Shiva Rajkumar: ಪೆದ್ದಿ ಚಿತ್ರ ಬಿಡಲು ಶಿವಣ್ಣ ರೆಡಿ ಆಗಿದ್ದರು! ಅದಕ್ಕೆ ಕಾರಣ ಏನು ಗೊತ್ತಾ? | | ACTPnews

Shivanna was ready to leave the movie Peddi do you know why


ಪೆದ್ದಿ ಬಿಡಲು ರೆಡಿ ಆಗಿದ್ದೆ…

ಪೆದ್ದಿ ಚಿತ್ರದ ಕತೆಯನ್ನ ಬುಚಿ ಬಾಬು ಸನಾ ಹೇಳಿದರು. ಈ ಕತೆ ಕೇಳಿದಾಕ್ಷಣ ಇಷ್ಟ ಆಯಿತು. ಚಿತ್ರದ ಗೌರ್ ನಾಯ್ಡು ಪಾತ್ರ ಮಾಡಲು ಒಪ್ಪಿಗೆಯನ್ನು ಕೊಟ್ಟು ಬಿಟ್ಟೆ.

ನಾನು ಚಿತ್ರ ಬಿಡಲು ನಿರ್ಧರಿಸಿದ್ದೆ

ಕತೆ ಕೇಳಿದ ದಿನವೇ ರಾಮ್ ಚರಣ್ ಜೊತೆಗೂ ಮಾತನಾಡಿದೆ. ಅದಾದ್ಮೇಲೆ ನನಗೆ ಕ್ಯಾನ್ಸರ್ ಇರೋ ವಿಷಯ ತಿಳಿಯಿತು. ಇದರ ಚಿಕಿತ್ಸೆಗಾಗಿ ಅಮೆರಿಕಾ ದೇಶಕ್ಕೆ ಹೋಗುವ ಅವಶ್ಯಕತೆನೂ ಇತ್ತು. ಅದನ್ನ ಚಿತ್ರ ತಂಡಕ್ಕೂ ಹೇಳಿದೆ.

ಕ್ಯಾನ್ಸಲ್ ಮಾಡೋಣವೇ

ಚಿತ್ರದ ಜೊತೆಗೆ ಮಾಡಿಕೊಂಡ ಒಪ್ಪಂದವನ್ನ ಕ್ಯಾನ್ಸಲ್ ಮಾಡೋಣವೇ ಅಂತಲೂ ಶಿವಣ್ಣ ಯೋಚನೆ ಮಾಡಿದರು. ಆ ವಿಚಾರವನ್ನು ಚಿತ್ರ ತಂಡಕ್ಕೂ ಹೇಳಿಕೊಂಡರು.

ಆದರೆ, ಚಿತ್ರ ತಂಡ ಇದಕ್ಕೆ ಒಪ್ಪಲೇ ಇಲ್ಲ. ನಾವು ಈ ಒಂದು ಪಾತ್ರವನ್ನ ನಿಮ್ಮಿಂದಲೇ ಮಾಡಿಸುತ್ತೇವೆ. ನಮಗೆ ನೀವು ಬೇಕು ಅಂತಲೇ ಹೇಳಿದರು. ಅಷ್ಟೆ ಅಲ್ಲ, ನಾನು ಚಿಕಿತ್ಸೆ ಮುಗಿಸಿಕೊಂಡು ವಾಪಸ್ ಬರೋವರೆಗೂ ಕಾಯ್ತಾ ಇದ್ದರು ಅಂತಲೂ ಶಿವಣ್ಣ ಹೇಳಿದ್ದಾರೆ.

ಚೆನ್ನೈಯಲ್ಲಿ ಪ್ರಚಾರ

ಪೆದ್ದಿ ಚಿತ್ರದ ಪ್ರಚಾರ ಎಲ್ಲೆಡೆ ಆಗುತ್ತಿದೆ. ಇತ್ತೀಚಿಗೆ ರಾಮ್ ಚರಣ್, ಜಾನ್ವಿ ಕಪೂರ್ ಬೆಂಗಳೂರಿಗೆ ಬಂದಿದ್ದರು. ಶಿವಣ್ಣ ಕೂಡ ಸಾಥ್ ಕೊಟ್ಟಿದ್ದರು.

