Last Updated:
ಪ್ರಸ್ತುತ ದ್ರಾವಿಡ್ ಅವರನ್ನು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಪ್ರಶಂಸಿಸಲಾಗಿದ್ದರೂ, ಅವರ ಏಕದಿನ ವೃತ್ತಿಜೀವನವು ಒಂದು ಹಂತದಲ್ಲಿ ಅಂತ್ಯಗೊಳ್ಳುವ ಭೀತಿ ಇತ್ತು. ಆ ದಿನ ತಾವೂ ಅವರಿಗೆ ತಮ್ಮ ಬೆಂಬಲ ನೀಡಿ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ತಿಳಿಸಿದ್ದಾರೆ.
ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಹಲವಾರು ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿ ಲೆಜೆಂಡ್ ಎನಿಸಿಕೊಳ್ಳುವಂತೆ ಮಾಡುವಲ್ಲಿ ಸಫಲರಾಗಿದ್ದರು. ಇದೀಗ ತಮ್ಮ ಸಮಕಾಲೀನರಾಗಿರುವ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರ ಏಕದಿನ ವೃತ್ತಿಜೀವನದ ಬಗ್ಗೆ ಕುತೂಹಲಕಾರಿ ಸಂಗತಿ ಬಹಿರಂಗ ಪಡಿಸಿದ್ದಾರೆ. ಒಂದು ಹಂತದಲ್ಲಿ, ದ್ರಾವಿಡ್ ಅವರ ಏಕದಿನ ತಂಡದಲ್ಲಿ ಸ್ಥಾನ ಪಡೆಯುತ್ತಿರುವ ಬಗ್ಗೆ ಸಾಕಷ್ಟು ಟೀಕೆ ಇತ್ತು. ಆಯ್ಕೆದಾರರು ಅವರನ್ನು ತಂಡದಿಂದ ಕೈಬಿಡುವ ಬಗ್ಗೆಯೂ ಯೋಚಿಸಿದ್ದರು. ಆದರೆ ಆ ನಿರ್ಣಾಯಕ ಹಂತದಲ್ಲಿ, ಆಯ್ಕೆದಾರರು ಮತ್ತು ಬಿಸಿಸಿಐ ಇಬ್ಬರ ಇಚ್ಛೆಗೆ ವಿರುದ್ಧವಾಗಿ ತಾವೂ ದ್ರಾವಿಡ್ ಪರವಾಗಿ ದೃಢವಾಗಿ ನಿಂತಿದ್ದಾಗಿ ನೆನಪಿಸಿಕೊಂಡಿದ್ದಾರೆ.
ಪ್ರಸ್ತುತ ದ್ರಾವಿಡ್ ಅವರನ್ನು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಪ್ರಶಂಸಿಸಲಾಗಿದ್ದರೂ, ಅವರ ಏಕದಿನ ವೃತ್ತಿಜೀವನವು ಒಂದು ಹಂತದಲ್ಲಿ ಅಂತ್ಯಗೊಳ್ಳುವ ಭೀತಿ ಇತ್ತು. ಆ ದಿನ ತಾವೂ ಅವರಿಗೆ ತಮ್ಮ ಬೆಂಬಲ ನೀಡಿ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ತಿಳಿಸಿದ್ದಾರೆ.
ರಾಜ್ ಶಮಾನಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿದ ಸೌರವ್ ಗಂಗೂಲಿ ಆ ದಿನಗಳನ್ನು ನೆನಪಿಸಿಕೊಂಡರು: “ಆ ಸಮಯದಲ್ಲಿ, ರಾಹುಲ್ ದ್ರಾವಿಡ್ ಅವರ ಸ್ಟ್ರೈಕ್ ರೇಟ್ ಏಕದಿನ ಕ್ರಿಕೆಟ್‌ಗೆ ಸೂಕ್ತವಲ್ಲ ಎಂದು ಅನೇಕ ವಿಮರ್ಶಕರು ವಾದಿಸಿದ್ದರು. ಆಯ್ಕೆದಾರರು ಸಹ ದ್ರಾವಿಡ್ ಅವರ ಸ್ಥಾನದಲ್ಲಿ ಇತರ ಆಟಗಾರರಿಗೆ ಅವಕಾಶ ನೀಡಲು ಬಲವಾಗಿ ಒಲವು ತೋರಿದ್ದರು. ಆದರೆ, ನನಗೆ ದ್ರಾವಿಡ್ ಅವರನ್ನು ಬಿಡಲು ಇಷ್ಟವಿರಲಿಲ್ಲ. ಆ ಸಮಯದಲ್ಲಿ ನಾನು ಆಯ್ಕೆದಾರರ ಸಲಹೆಯನ್ನು ಪಾಲಿಸಿದ್ದರೆ, ದ್ರಾವಿಡ್ ಅವರ ವೃತ್ತಿಜೀವನ ಅಲ್ಲಿಗೆ ಕೊನೆಗೊಳ್ಳುತ್ತಿತ್ತು” ಎಂದು ಗಂಗೂಲಿ ತಿಳಿಸಿದ್ದಾರೆ.
ಆ ಸಮಯದಲ್ಲಿ, ವಿಶ್ವ ಕ್ರಿಕೆಟ್‌ನಲ್ಲಿ ಆಡಮ್ ಗಿಲ್‌ಕ್ರಿಸ್ಟ್, ಮಾರ್ಕ್ ಬೌಚರ್ ಮತ್ತು ಕುಮಾರ್ ಸಂಗಕ್ಕಾರರಂತಹ ಆಟಗಾರರು ಇದ್ದರು, ಅವರು ತಮ್ಮ ತಂಡಗಳಿಗೆ ವಿಕೆಟ್ ಕೀಪರ್‌ಗಳಾಗಿ ಮಾತ್ರವಲ್ಲದೆ ತಮ್ಮ ಅಸಾಧಾರಣ ಬ್ಯಾಟಿಂಗ್ ಕೌಶಲ್ಯದ ಮೂಲಕ ಹೆಚ್ಚುವರಿ ಬಲ ಒದಗಿಸುತ್ತಿದ್ದರು. ಆದರೆ, ಭಾರತೀಯ ತಂಡವು ಕೆಳ ಕ್ರಮಾಂಕದಲ್ಲಿ ಗಣನೀಯ ರನ್ ಗಳಿಸುವ ಸಾಮರ್ಥ್ಯವಿರುವ ಸರಿಯಾದ ವಿಕೆಟ್ ಕೀಪರ್-ಬ್ಯಾಟರ್ ಕೊರತೆಯನ್ನು ಎದುರಿಸಿತು. ಈ ಸಮಸ್ಯೆಗೆ ಪರಿಹಾರವಾಗಿ, ತಂಡದ ಆಡಳಿತ ಮಂಡಳಿಯು ಒಂದು ಪ್ರಯೋಗವನ್ನು ಪ್ರಾರಂಭಿಸಿತು. ಅಲ್ಲಿಯವರೆಗೆ ತಜ್ಞ ಬ್ಯಾಟ್ಸ್‌ಮನ್ ಆಗಿ ಮಾತ್ರ ಆಡುತ್ತಿದ್ದ ರಾಹುಲ್ ದ್ರಾವಿಡ್‌ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಗಳನ್ನು ವಹಿಸಲು ನಾಯಕ ಸೌರವ್ ಗಂಗೂಲಿ ನಿರ್ಧರಿಸಿದರು. ದ್ರಾವಿಡ್‌ಗೆ ಇಷ್ಟವಿಲ್ಲದಿದ್ದರೂ ಸಹಾ ಗಂಗೂಲಿ ಬಲವಂತವಾಗಿ ಒಪ್ಪಿಸಿದ್ದರು.
2003ರ ಫೈನಲ್ ಪ್ರವೇಶಿಸಲು ನೆರವಾದ ಪ್ರಯೋಗ
ಈ ಪ್ರಯೋಗದ ಹಿಂದಿನ ನಿಜವಾದ ಕಾರಣವೆಂದರೆ, ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡನ್ನೂ ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲ ಸಮರ್ಥ ಆಟಗಾರ ತಂಡದಲ್ಲಿ ಇರಲಿಲ್ಲ. ಅದಕ್ಕಾಗಿಯೇ ನಾವು ದ್ರಾವಿಡ್ ಅವರನ್ನು ವಿಕೆಟ್ ಕೀಪರ್ ಆಗಿ ಪರಿವರ್ತಿಸಲು ನಿರ್ಧರಿಸಿದೆವು. ಈ ಕ್ರಮವು ನಮಗೆ ಪ್ಲೇಯಿಂಗ್ XI ನಲ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್ ಅನ್ನು ಕಣಕ್ಕಿಳಿಸುವ ಅವಕಾಶವನ್ನು ನೀಡಿತು.” ಈ ನಿರ್ಣಾಯಕ ನಿರ್ಧಾರವು ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕವನ್ನು ಗಮನಾರ್ಹವಾಗಿ ಬಲಪಡಿಸಿತು ಮಾತ್ರವಲ್ಲದೆ ಮೊಹಮ್ಮದ್ ಕೈಫ್‌ನಂತಹ ಯುವ ಆಟಗಾರರು ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯಲು ದಾರಿ ಮಾಡಿಕೊಟ್ಟಿತು. ಅಲ್ಲದೆ ಈ ಪ್ರಯೋಗ ತಾತ್ಕಾಲಿಕ ಕ್ರಮವಾಗಿರದೆ, ದ್ರಾವಿಡ್ ಅವರನ್ನು ವಿಕೆಟ್ ಕೀಪರ್ ಆಗಿ ಪರಿವರ್ತಿಸುವ ಈ ತಂತ್ರವು ಭಾರತ 2003ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಫೈನಲ್ ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಎಂದು ಕುತೂಹಲಕಾರಿ ಘಟನೆಯನ್ನ ನೆನೆದಿದ್ದಾರೆ.
ಆದರೆ ತಮ್ಮ ಆ ಕಾಲದಲ್ಲಿ ಭಾರತೀಯ ತಂಡದಲ್ಲಿ ಉತ್ತಮ ಆಲ್-ರೌಂಡರ್‌ಗಳ ಕೊರತೆಯು ಗಮನಾರ್ಹ ನ್ಯೂನತೆಯಾಗಿತ್ತು ಎಂದು ಗಂಗೂಲಿ ಒಪ್ಪಿಕೊಂಡರು. ವಿಕೆಟ್ ಕೀಪರ್ ಆಗಿ ಸೇವೆ ಸಲ್ಲಿಸುವ ಮೂಲಕ ದ್ರಾವಿಡ್ ಹೆಚ್ಚುವರಿ ಬ್ಯಾಟ್ಸ್‌ಮನ್‌ಗೆ ಅವಕಾಶ ಕಲ್ಪಿಸಿದರೂ, ಬೌಲಿಂಗ್ ವಿಭಾಗದಲ್ಲಿನ ಕೊರತೆಯನ್ನು ಸರಿದೂಗಿಸಲು ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ಅವರೊಂದಿಗೆ ಅರೆಕಾಲಿಕ ಬೌಲರ್‌ಗಳಾಗಿ ಹೆಜ್ಜೆ ಹಾಕಬೇಕಾಯಿತು ಎಂದು ಅವರು ಹೇಳಿದ್ದಾರೆ.
May 17, 2026 10:54 PM IST













