Last Updated:
ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಅನೇಕ ವಸ್ತುಗಳು ಪತ್ತೆಯಾಗಿದೆ. ಆಸ್ಪತ್ರೆಯೊಂದರ ವೈದ್ಯರು ಈಕೆಯ ಹೊಟ್ಟೆಯಿಂದ 14 ಪೆನ್ನು, 5 ಮರದ ಸ್ಪೂನು ಮತ್ತು 1 ಮೇಣದ ಬತ್ತಿಯನ್ನು ಹೊರತೆಗೆದಿದ್ದಾರೆ. ಮಹಿಳೆ ಹೊಟ್ಟೆಯಲ್ಲಿ ಕಾಣಿಸಿಕೊಂಡ ಆ ನೋವಿನಿಂದ ಎಲ್ಲಾ ಹೊರಬಂದಿದೆ.
ಮಹಿಳೆಯೊಬ್ಬರ ಹೊಟ್ಟೆಯಲ್ಲಿ (Stomach) ಅನೇಕ ವಸ್ತುಗಳು ಪತ್ತೆಯಾಗಿದ್ದು, ಇಡೀ ವೈದ್ಯಕೀಯ ಲೋಕವನ್ನೇ ಬೆಚ್ಚಿಬೀಳಿಸಿದೆ. ಆಂಧ್ರಪ್ರದೇಶದ (Andra Pradesh) ಪಲ್ನಾಡು ಜಿಲ್ಲೆಯ ನರಸರಾವ್ ಪೇಟೆಯಲ್ಲಿ ಈ ಒಂದು ವಿಚಿತ್ರ ವೈದ್ಯಕೀಯ ಘಟನೆ ನಡೆದಿದೆ. 33 ವರ್ಷದ ಮಹಿಳೆಯೊಬ್ಬಳ ಹೊಟ್ಟೆಯಿಂದ 14 ಪ್ಲಾಸ್ಟಿಕ್ ಪೆನ್ನುಗಳು (Plastic Pen), 5 ಮರದ ಚಮಚಗಳು (Spoon) ಮತ್ತು ಒಂದು ಮೇಣದಬತ್ತಿ (Candel) ಇರುವುದು ಕಂಡುಬಂದಿದ್ದು, ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.