ಇವರು ಇಲ್ಲಿ ತಮ್ಮ ಚಿತ್ರದ ಪ್ರಚಾರ ಮಾಡಿದರು. ಶಿವಣ್ಣ ಕೂಡ ಸಿನಿಮಾವನ್ನ ಪ್ರಮೋಟ್ ಮಾಡಿದರು. ಬೇರೆ ಕಡೆಗೆ ಪ್ರಚಾರಕ್ಕೆ ಹೋದ ಚಿತ್ರ ತಂಡದ ಜೊತೆಗೆ ಶಿವಣ್ಣ ಕೂಡ ಹೋಗಿದ್ದಾರೆ. ಅಲ್ಲೂ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

Shivanna was ready to leave the movie Peddi do you know why

ಕ್ಯಾನ್ಸಲ್ ಮಾಡೋಣವೇ
ನಾನು ಚಿತ್ರ ಬಿಡಲು ನಿರ್ಧರಿಸಿದ್ದೆ

ಚೆನ್ನೈಯಲ್ಲಿ ನಡೆದ ಪೆದ್ದಿ ಚಿತ್ರ ಪ್ರಚಾರದ ಸಮಯದಲ್ಲಿಯೇ ಇದನ್ನ ಹೇಳಿಕೊಂಡಿದ್ದಾರೆ. ಅಸಲಿಗೆ ನಾನು ಚಿತ್ರವನ್ನ ಬಿಡಲು ನಿರ್ಧಾರ ಮಾಡಿದ್ದೆ.

ಇದನ್ನೂ ಓದಿ: Parvathamma Rajkumar: ಆನಂದ್ ಅಂತ ಹೆಸರಿಟ್ಟರು, ಆ ಚಿತ್ರ ಹಿಟ್! ಅಮ್ಮನ ನೆನೆದ ಶಿವಣ್ಣ

ಆದರೆ, ಸಿನಿಮಾ ತಂಡ ಕ್ಯಾನ್ಸರ್‌ಗೆ ಟ್ರೀಟ್‌ಮೆಂಟ್ ಆಗುವವರೆಗ ವೇಟ್ ಮಾಡ್ತು. ಅಮೆರಿಕಾದಿಂದ ಬಂದ್ಮೇಲೆ ಪೆದ್ದಿ ಚಿತ್ರದ ಗೌರ್ ನಾಯ್ಡು ಪಾತ್ರದ ಕೆಲಸ ಮಾಡಿದೆ ಅಂತ ಶಿವಣ್ಣ ಹೇಳಿಕೊಂಡಿದ್ದಾರೆ. ಬುಚಿ ಬಾಬು ಸನಾ ಸೇರಿದಂತೆ ಚಿತ್ರ ತಂಡ ಅದೆಷ್ಟು ಗ್ರೇಟ್ ಅನ್ನೋದನ್ನು ಶಿವಣ್ಣ ಹೇಳಿಕೊಂಡಿದ್ದಾರೆ.

ಪೆದ್ದಿ ಜೂನ್ ತಿಂಗಳು ರಿಲೀಸ್

ಪೆದ್ದಿ ಚಿತ್ರ ಜೂನ್-4 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಮಾಡಲಾಗುತ್ತಿದೆ.

ಬಹು ಭಾಷೆಯಲ್ಲೂ ಈ ಚಿತ್ರ ರಿಲೀಸ್ ಆಗುತ್ತಿದೆ. ದೇಶ-ವಿದೇಶದಲ್ಲೂ ಈ ಸಿನಿಮಾದ ತೆರೆ ಕಾಣುತ್ತಿದೆ. ಜೂನ್-3 ರಂದು ಈ ಸಿನಿಮಾದ ಪ್ರೀಮಿಯರ್ ಶೋ ಕೂಡ ಪ್ಲಾನ್ ಆಗಿದೆ.

ಜಾನ್ವಿ ಕಪೂರ್ ರೋಲ್

ಪೆದ್ದಿ ಚಿತ್ರದಲ್ಲಿ ಜಾನ್ವಿ ಕಪೂರ್ ಖಡಕ್ ರೋಲ್ ಮಾಡಿದ್ದಾರೆ. ಅಚ್ಚಯಮ್ಮ ಅನ್ನುವ ಈ ಪಾತ್ರವನ್ನ ಜಾನ್ವಿ ಕಪೂರ್ ಚೆನ್ನಾಗಿಯೇ ನಿರ್ವಹಿಸಿದ್ದಾರೆ.

ಈ ಒಂದು ಪಾತ್ರಕ್ಕೆ ಜಾನ್ವಿ ಕಪೂರ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಡೈಲಾಗ್, ಡ್ಯಾನ್ಸ್, ಕಾಸ್ಟೂಮ್ ಹೀಗೆ ತಮ್ಮ ಪಾತ್ರಕ್ಕೆ ಏನೆಲ್ಲ ಬೇಕೋ ಅದನ್ನ ತುಂಬಾನೆ ಚೆನ್ನಾಗಿಯೇ ರೆಡಿ ಮಾಡಿದ್ದಾರೆ.

ಈ ವಿಷಯವನ್ನ ಜಾನ್ವಿ ಕಪೂರ್ ಏನು ಹೇಳಿಕೊಂಡಿಲ್ಲ. ಆದರೆ, ಇದನ್ನ ಗಮಿಸಿರೋ ರಾಮ್ ಚರಣ್ ಆ್ಯಂಕರ್ ಅನುಶ್ರೀ ಸಂದರ್ಶನದಲ್ಲಿಯೇ ಇದನ್ನ ರಿವೀಲ್ ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed