Singing Audition: ಸಂಗೀತ ಪ್ರಿಯರಿಗೆ ಸುವರ್ಣಾವಕಾಶ, ಜೂನ್ 28ಕ್ಕೆ ಬೆಂಗಳೂರಿನಲ್ಲಿ ಸರಿಗಮಪ ಆಡಿಷನ್ಸ್! | | ACTPnews

ಜೀ ತೆಲುಗು ಗಾಯನ ಆಡಿಷನ್


Last Updated:

ಜೀ ತೆಲುಗು ಸರಿಗಮಪ – ನೆಕ್ಸ್ಟ್ ಇಂಡಿಯಾಸ್ ಸಿಂಗಿಂಗ್ ಸೆನ್ಸೇಷನ್ ಆಡಿಷನ್ ಜೂನ್ 28, 2026ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ, 18-35ರವರಿಗೆ ಅವಕಾಶ.

 ಜೀ ತೆಲುಗು ಗಾಯನ ಆಡಿಷನ್
ಜೀ ತೆಲುಗು ಗಾಯನ ಆಡಿಷನ್

ಬೆಂಗಳೂರು: ನೀವು ಸ್ನಾನದ ಮನೆಯಲ್ಲೋ, ಅಥವಾ ಸ್ನೇಹಿತರ ಮುಂದೆ ಹಾಡುತ್ತಾ ನಾನೊಬ್ಬ ಉತ್ತಮ ಗಾಯಕನಾಗಬಲ್ಲೆ (Singer) ಎಂದು ಕನಸು ಕಾಣುತ್ತಿದ್ದೀರಾ? ನಿಮ್ಮ ಆ ಸುಂದರ ಕಂಠಕ್ಕೆ ಇಡೀ ದೇಶವೇ ಬೆರಗಾಗಬೇಕೆಂದು ಆಸೆ ಪಡುತ್ತಿದ್ದೀರಾ? ಹಾಗಿದ್ದರೆ, ನಿಮಗಾಗಿ ಇಲ್ಲಿದೆ ಸುವರ್ಣಾವಕಾಶ. ಜನಪ್ರಿಯ ಮನರಂಜನಾ ವಾಹಿನಿ ಜೀ ತೆಲುಗು (Zee Telugu) , ತನ್ನ ಅತ್ಯಂತ ಯಶಸ್ವಿ ರಿಯಾಲಿಟಿ ಶೋ (Reality Show) ಸರಿಗಮಪ – ನೆಕ್ಸ್ಟ್ ಇಂಡಿಯಾಸ್ ಸಿಂಗಿಂಗ್ ಸೆನ್ಸೇಷನ್’ ಮೂಲಕ ಹೊಸ ಪ್ರತಿಭೆಗಳನ್ನು ಹುಡುಕಲು ಬೆಂಗಳೂರಿಗೆ (Bengaluru) ಆಗಮಿಸುತ್ತಿದೆ. ಬೆಂಗಳೂರಿನಲ್ಲಿರು ವ ತೆಲುಗು ಅಭಿಮಾನಿಗಳಿಗೆ ಇದೊಂದು ಒಳ್ಳೆ ವೇದಿಕೆ

ಆಡಿಷನ್ ವಿವರ ಇಲ್ಲಿದೆ

ನಿಮ್ಮ ಗಾಯನ ಕೌಶಲ್ಯವನ್ನು ಸಾಬೀತುಪಡಿಸಲು ಜೂನ್ 28, 2026ರಂದು ವೇದಿಕೆ ಸಿದ್ಧವಾಗಿದೆ. ಜೂನ್ 28, 2026 (ಭಾನುವಾರ) ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ. ಅಬ್ಬಯ್ಯ ನಾಯ್ಡು ಸ್ಟುಡಿಯೋ (ಮಧು ಆರ್ಟ್ ಸ್ಟುಡಿಯೋ), ನಂ. 134, 7ನೇ ಕ್ರಾಸ್ ರಸ್ತೆ, ನಾಯ್ಡು ಲೇಔಟ್, ಬೆಂಗಳೂರು – 560061. ಆಡಿಷನ್ ನಡೆಯಲಿದೆ.
ಯಾರು ಭಾಗವಹಿಸಬಹುದು?

18 ರಿಂದ 35 ವರ್ಷದೊಳಗಿನ ಯಾವುದೇ ಯುವ ಪ್ರತಿಭೆ ಈ ಆಡಿಷನ್‍ನಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣದ ಗಡಿ ದಾಟಿ, ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಲು ಇದೊಂದು ಅದ್ಭುತ ಅವಕಾಶ. ಕೇವಲ ಒಂದು ಆಡಿಷನ್ ನಿಮ್ಮ ಜೀವನವನ್ನೇ ಬದಲಿಸಬಹುದು, ಭಾರತೀಯ ಚಿತ್ರರಂಗದ ಸ್ಟಾರ್ ಗಾಯಕರಾಗಿ ಹೊರಹೊಮ್ಮಲು ಇದುವೇ ಸರಿಯಾದ ಸಮಯ.
ನೀವು ಮಾಡಬೇಕಾಗಿರುವುದು ಇಷ್ಟೇ

ನಿಮ್ಮ ಗಾಯನವನ್ನು ಸುಧಾರಿಸಿಕೊಳ್ಳಿ, ಆತ್ಮವಿಶ್ವಾಸದಿಂದ ಆಡಿಷನ್ ಸ್ಥಳಕ್ಕೆ ಬನ್ನಿ ಮತ್ತು ತೀರ್ಪುಗಾರರ ಮನಗೆಲ್ಲಿ. ನಿಮ್ಮಲ್ಲಿರುವ ಪ್ರತಿಭೆಯನ್ನು ಇಡೀ ಜಗತ್ತಿಗೆ ತೋರಿಸುವ ಸಮಯ ಬಂದಿದೆ. ನಿಮ್ಮ ಸಿಂಗಿಂಗ್ ಕನಸನ್ನು ನನಸಾಗಿಸಿಕೊಳ್ಳಲು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed