Sreeleela: ವೇದಿಕೆ ಮೇಲೆಯೇ ನಟಿ ಶ್ರೀಲೀಲಾಗೆ ಭಾರೀ ಅವಮಾನ! ಯೋಗ ದಿನ ಕಾರ್ಯಕ್ರಮದಲ್ಲಿ ಆಗಿದ್ದೇನು ಗೊತ್ತಾ? | | ACTPnews

ಶ್ರೀಲೀಲಾ


Last Updated:

ನಟಿ ಶ್ರೀಲೀಲಾಗೆ ಅವಮಾನ ಆಗಿದೆ ಎಂಬ ವಿಚಾರವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಏನಪ್ಪಾ ವಿಚಾರ ಅಂತೀರಾ? ಹಾಗಾದ್ರೆ ಕಂಪ್ಲೀಟ್ ಸ್ಟೋರಿ ಓದಿ.

ಶ್ರೀಲೀಲಾ
ಶ್ರೀಲೀಲಾ

ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ಶ್ರೀಲೀಲಾ (Sreeleela) ತಮ್ಮ ಅಭಿನಯದ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶ್ರೀಲೀಲಾ, ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ. ಆದ್ರೆ ಇದೀಗ ನಟಿಗೆ ಅವಮಾನ ಆಗಿದೆ ಎಂಬ ವಿಚಾರವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಏನಪ್ಪಾ ವಿಚಾರ ಅಂತೀರಾ? ಹಾಗಾದ್ರೆ ಕಂಪ್ಲೀಟ್ ಸ್ಟೋರಿ ಓದಿ.

ಇತ್ತೀಚಿಗೆ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ 22ರಂದು ಮುಂಬೈನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆರೋಗ್ಯಕರ ಜೀವನಶೈಲಿ ಮತ್ತು ಯೋಗದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಅವರ ಪತ್ನಿ ಅಮೃತಾ ಫಡ್ನವೀಸ್, ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಇತರ ಹಲವು ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳು ಉಪಸ್ಥಿತರಿದ್ದರು. ದಕ್ಷಿಣ ಭಾರತದ ಯುವ ನಟಿ ಶ್ರೀಲೀಲಾ ಕೂಡ ವಿಶೇಷ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದರು.

ಇನ್ನು ಕಾರ್ಯಕ್ರಮ ಬಹುತೇಕ ಸುಸೂತ್ರವಾಗಿ ಸಾಗುತ್ತಿದ್ದರೂ, ಅದರ ಕೊನೆಯಲ್ಲಿ ನಡೆದ ಆ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೇದಿಕೆಯಲ್ಲಿ ಶ್ರೀಲೀಲಾ ಮತ್ತು ಇತರ ಗಣ್ಯರು ಇದ್ದ ವೇಳೆ ನಡೆದ ಕ್ಷಣವೊಂದರ ವಿಡಿಯೋ ಇದೀಗ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಏನಪ್ಪಾ ವಿಚಾರ ?

ಕಾರ್ಯಕ್ರಮದ ಬಳಿಕ ಅಮೃತಾ ಫಡ್ನವೀಸ್, ಅವರ ಮಗಳು ಮತ್ತು ಶ್ರೀಲೀಲಾ ವೇದಿಕೆ ಮೇಲೆ ಫೋಟೋಗಳಿಗೆ ಪೋಸ್ ನೀಡಿದರು. ಈ ವೇಳೆ ಸಿಎಂ ಪತ್ನಿ ಮತ್ತು ಅವರ ಮಗಳ ಫೋಟೋವನ್ನು ಮಾತ್ರ ತೆಗೆಯುವಂತೆ ಕೋರಿಕೊಂಡರು. ಆಗ ಅಮೃತಾ ಫಡ್ನವೀಸ್ ಶ್ರೀಲೀಲಾ ಅವರ ಜೊತೆ ಪರ್ಮಿಷನ್ ಕೇಳದೆ ಸನ್ನೆ ಮಾಡುವ ಮೂಲಕ ಪಕ್ಕಕ್ಕೆ ಸರಿಯುವಂತೆ ತಿಳಿಸಿದ್ದಾರೆ . ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತಿದ್ದು, ಮುಖ್ಯಮಂತ್ರಿ ಪತ್ನಿಗೆ ಇಷ್ಟೊಂದು ದುರಹಂಕಾರ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶ್ರೀಲೀಲಾ ಮೌನ

ಘಟನೆ ವೈರಲ್ ಆದ ಬಳಿಕವೂ ಶ್ರೀಲೀಲಾ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗೆಯೇ

ಇತ್ತೀಚೆಗೆ ಹಲವು ದೊಡ್ಡ ಬಜೆಟ್ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಶ್ರೀಲೀಲಾ, ದಕ್ಷಿಣ ಭಾರತ ಮಾತ್ರವಲ್ಲದೆ ಬಾಲಿವುಡ್‌ನಲ್ಲಿಯೂ ತಮ್ಮ ಛಾಪನ್ನು ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಈ ಸಮಯದಲ್ಲಿ ಇಂತಹ ಘಟನೆ ನಡೆದಿರುವುದು ನಟಿಯ ಅಭಿಮಾನಿಗಳಲ್ಲಿ ಬೇಸರ ತಂದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed