SSC CHSL Recruitment 2026: 12ನೇ ತರಗತಿ ಪಾಸಾಗಿದ್ದೀರಾ? ಕೇಂದ್ರ ಸರ್ಕಾರದ 2536 ಹುದ್ದೆಗಳು ನಿಮಗಾಗಿ ಕಾದಿವೆ, ಕೂಡಲೇ ಅರ್ಜಿ ಹಾಕಿ | | ACTPnews

SSC CHSL Recruitment 2026: 12ನೇ ತರಗತಿ ಪಾಸಾಗಿದ್ದೀರಾ? ಕೇಂದ್ರ ಸರ್ಕಾರದ 2536 ಹುದ್ದೆಗಳು ನಿಮಗಾಗಿ ಕಾದಿವೆ, ಕೂಡಲೇ ಅರ್ಜಿ ಹಾಕಿ |


ಯಾವ ಹುದ್ದೆಗಳಿಗೆ ನೇಮಕ?

SSC CHSL 2026 ಅಡಿಯಲ್ಲಿ Lower Division Clerk (LDC)/Junior Secretariat Assistant (JSA), Data Entry Operator (DEO) ಮತ್ತು DEO Grade ‘A’ ಹುದ್ದೆಗಳಿಗೆ ನೇಮಕ ನಡೆಯಲಿದೆ. ಒಟ್ಟು 2,536 ಹುದ್ದೆಗಳು ತಾತ್ಕಾಲಿಕವಾಗಿದ್ದು, ಅಂತಿಮ ಹುದ್ದೆಗಳ ಸಂಖ್ಯೆ ಹಾಗೂ ಹುದ್ದೆವಾರು, ವರ್ಗವಾರು ವಿವರವನ್ನು SSC ನಂತರ ಪ್ರಕಟಿಸಲಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಸಾಮಾನ್ಯವಾಗಿ CHSL ಹುದ್ದೆಗಳಿಗೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಅಥವಾ ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಆದರೆ ಕೆಲವು ನಿರ್ದಿಷ್ಟ DEO/DEO Grade ‘A’ ಹುದ್ದೆಗಳಿಗೆ ಸೈನ್ಸ್ ವಿಭಾಗದಲ್ಲಿ 12ನೇ ತರಗತಿ ಹಾಗೂ ಗಣಿತ ವಿಷಯ ಕಡ್ಡಾಯವಾಗಿದೆ.

2026ರ ನೇಮಕಾತಿಗೆ ಅರ್ಹತಾ ಫಲಿತಾಂಶ ಅಕ್ಟೋಬರ್ 7, 2026ರೊಳಗೆ ಪ್ರಕಟವಾಗಿರಬೇಕು. ಪರೀಕ್ಷೆ ಬರೆದಿದ್ದು ಫಲಿತಾಂಶ ಇನ್ನೂ ಪ್ರಕ್ರಿಯೆಯಲ್ಲಿದ್ದರೆ ಅದನ್ನು ಅರ್ಹತೆಯಾಗಿ ಪರಿಗಣಿಸಲಾಗುವುದಿಲ್ಲ.

ವಯೋಮಿತಿ ಎಷ್ಟು?

ಅಭ್ಯರ್ಥಿಗಳ ವಯಸ್ಸು 18ರಿಂದ 27 ವರ್ಷಗಳ ನಡುವೆ ಇರಬೇಕು. ವಯಸ್ಸನ್ನು ಆಗಸ್ಟ್ 1, 2026ಕ್ಕೆ ಲೆಕ್ಕ ಹಾಕಲಾಗುತ್ತದೆ.

ನಿಯಮಾನುಸಾರ SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ಹಾಗೂ PwBD ಸೇರಿದಂತೆ ಇತರ ಅರ್ಹ ವರ್ಗಗಳಿಗೆ ನಿಗದಿತ ವಯೋಮಿತಿ ಸಡಿಲಿಕೆ ಸಿಗಲಿದೆ.

ಸಂಬಳ ಎಷ್ಟು?

ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ Pay Matrix ಅನ್ವಯ ವೇತನ ಸಿಗಲಿದೆ.

LDC/JSA: Pay Level-2, ₹19,900–63,200

DEO: Pay Level-4, ₹25,500–81,100 ಅಥವಾ Pay Level-5, ₹29,200–92,300

DEO Grade ‘A’: Pay Level-4, ₹25,500–81,100

ಇದಕ್ಕೆ ಅನುಗುಣವಾಗಿ ಇತರ ಭತ್ಯೆಗಳು ನಿಯಮಾನುಸಾರ ಅನ್ವಯಿಸುತ್ತವೆ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯವಾಗಿ ಅರ್ಹ ಪುರುಷ ಅಭ್ಯರ್ಥಿಗಳಿಗೆ ₹100 ಅರ್ಜಿ ಶುಲ್ಕ ನಿಗದಿಯಾಗಿದೆ. ಮಹಿಳಾ ಅಭ್ಯರ್ಥಿಗಳು, SC, ST, PwBD ಮತ್ತು ಅರ್ಹ Ex-Servicemen ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಶುಲ್ಕ ಪಾವತಿಸಲು ಅಕ್ಟೋಬರ್ 8, 2026ರ ರಾತ್ರಿ 11 ಗಂಟೆವರೆಗೆ ಅವಕಾಶವಿದೆ.

ಪರೀಕ್ಷೆ ಹೇಗಿರುತ್ತದೆ?

SSC CHSL ಆಯ್ಕೆ ಪ್ರಕ್ರಿಯೆ ಎರಡು ಹಂತಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಒಳಗೊಂಡಿದೆ.

Tier-I ಪರೀಕ್ಷೆಯಲ್ಲಿ English Language, General Intelligence, Quantitative Aptitude ಮತ್ತು General Awareness ವಿಷಯಗಳಿಂದ ಒಟ್ಟು 100 ಪ್ರಶ್ನೆಗಳು, 200 ಅಂಕಗಳು ಇರುತ್ತವೆ. ಪರೀಕ್ಷೆಯ ಅವಧಿ 60 ನಿಮಿಷಗಳು. ಪ್ರತಿ ತಪ್ಪು ಉತ್ತರಕ್ಕೆ 0.50 ಅಂಕ ನಕಾರಾತ್ಮಕ ಅಂಕ ಇರುತ್ತದೆ.

Tier-IIನಲ್ಲಿ Mathematical Abilities, Reasoning & General Intelligence, English Language & Comprehension, General Awareness ಹಾಗೂ Computer Knowledge Test ವಿಭಾಗಗಳಿರುತ್ತವೆ. DEO ಹುದ್ದೆಗಳಿಗೆ Skill Test ಮತ್ತು LDC/JSA ಹುದ್ದೆಗಳಿಗೆ Typing Test ಕೂಡ ನಡೆಯಲಿದೆ.

ಪ್ರಮುಖ ದಿನಾಂಕಗಳು

ಅರ್ಜಿ ಆರಂಭ: ಸೆಪ್ಟೆಂಬರ್ 7, 2026

ಅರ್ಜಿ ಸಲ್ಲಿಸಲು ಕೊನೆ: ಅಕ್ಟೋಬರ್ 7, 2026, ರಾತ್ರಿ 11 ಗಂಟೆ

ಶುಲ್ಕ ಪಾವತಿಗೆ ಕೊನೆ: ಅಕ್ಟೋಬರ್ 8, 2026, ರಾತ್ರಿ 11 ಗಂಟೆ

ಅರ್ಜಿಯ ತಿದ್ದುಪಡಿ: ಅಕ್ಟೋಬರ್ 14ರಿಂದ 16, 2026

Tier-I ಪರೀಕ್ಷೆ: SSC ನಂತರ ಪ್ರಕಟಿಸಲಿದೆ

ಅರ್ಜಿ ಸಲ್ಲಿಸುವುದು ಹೇಗೆ?

ಇದನ್ನೂ ಓದಿ: Major Navya Shekhawat: ರಾಷ್ಟ್ರಪತಿಯ ADC ನವ್ಯಾ ಶೆಖಾವತ್ ಸ್ಯಾಲರಿ ಎಷ್ಟು? ಮನೆ, ವಾಹನ ಜೊತೆ ಸಿಗುತ್ತೆ ಈ ಎಲ್ಲಾ VVIP ಸೌಲಭ್ಯ

ಅಭ್ಯರ್ಥಿಗಳು SSC ಅಧಿಕೃತ ವೆಬ್‌ಸೈಟ್ ssc.gov.in ಮೂಲಕ ಅರ್ಜಿ ಸಲ್ಲಿಸಬಹುದು. SSC ಮೊಬೈಲ್ ಆಪ್‌ನಲ್ಲಿಯೂ ಅರ್ಜಿ ಪ್ರಕ್ರಿಯೆ ಲಭ್ಯವಿದೆ. ಹೊಸ SSC ವೆಬ್‌ಸೈಟ್‌ನಲ್ಲಿ One-Time Registration (OTR) ಪೂರ್ಣಗೊಳಿಸಿ ನಂತರ CHSL 2026 ಅರ್ಜಿ ಸಲ್ಲಿಸಬೇಕು. ಆಧಾರ್ ಆಧಾರಿತ authentication ಆಯ್ಕೆ ಬಳಸಿದರೆ ಪರೀಕ್ಷಾ ಕೇಂದ್ರದಲ್ಲಿ ಗುರುತಿನ ದೃಢೀಕರಣ ಸೇರಿದಂತೆ ಕೆಲವು ಪ್ರಕ್ರಿಯೆಗಳು ಸುಲಭವಾಗಬಹುದು. ಅರ್ಜಿ ಸಲ್ಲಿಸಿದ ಬಳಿಕ ಅದರ ಪ್ರತಿಯನ್ನು ಉಳಿಸಿಕೊಂಡಿರುವುದು ಉತ್ತಮ. SSC ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂದಿನ ಪರೀಕ್ಷಾ ದಿನಾಂಕ ಮತ್ತು ಇತರ ಸೂಚನೆಗಳನ್ನು ಪ್ರಕಟಿಸಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed