Last Updated:
ಮಹಿಳಾ ಕ್ರಿಕೆಟ್ನಲ್ಲಿ ಸ್ಮೃತಿ ಮಂಧಾನ ಒಂದಲ್ಲ ಒಂದು ದಾಖಲೆಯನ್ನು ಮಾಡುತ್ತಲೇ ಇದ್ದಾರೆ. ಭಾರತ ತಂಡದ ಬ್ಯಾಟಿಂಗ್ನ ಆಧಾರವಾಗಿರುವ ಅವರು ಇಂದು ದೊಡ್ಡ ಸಾಧನೆ ಮಾಡಿದ್ದಾರೆ. ಆದರೆ ಅವರ ಯಶಸ್ಸಿಗೆ ಕಾರಣ ಒಂದು ಸಣ್ಣ ಕಾಗದವಂತೆ.
ಭಾರತೀಯ (Indian) ಮಹಿಳಾ ಕ್ರಿಕೆಟ್ (Cricket) ತಂಡದ ಸ್ಟಾರ್ ಓಪನರ್ ಸ್ಮೃತಿ ಮಂಧಾನ (Smriti Mandhana) ಇತ್ತೀಚಿನ ದಿನಗಳಲ್ಲಿ ತಮ್ಮ ಅದ್ಭುತ ಸಾಧನೆಗಳಿಂದ ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ. 2025 ರ ಮಹಿಳಾ ಏಕದಿನ (ODI) ವಿಶ್ವಕಪ್ (World Cup) ಗೆಲುವು ಮತ್ತು ದುಬೈನಲ್ಲಿ ನಡೆದ ಮಹಿಳಾ ಏಷ್ಯಾ ಕಪ್ (Asia Cup) ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ, ವುಮನ್ಸ್ ಪ್ರೀಮಿಯರ್ ಲೀಗ್(WPL)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕಿಯಾಗಿ ಎರಡು ಟ್ರೋಫಿಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.
ಈ ಮೂಲಕ ಮಹಿಳಾ ಕ್ರಿಕೆಟ್ನಲ್ಲಿ ಸ್ಮೃತಿ ಮಂಧಾನ ಒಂದಲ್ಲ ಒಂದು ದಾಖಲೆಯನ್ನು ಮಾಡುತ್ತಲೇ ಇದ್ದಾರೆ. ಭಾರತ ತಂಡದ ಬ್ಯಾಟಿಂಗ್ನ ಆಧಾರವಾಗಿರುವ ಅವರು ಇಂದು ದೊಡ್ಡ ಸಾಧನೆ ಮಾಡಿದ್ದಾರೆ. ಆದರೆ ಅವರ ಯಶಸ್ಸಿಗೆ ಕಾರಣ ಒಂದು ಸಣ್ಣ ಕಾಗದವಂತೆ.
ಹೌದು, ಸ್ಮೃತಿ ಮಂಧಾನ ಅವರು ತಮ್ಮ ಕೋಚ್ ಕಲಿಸಿದ ವಿಶೇಷ ಅಭ್ಯಾಸ ಈ ಮಟ್ಟವನ್ನು ತಲುಪಲು ಸಹಾಯ ಮಾಡಿದೆ ಎಂದು ಇತ್ತೀಚೆಗೆ ಪಾಡ್ಕ್ಯಾಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಅವರು ಮಲಗುವ ಮೊದಲು “ನಾನು ಐಸಿಸಿ ನಂಬರ್ ವನ್ ಬ್ಯಾಟರ್. ನಾನು ವರ್ಲ್ಡ್ ಕಪ್ ಚಾಂಪಿಯನ್” ಎಂದು ಕಾಗದದ ಮೇಲೆ ಬರೆದು ದಿಂಬಿನ ಕೆಳಗೆ ಇಡುತ್ತಿದ್ದರಂತೆ. ಇದೆಲ್ಲವೂ ಮೊದಲಿಗೆ ತುಂಬಾ ಮೂರ್ಖತನದಂತೆ ಕಂಡರೂ, ಅದು ನಿಜವಾದ ನಂತರ ತನಗೆ ಯಾವುದೇ ಅನುಮಾನವಿಲ್ಲ ಎಂದು ಸ್ಮೃತಿ ಮಂಧಾನ ಹೇಳಿಕೊಂಡಿದ್ದಾರೆ.
