Last Updated:
ಜನ ಮಳೆಯಲ್ಲಿ ನಿಂತಿದ್ದಾರೆ. ನನಗೆ ಯಾಕೆ ಛತ್ರಿ ಬೇಕು, ನಾನು ಸ್ವಲ್ಪ ನೆನೆಯುವೆ. ಹೀಗೆ ಕಿಚ್ಚ ಸುದೀಪ್ ಹೇಳಿದ್ದಾರೆ. ರಾಮನಗರದ ಶ್ರೀ ಚಾಮುಂಡೇಶ್ವರಿ ಕರಗ ಉತ್ಸವದಲ್ಲಿ ಕಿಚ್ಚ ಅಷ್ಟೆ ಸಖತ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಆ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಾಮನಗರದಲ್ಲಿ (Ramanagara) ಮಳೆ ಸುರಿತಾನೇ ಇತ್ತು. ಎಲ್ಲರೂ ಮಳೆಯಲ್ಲಿಯೇ ಕಾರ್ಯಕ್ರಮ ನೋಡೋಕೆ ಬಂದಿದ್ದರು. ಸುದೀಪ್ (Sudeepa) ವೇದಿಕೆ ಮೇಲೆ ಇದ್ದರು. ಆದರೆ, ಮೇಲೆ ಛತ್ರಿಗಳನ್ನು ಹಿಡಿಯಲಾಗಿತ್ತು. ಆದರೆ, ಸುದೀಪ್ ಒಂದು ಕೆಲಸ ಮಾಡಿದರು. ಈ ಒಂದು ಮಳೆಯಲ್ಲಿ (Rain) ಜನರೆಲ್ಲ ಮಳೆಯಲ್ಲಿದ್ದಾರೆ. ನಾನು ಹೀಗೆ ಛತ್ರಿ ಕೆಳಗೆ ನಿಂತರೆ ಹೇಗೆ? ಬೇಡ್ವೇ ಬೇಡ, ನಾನೂ ಒಂಚೂರು ಮಳೆಯಲ್ಲಿ ನೆನೆಯುತ್ತೇನೆ ಅಂತಲೇ ಸುದೀಪ್ (Sudeepa) ಛತ್ರ ಪಕ್ಕಕ್ಕೆ ಇಡುವಂತೆ ಹೇಳಿದರು. ಇದು ಇಲ್ಲಿಗೆ ಮುಗಿಯಲಿಲ್ಲ. ಮುಂದೆ ಇದೆ ಓದಿ.
ಶ್ರೀ ಚಾಮುಂಡೇಶ್ವರಿ ಕರಗ ಉತ್ಸವ ಅದ್ಧೂರಿ ಆಗಿಯೇ ಶುರು ಆಗಿದೆ. ಕಲಾವಿದರೆಲ್ಲ ಬಂದು ಹೋಗಿದ್ದಾರೆ. ಉತ್ಸವಕ್ಕೆ ಸಂಬಂಧಿಸಿದಂತ ಮಾತನಾಡಿದ್ದಾರೆ.
ಸನ್ಮಾನ ಬೇಡವೆಂದ ಕಿಚ್ಚ
ಮಳೆ ಬರ್ತಿದೆ. ನಮ್ಮ ನೋಡಲು ಜನ ಬಂದಿದ್ದಾರೆ. ಅವರೆಲ್ಲ ಮಳೆಯಲ್ಲಿಯೇ ನಿಂತಿದ್ದಾರೆ. ನಾನು ಛತ್ರಿ ಕೆಳಗೆ ನಿಲ್ಲೋದಾ? ಬೇಡ, ನನಗೆ ಛತ್ರಿ ಬೇಡ ಅಂತಲೇ ಸುದೀಪ್ ಛತ್ರಿ ಪಕ್ಕಕ್ಕೆ ಇಡಿ ಅಂತಲೇ ಹೇಳಿದರು.
ಕಿಚ್ಚ ಸುದೀಪ್ ಈ ಮಾತು ಹೇಳಿದರು. ಇದು ಶ್ರೀ ಚಾಮುಂಡೇಶ್ವಿರಿ ಕರಗ ಉತ್ಸವದ ವೇದಿಕೆ ಆಗಿದೆ. ಇಲ್ಲಿ ಬಿಗ್ ಬಾಸ್ ವಿಚಾರ ಯಾಕೆ? ಅದನ್ನ ಹೇಳೋಕೆ ವೇದಿಕೆ ಇದೆ. ಅಲ್ಲಿಯೇ ಹೇಳುತ್ತೇನೆ ಅನ್ನುವ ಅರ್ಥದಲ್ಲಿಯೇ ಬಿಗ್ ಬಾಸ್ನ ಯಾವುದೇ ಮಾಹಿತಿಯನ್ನು ಸುದೀಪ್ ಇಲ್ಲಿ ಕೊಡೋಕೆ ಹೋಗ್ಲಿಲ್ಲ.
ಇದು ಆ ವೇದಿಕೆ ಅಲ್ಲ..
ಹಾಗೆ ಇದೇ ವೇದಿಕೆ ಮೇಲೆ ಸುದೀಪ್ ಇನ್ನೂ ಒಂದು ಕೆಲಸ ಮಾಡಿದ್ದಾರೆ. ಸುದೀಪ್ ಅವರಿಗೆ ಸನ್ಮಾನ ಕಾರ್ಯಕ್ರಮವೂ ಶುರು ಆಗಿದೆ. ಇನ್ನೇನು ಸನ್ಮಾನ ಮಾಡ್ಬೇಕು ನೋಡಿ, ಸುದೀಪ್ ಆಗಲೇ ಅದನ್ನ ಅಷ್ಟೆ ಪ್ರೀತಿಯಿಂದಲೇ ನಿರಾಕರಿಸಿದ್ದಾರೆ. ಸನ್ಮಾನ ಮಾಡೋಕೆ ಬಂದವರಿಗೇನೆ ಶಾಲ್ ಹೊದಿಸಿ ಗೌರವಿಸಿದ್ದಾರೆ ನೋಡಿ.
ರಾಮನಗರದ ಈ ಶ್ರೀ ಚಾಮುಂಡೇಶ್ವರಿ ಕರಗ ಉತ್ಸವದಲ್ಲಿ ಕನ್ನಡದ ತಾರೆಯರು ಬಂದಿದ್ದರು. ಅದರಲ್ಲಿ ರಚಿತಾ ರಾಮ್ ಕೂಡ ಇದ್ದರು. ಇವರು ಉತ್ಸವದ ಬಗ್ಗೆ ಮಾತನಾಡಿದ್ದಾರೆ.
ಈ ವೇಳೆ ಇವರಿಗೆ ಸನ್ಮಾನ ಕೂಡ ಮಾಡಲಾಗಿದೆ. ರಚಿತಾ ರಾಮ್ ಅವರು ಇಲ್ಲಿ ಲೇಡಿ ಪೊಲೀಸ್ ಒಬ್ಬರನ್ನ ಕರೆದು ಒಂದು ಗಿಫ್ಟ್ ಕೂಡ ಕೊಟ್ಟಿದ್ದಾರೆ. ತಮ್ಮ ಚಿತ್ರದ ಮುದ್ದು ಮುದ್ದು ಪುಟ್ಟಲಕ್ಷ್ಮಿ ಹಾಡಿಗೆ ಹೆಜ್ಜೆ ಕೂಡ ಹಾಕಿದ್ದಾರೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka














