Last Updated:
ಪಿಂಚಣಿ ಹಣವನ್ನು ಹಿಂತೆಗೆದುಕೊಂಡ ನಂತರ, ಅವರು ತಮ್ಮ ಖಾತೆಯಲ್ಲಿ ಇರುವ ಬಾಕಿ ಹಣವನ್ನು ಪರಿಶೀಲಿಸಲು ನಿರ್ಧರಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಆ ಸಮಯದಲ್ಲಿ ಅವರ ಜೊತೆಗೆ ತಮ್ಮ ವಿಕಲಚೇತನ ಮಗ ಕೂಡ ಇದ್ದರು.
Bank Balance Jumps to Rs 759 Crore: ಸರ್ಕಾರದಿಂದ ಪಾವತಿಯಾದ 500 ರೂಪಾಯಿ ಪೆನ್ಶನ್ ಹಣವನ್ನು ವಿತ್ಡ್ರಾ ಮಾಡಲು ಹೋದ ಅಜ್ಜರೊಬ್ಬರ ಖಾತೆಯಲ್ಲಿ ಕನಸಲ್ಲೂ ಎಣಿಸಲಾಗದಷ್ಟು ಪ್ರಮಾಣದ ಹಣ ತನ್ನ ಖಾತೆಯಲ್ಲಿ ಇರುವುದನ್ನು ಕಂಡು ಆಘಾತಕ್ಕೊಳಗಾದ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಮುಜಫರ್ಪುರ ಜಿಲ್ಲೆಯಲ್ಲಿ ಇಂತಹುದೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಪಿಂಚಣಿ ಹಣ ಪಡೆಯಲು ಹೋದ 82 ವರ್ಷದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿ ಸುಮಾರು ₹759 ಕೋಟಿ ಹಣ ಇರುವುದು ಕಂಡು ಆಘಾತಕ್ಕೊಳಗಾಗಿದ್ದಾರೆ. ಸಕ್ರಾ ಬ್ಲಾಕ್ನ ಥಾಟಿಯಾ ಸಿಹೋ ಗ್ರಾಮದ ನಿವಾಸಿ ಕಾಮೇಶ್ವರ ಮಿಶ್ರಾ ಅವರ ಖಾತೆಯಲ್ಲಿ ಈ ಇರುವುದು ಪತ್ತೆಯಾಗಿದೆ.
ಪಿಂಚಣಿ ಹಣವನ್ನು ಹಿಂತೆಗೆದುಕೊಂಡ ನಂತರ, ಅವರು ತಮ್ಮ ಖಾತೆಯಲ್ಲಿ ಇರುವ ಬಾಕಿ ಹಣವನ್ನು ಪರಿಶೀಲಿಸಲು ನಿರ್ಧರಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಆ ಸಮಯದಲ್ಲಿ ಅವರ ಜೊತೆಗೆ ತಮ್ಮ ವಿಕಲಚೇತನ ಮಗ ಕೂಡ ಇದ್ದರು. ತಮ್ಮ ಮಗನ ಖಾತೆಯನ್ನು ಪರಿಶೀಲಿಸಿದಾಗ, ಅವರು ಅದೇ ಗಾತ್ರದ ಹಣವನ್ನು ತಮ್ಮ ಮಗನ ಖಾತೆಯಲ್ಲೂ ನೋಡಿ ಅಚ್ಚರಿಗೊಳಗಾಗಿದ್ದಾರೆ. ಎರಡೂ ಖಾತೆಗಳಲ್ಲಿ ಒಟ್ಟು ಮೊತ್ತ ₹1,500 ಕೋಟಿಗಿಂತ ಹೆಚ್ಚಿತ್ತು ಎಂದು ತಿಳಿದು ಬಂದಿದೆ.
ತನ್ನ ಖಾತೆಯಲ್ಲಿ ಇದ್ದಕ್ಕಿದ್ದಂತೆ ಇಷ್ಟೊಂದು ಹಣ ಹೇಗೆ ಕಾಣಿಸಿಕೊಂಡಿತು ಎಂದು ಕಾಮೇಶ್ವರ ಮಿಶ್ರಾ ಅವರಿಗೆ ಅರ್ಥವೇ ಆಗಿಲ್ಲ. ಈ ವೇಳೆ ವಿವೇಚನೆಯಿಂದ ವರ್ತಿಸಿದ ಅವರು, ಬ್ಯಾಂಕ್ ಮತ್ತು ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ, ತನ್ನ ಖಾತೆಯಲ್ಲಿ ಇಷ್ಟೊಂದು ಹಣ ತಪ್ಪಾಗಿ ಸೇರಿರುವುದರ ಬಗ್ಗೆ ತಿಳಿಸಿ, ತಕ್ಷಣವೇ ಸರಿಪಡಿಸಲು ಸಾಧ್ಯವಾಗುವಂತೆ ತನಿಖೆ ಮಾಡುವಂತೆ ವಿನಂತಿಸಿದರು.
ಗಯಾ ಜಿಲ್ಲೆಯ ಡೆಲ್ಹಾದಲ್ಲಿ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ, ಇ-ರಿಕ್ಷಾ ಚಾಲಕ ಶಿವ ಕುಮಾರ್ ಪಟೇಲ್ ಅವರ ಖಾತೆಗೆ ಇದೇ ರೀತಿಯಾಗಿ ₹759 ಕೋಟಿ ಬಂದಿದೆ. ವೈಶಾಲಿ ಮತ್ತು ಸಮಷ್ಟಿಪುರ ಜಿಲ್ಲೆಗಳಲ್ಲಿ, ಕೆಲವು ಪಿಂಚಣಿದಾರರ ಖಾತೆಗಳು ಸಹ ₹740 ಕೋಟಿ ಹಣ ಪತ್ತೆಯಾಗಿರುವುದು ಕಂಡು ಬಂದಿದೆ.
New Delhi,Delhi