ಹದಿನಾಲ್ಕು ವರ್ಷದ ಸ್ಮೃತಿ ಆಗ ಇನ್ನೂ ರಾಜ್ಯ ಮಟ್ಟದಲ್ಲಿ ಆಡುತ್ತಿದ್ದರು. ಆಗ ಅವರ ಕೋಚ್ ಒಂದು ವಿಚಿತ್ರ ಸಲಹೆ ಕೊಟ್ಟರು. ರಾಂಡಾ ಬೈರ್ನ್ ಅವರ ‘ದಿ ಸೀಕ್ರೆಟ್’ ವಿಡಿಯೋ ತೋರಿಸಿ, ಪ್ರತಿದಿನ ಒಳ್ಳೆಯ ಮಾತುಗಳನ್ನು ಬರೆಯಲು ಹೇಳಿದರು. “ನಾನು ಈಗಾಗಲೇ ವಿಶ್ವದ ಅತ್ಯುತ್ತಮ ಬ್ಯಾಟರ್. ನಾನು ವಿಶ್ವಕಪ್ ಗೆದ್ದಿದ್ದೇನೆ” ಎಂದು ಕಾಗದದಲ್ಲಿ ಪದೇ ಪದೇ ಬರೆದು, ಅದನ್ನು ದಿಂಬಿನ ಕೆಳಗೆ ಇಟ್ಟು ನಿದ್ದೆ ಮಾಡು ಎಂದು ಹೇಳಿದರು. ನಾಲ್ಕು-ಐದು ವರ್ಷಗಳ ಕಾಲ ಪ್ರತಿ ರಾತ್ರಿ ಇದನ್ನೇ ಮಾಡುತ್ತಿದ್ದರಂತೆ ಸ್ಮೃತಿ. ಆರಂಭದಲ್ಲಿ ಇದು ಮೂರ್ಖತನದಂತೆ ಕಂಡರೂ ಅವರು ಮಾಡುತ್ತಲೇ ಇದ್ದರಂತೆ.
ಆ ಕಾಗದದಲ್ಲಿ ಬರೆದಿದ್ದು ಸಾಮಾನ್ಯ ಆಸೆ ಅಲ್ಲ. “ನಾನು ಆಗುತ್ತೇನೆ” ಅಂತ ಬರೆಯಲಿಲ್ಲ. “ನಾನು ಆಗಿದ್ದೇನೆ” ಅಂತ ಬರೆದಿದ್ದು. ಮುಂದೆ ಆಗುವುದನ್ನು ಈಗಾಗಲೇ ಆಗಿಬಿಟ್ಟಂತೆ ನಂಬಿದೆ. ಮನಸ್ಸು ಅದನ್ನು ನಿಜವೆಂದು ಒಪ್ಪಿಕೊಳ್ಳಲು ಶುರು ಮಾಡಿತು. ನಂಬಿಕೆ ಬಲಗೊಂಡಿತು. ಪ್ರತಿ ಇನ್ನಿಂಗ್ಸ್, ಪ್ರತಿ ನೆಟ್ ಪ್ರಾಕ್ಟೀಸ್ ಆ ನಂಬಿಕೆಯಿಂದಲೇ ನಡೆಯಿತು.
ಕೆಲವು ವರ್ಷಗಳ ನಂತರ ಆ ಮಾತುಗಳು ನಿಜವಾದವು. ಐಸಿಸಿ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನ ಬಂತು, ವಿಶ್ವಕಪ್ ಗೆದ್ದೆ. ದಿಂಬಿನ ಕೆಳಗಿಟ್ಟಿದ್ದ ಆ ಕಾಗದ ಕೇವಲ ಕಾಗದವಾಗಿ ಉಳಿಯಲಿಲ್ಲ. ಅದು ಒಂದು ಪ್ರತಿಜ್ಞೆಯಾಗಿ, ಒಂದು ಶಕ್ತಿಯಾಗಿ ಬದಲಾಯಿತು ಎಂದು ಪಾಡ್ಕ್ಯಾಸ್ಟ್ನಲ್ಲಿ ಸ್ಮೃತಿ ಮಂಧಾನ ಹೇಳಿದ್ದಾರೆ.
ಅದೇ ಸಮಯದಲ್ಲಿ ಇನ್ನೊಂದು ಕಾಗದವೂ ಸ್ಮೃತಿ ಮಂಧಾನ ಬಳಿ ಇತ್ತಂತೆ. ಅದು ಖಾಲಿ ಚೆಕ್. ತಾಯಿ-ತಂದೆಗೆ ಮನೆ ಕಟ್ಟುವ ಕನಸು. ಅವರು ಅದನ್ನು ಗೋಡೆಗೆ ಅಂಟಿಸಿ ಪ್ರತಿದಿನ ನೋಡುತ್ತಿದ್ದರಂತೆ. 18 ವರ್ಷದಾಗುವಾಗ ಆ ಕಸನು ನಿಜವಾಯಿತು. ದಿಂಬಿನ ಕೆಳಗಿನ ಕಾಗದ ಮತ್ತು ಗೋಡೆಯ ಮೇಲಿನ ಚೆಕ್ ಎರಡೂ ಒಂದೇ ಪಾಠ ಹೇಳುತ್ತಿದ್ದವು. ನಂಬಿಕೆ, ಬರೆಯುತ್ತಿರು, ನೋಡು, ನಿದ್ದೆ ಮಾಡು. ಮನಸ್ಸು ಅದು ಸಾಧ್ಯ ಎಂದು ಒಪ್ಪಿಕೊಂಡರೆ, ಜೀವನವೇ ಆ ದಾರಿಯಲ್ಲಿ ನಡೆಯುತ್ತದೆ ಎಂದು ಸ್ಮೃತಿ ಮಂಧಾನ ತಿಳಿಸಿದ್ದಾರೆ.














