Last Updated:
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಅಲೆಯನ್ನು ಸೃಷ್ಟಿಸುತ್ತಿರುವ ಸಾತ್ವಿಕ್ ಸಾಯಿರಾಜ್ – ಚಿರಾಗ್ ಶೆಟ್ಟಿ ಜೋಡಿ ಇತಿಹಾಸ ಸೃಷ್ಟಿಸಿದ್ದಾರೆ. ಈಗ ಸಿಂಗಾಪುರ ಓಪನ್ ಟ್ರೋಫಿಯನ್ನು ಗೆಲ್ಲುವ ಮೂಲಕ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಮತ್ತೊಂದು ದಾಖಲೆ ಮಾಡಿದ್ದಾರೆ.
ಭಾರತದ (India) ಬ್ಯಾಡ್ಮಿಂಟನ್ (Badminton) ಸ್ಟಾರ್ ಪುರುಷರ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ (Satwiksairaj Rankireddy) ಮತ್ತು ಚಿರಾಗ್ ಶೆಟ್ಟಿ (Chirag Shetty) ಸಿಂಗಾಪುರ ಓಪನ್ (Singapore Open) ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಜೋಡಿ ಭಾರತೀಯ ಬ್ಯಾಡ್ಮಿಂಟನ್ಗಾಗಿ ಅದ್ಭುತ ಸಾಧನೆ ಮಾಡುವ ಮೂಲಕ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಸಾತ್ವಿಕ್-ಚಿರಾಗ್ ಜೋಡಿ ಸಿಂಗಾಪುರ ಓಪನ್ ಸೂಪರ್ 750 ರಲ್ಲಿ ಪುರುಷರ ಡಬಲ್ಸ್ (Men’s Doubles) ಪ್ರಶಸ್ತಿಯನ್ನು ಗೆದ್ದಿದ್ದಾರೆ. ಭಾರತ ಮತ್ತು ಇಂಡೋನೇಷ್ಯಾ (Indonesia) ನಡುವಿನ ಫೈನಲ್ ಬಹಳ ರೋಚಕವಾಗಿತ್ತು. ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಅದ್ಭುತ ಪುನರಾಗಮನ ಮಾಡಿ 2 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು.
ಭಾರತದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಫೈನಲ್ನಲ್ಲಿ ಇಂಡೋನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ಶೋಹಿಬುಲ್ ಫಿಕ್ರಿ ಜೋಡಿಯನ್ನು ಎದುರಿಸಿತು. ಪಂದ್ಯವು ಮೂರು ಸೆಟ್ಗಳ ಕಾಲ ನಡೆಯಿತು. ಇಂಡೋನೇಷ್ಯಾದ ಜೋಡಿ ಆರಂಭದಲ್ಲಿ ಅದ್ಭುತ ಆಟವಾಡಿ 21-18 ರಿಂದ ಮುನ್ನಡೆ ಸಾಧಿಸಿತು. ನಂತರ ಭಾರತೀಯ ಜೋಡಿ ಎರಡನೇ ಸೆಟ್ ಅನ್ನು 21-15 ರಿಂದ ಗೆದ್ದು ಪುನರಾಗಮನ ಮಾಡಿತು.
ಎಲ್ಲರ ಕಣ್ಣುಗಳು ಮೂರನೇ ಸೆಟ್ನ ಮೇಲಿದ್ದವು. ಇದರಲ್ಲಿ ಸಾತ್ವಿಕ್ ಮತ್ತು ಚಿರಾಗ್ ಆರಂಭದಿಂದಲೂ ಪ್ರಾಬಲ್ಯ ಸಾಧಿಸಿದರು. ಭಾರತೀಯ ಜೋಡಿ ಪಂದ್ಯವನ್ನು 21-16 ರಿಂದ ಗೆದ್ದಿತು. ಈ ವರ್ಷದ ಆರಂಭದಲ್ಲಿ ಇಂಡೋನೇಷ್ಯಾ ಓಪನ್ನಲ್ಲಿ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ಶೋಹಿಬುಲ್ ಫಿಕ್ರಿ ವಿರುದ್ಧ ಭಾರತೀಯ ಜೋಡಿ ಸೋತಿತ್ತು. ಈಗ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಹಳೆಯ ಸೋಲಿಗೆ ಲೆಕ್ಕ ಚುಕ್ತಾ ಮಾಡಿದ್ದಾರೆ.
ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕಾಗಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸಿಂಗಾಪುರ ಓಪನ್ಗೆ ಸ್ವಲ್ಪ ಮೊದಲು, ಅವರು ಥೈಲ್ಯಾಂಡ್ ಓಪನ್ನ ಫೈನಲ್ ತಲುಪಿದರು. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾದರು. ಸಿಂಗಾಪುರ ಓಪನ್ನ ಆರಂಭದಿಂದಲೂ ಈ ಜೋಡಿ ಅತ್ಯುತ್ತಮ ಫಾರ್ಮ್ನಲ್ಲಿತ್ತು. ತೈಪೆ ಜೋಡಿ ಲೀ ಜೆ-ಹುಯಿ ಮತ್ತು ಯಾಂಗ್ ಪೊ-ಹ್ಸುವಾನ್ ಅವರನ್ನು ಸೋಲಿಸುವ ಮೂಲಕ ಅವರು ಮೊದಲು 16 ರ ಸುತ್ತಿನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.
ನಂತರ ಅವರು ಜಪಾನಿನ ಜೋಡಿಯನ್ನು ಸೋಲಿಸಿ ಕ್ವಾರ್ಟರ್ ಫೈನಲ್ಗೆ ಮುನ್ನಡೆದರು. ಮಲೇಷ್ಯಾದ ಜೋಡಿ ಕಾಂಗ್ ಖೈ ಶಿಂಗ್ ಮತ್ತು ಆರನ್ ಟೈ ಅವರನ್ನು ಸಾತ್ವಿಕ್ ಮತ್ತು ಚಿರಾಗ್ ಜೋಡಿ ಸೋಲಿಸಿ ಸೆಮಿಫೈನಲ್ಗೆ ಮುನ್ನಡೆದರು. ಸೆಮಿಫೈನಲ್ನಲ್ಲಿ ಅವರು ದಕ್ಷಿಣ ಕೊರಿಯಾದ ಜೋಡಿ ಕಿಮ್ ವಾನ್ ಹೋ ಮತ್ತು ಸಿಯೊ ಸೆಯುಂಗ್ ಜೇ ಅವರನ್ನು ಎದುರಿಸಿದರು. ಅವರು ಮೊದಲ ಎರಡು ಸೆಟ್ಗಳನ್ನು ಗೆದ್ದು ಫೈನಲ್ಗೆ ಎಂಟ್ರಿ ಕೊಟ್ಟರು.













