ್​​ಗಳನ್ನು ಕಟಗಟಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಮೇ 22 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ರೋಚಕ ಪಂದ್ಯದಲ್ಲಿ, ಕೃನಾಲ್ ಪಾಂಡ್ಯ ಎಸ್‌ಆರ್‌ಹೆಚ್ ಬ್ಯಾಟರ್​​ಗಳನ್ನು ತಡೆಯಲು ತಮ್ಮ ಎಲ್ಲಾ ಅಸ್ತ್ರಗಳನ್ನು ಬಳಸಿದರು.

ಕಾವ್ಯ ಮಾರನ್ ಶಾಕ್ ಆಗಿದ್ದೇಗೆ?

ಸನ್‌ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್‌ನ 17 ನೇ ಓವರ್‌ನ ಕೊನೆಯ ಎಸೆತದಲ್ಲಿ, ಕೃನಾಲ್ ಪಾಂಡ್ಯ ನಿತೀಶ್ ಕುಮಾರ್ ರೆಡ್ಡಿಗೆ ವೇಗದ ಬೌನ್ಸರ್ ಎಸೆದರು. ಕೃನಾಲ್ ಪಾಂಡ್ಯ ಬೌಲಿಂಗ್ ಅನ್ನು ಲೈವ್ ಆಗಿ ವೀಕ್ಷಿಸಿದ ಕಾವ್ಯ ಮಾರನ್ ಶಾಕ್ ಆದರು. ಸ್ಟ್ಯಾಂಡ್‌ನಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದ ಕಾವ್ಯ ಮಾರನ್, ಕೃನಾಲ್ ಪಾಂಡ್ಯ ‘ಚಕ್’ ಮಾಡುತ್ತಿರುವಂತೆ ಸನ್ನೆ ಮಾಡುವ ಮೂಲಕ ತನ್ನ ತೀವ್ರ ಅಸಹನೆಯನ್ನು ವ್ಯಕ್ತಪಡಿಸಿದರು. ಕಾವ್ಯಾ ಪಕ್ಕದಲ್ಲಿದ್ದ ಟಾಲಿವುಡ್ ಹೀರೋ ವಿಕ್ಟರಿ ವೆಂಕಟೇಶ್ ಅವರೊಂದಿಗಿನ ಮಾತನಾಡಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಲೆಗೆ ಬಿದ್ದ ಕ್ಲಾಸೆನ್

ಇಶಾನ್ ಕಿಶನ್ ಕ್ರೀಸ್‌ನಲ್ಲಿದ್ದಾಗ ಆರ್‌ಸಿಬಿ ನಾಯಕ ರಜತ್ ಪಾಟೀದಾರ್, ಕೃನಾಲ್ ಪಾಂಡ್ಯ ಅವರಿಂದ ಬೌಲಿಂಗ್ ಮಾಡಿಸಲಿಲ್ಲ. ಸ್ಪೋಟಕ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಕ್ರೀಸ್‌ಗೆ ಬಂದ ತಕ್ಷಣ ಚೆಂಡನ್ನು ಕೃನಾಲ್ ಪಾಂಡ್ಯಗೆ ನೀಡಿದರು. 17ನೇ ಓವರ್ ಬೌಲಿಂಗ್ ಮಾಡಲು ಹಿಂತಿರುಗಿದ ಕೃನಾಲ್ ಪಾಂಡ್ಯ, ಅದೇ ಓವರ್‌ನ ಎರಡನೇ ಎಸೆತದಲ್ಲಿ ಕ್ಲಾಸೆನ್ (51) ಅವರನ್ನು ಔಟ್ ಮಾಡಿದರು. ಅದೇ ಓವರ್‌ನಲ್ಲಿ, ನಿತೀಶ್ ರೆಡ್ಡಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಇದಾದ ಬಳಿಕ ಕೊನೆಯ ಎಸೆತದಲ್ಲಿ ಕೃನಾಲ್ ಬೌಲಿಂಗ್ ಶೈಲಿ ಬಗ್ಗೆ ಕಾವ್ಯ ಆಕ್ಷೇಪಿಸಿದರು.

ಎಸ್​​ಆರ್​ಹೆಚ್ ತಂಡಕ್ಕೆ ಹಿನ್ನಡೆ

ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ತಂಡವು 255 ರನ್‌ಗಳ ಬೃಹತ್ ಸ್ಕೋರ್ ಗಳಿಸಿ ಆರ್‌ಸಿಬಿಯನ್ನು 55 ರನ್‌ಗಳಿಂದ ಸೋಲಿಸಿತು. ಪಂದ್ಯವನ್ನು ಸೋತರೂ, ಆರ್‌ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿತು. ಎಸ್‌ಆರ್‌ಹೆಚ್ ನೇರವಾಗಿ ಕ್ವಾಲಿಫೈಯರ್ -1 ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

ಆರ್‌ಸಿಬಿ ಪರವಾಗಿ ರಜತ್ ಪಾಟಿದಾರ್ (56), ವೆಂಕಟೇಶ್ ಅಯ್ಯರ್ (44), ಮತ್ತು ಕೃನಾಲ್ ಪಾಂಡ್ಯ (ಅಜೇಯ 41) ಅವರ ಪ್ರದರ್ಶನದೊಂದಿಗೆ, ತಂಡವು 200 ರನ್‌ಗಳ ಗಡಿ ದಾಟುವ ಮೂಲಕ ನಿವ್ವಳ ರನ್ ದರಕ್ಕೆ ತೊಂದರೆಯಾಗದಂತೆ ನೋಡಿಕೊಂಡಿತು. ಹೈದರಾಬಾದ್ ಪಂದ್ಯವನ್ನು ಗೆದ್ದರೂ, ಮೂರನೇ ಸ್ಥಾನದಲ್ಲೇ ಉಳಿಯಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed