Spandana Somanna: ಪ್ಯಾರಿಸ್‌ನಲ್ಲಿ ಬಾಯ್‌ಫ್ರೆಂಡ್ ಪರಿಚಯಿಸಿದ ಕನ್ನಡ ಬಿಗ್‌ಬಾಸ್‌ ಸ್ಪರ್ಧಿ, ಸ್ಪಂದನಾ ಸೋಮಣ್ಣ ಲವರ್ ಯಾರು ಗೊತ್ತಾ? | | ACTPnews

ಸ್ಪಂದನಾ ಸೋಮಣ್ಣ


Last Updated:

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ (Spandana Somanna) ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ.

ಸ್ಪಂದನಾ ಸೋಮಣ್ಣ
ಸ್ಪಂದನಾ ಸೋಮಣ್ಣ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ (Spandana Somanna) ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ಪ್ಯಾರಿಸ್ ಪ್ರವಾಸದ ವೇಳೆ ಪ್ರಿಯಕರನ ಜೊತೆಗಿನ ವಿಶೇಷ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸುವಂತೆ ಪ್ರಿಯಕರನ ಮುಖ ಹಾಗೂ ಹೆಸರನ್ನು ಮಾತ್ರ ರಹಸ್ಯವಾಗಿಯೇ ಉಳಿಸಿಕೊಂಡಿದ್ದಾರೆ.

ಸ್ಪಂದನಾ ಸೋಮಣ್ಣ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪ್ಯಾರಿಸ್‌ನ ಪ್ರಸಿದ್ಧ ಐಫೆಲ್ ಟವರ್ ಮುಂದೆ ನಿಂತಿರುವ ಎರಡು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಸ್ಪಂದನಾ ಒಬ್ಬ ಯುವಕನ ಕೈ ಹಿಡಿದು ತುಂಬಾನೇ ಖುಷಿಯಿಂದ ನಡೆದುಕೊಂಡು ಹೋಗುತ್ತಿರುವುದು ಕಾಣಬಹುದು. ಆದರೆ ಇಬ್ಬರ ಫೋಟೋ ಕೂಡ ಹಿಂಭಾಗದಿಂದ ತೆಗೆದಿರುವುದರಿಂದ ಯುವಕನ ಮುಖ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಇನ್ನು ನಟಿ ಸ್ಪಂದನಾ ಎರಡು ವಾರಗಳ ಹಿಂದೆಯೇ ಪ್ಯಾರಿಸ್‌ ಪ್ರವಾಸ ಕೈಕೊಂಡಿದ್ದರು. ಆದ್ರೆ ಇದೀಗ ಫೋಟೋಗಳನ್ನು ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ.

ಹಾಗೆಯೇ ಈ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಜೊತೆಗೆ ‘Plot Twist: Paris was not the Main Character!’ ಎಂಬ ಕ್ಯಾಪ್ಷನ್ ನೀಡಿದ್ದಾರೆ. ಪ್ಯಾರಿಸ್ ಪ್ರವಾಸಕ್ಕಿಂತ ತಮ್ಮ ಜೀವನದಲ್ಲಿ ಹೊಸ ವ್ಯಕ್ತಿಯೇ ಮುಖ್ಯ ಎಂಬ ಅರ್ಥವನ್ನು ಪರೋಕ್ಷವಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಸ್ಪಂದನಾ ಹಂಚಿಕೊಂಡ ಈ ಪೋಸ್ಟ್‌ಗೆ ಕನ್ನಡ ಕಿರುತೆರೆಯ ಅನೇಕ ನಟಿಯರು ಹಾಗೂ ಆಪ್ತರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಶುಭಾಶಯಗಳ ಸುರಿಮಳೆಯೇ ಹರಿದುಬಂದಿದ್ದು, ಅಭಿಮಾನಿಗಳೂ ಕೂಡ ಹೊಸ ಜೀವನಕ್ಕೆ ಶುಭ ಹಾರೈಸಿದ್ದಾರೆ.

ಸ್ಪಂದನಾ ಸೋಮಣ್ಣ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿಸಿದ್ದಾಗಲೇ ಅವರ ಬಾಯ್‌ಫ್ರೆಂಡ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ ಆ ಸಂದರ್ಭದಲ್ಲಿ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿರಲಿಲ್ಲ.

ಈಗ ಪ್ಯಾರಿಸ್‌ನಿಂದ ಹಂಚಿಕೊಂಡಿರುವ ಪೋಸ್ಟ್ ಮೂಲಕ ತಮ್ಮ ಪ್ರೇಮ ಜೀವನದ ಬಗ್ಗೆ ಸುಳಿವು ನೀಡಿರುವ ಸ್ಪಂದನಾ, ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಫೋಟೋದಲ್ಲಿ ಪ್ರಿಯಕರನ ಮುಖವನ್ನು ರಿವೀಲ್ ಮಾಡದಿರುವುದು ಮತ್ತು ಹೆಸರನ್ನೂ ಬಹಿರಂಗಪಡಿಸದಿರುವುದು ಈ ಪೋಸ್ಟ್ ವೈರಲ್ ಆಗಲು ಪ್ರಮುಖ ಕಾರಣವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed