Last Updated:
ಬಿಜೆಪಿ ಮೇಯರ್ ಒಬ್ಬರು ಇಂದು ರಾಖಿ ಬಂಧನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ 20,000 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಇದರಲ್ಲಿ ಕಾಲ್ತುಳಿತದಂತಹ ದುರ್ಘಟನೆ ಸಂಭವಿಸಿದ್ದು, ಒಬ್ಬ ಮಹಿಳೆ ಸಾವನಪ್ಪಿರುವುದು ಬೆಳಕಿಗೆ ಬಂದಿದೆ.
ಬಿಜೆಪಿ ಮೇಯರ್ (BJP Mayor) ಒಬ್ಬರು ಇಂದು ರಕ್ಷಾ ಬಂಧನ (Rakshabandhana) ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಒಂದು ದುರಂತ ಸಂಭವಿಸಿದೆ. ಹೌದು, ಉತ್ತರ ಪ್ರದೇಶದ ಬರೇಲಿಯಲ್ಲಿ ಮೇಯರ್ ಉಮೇಶ್ ಗೌತಮ್ ಅವರ ರಾಖಿ ಬಂಧನ ಸಮಾರಂಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ವ್ಯಾಪಕ ನಿರ್ವಹಣೆಯ ಕೊರತೆಯಿಂದಾಗಿ ಈ ಘಟನೆ ನಡೆದಿದೆ. ನಿರೀಕ್ಷೆಗಿಂತ ಹೆಚ್ಚಿನ ಮಹಿಳೆಯರು ಸಮಾರಂಭದಲ್ಲಿ ಭಾಗವಹಿಸಿದ್ದರಿಂದ ಕಾಲ್ತುಳಿತ ಉಂಟಾಗಿ ಈ ದುರಂತ ಸಂಭವಿಸಿದೆ.














