Last Updated:
ಬೇಲ್ ಚಿತ್ರದಲ್ಲಿ ಲವ್ಲಿ ಕತೆ ಕೂಡ ಇದೆ. ಲವ್ಲಿ ಜೋಡಿ ಸಹ ಇದೆ. ದೀಕ್ಷಿತ್ ಶೆಟ್ಟಿ ಹಾಗೂ ಸಂಜನಾ ಆನಂದ್ ಇಲ್ಲಿ ಆ ಮೋಡಿ ಮಾಡ್ತಾರೆ. ಇವರ ಜೋಡಿಯ ಇನ್ನಷ್ಟು ಅಧಿಕೃತ ವಿವರ ಇಲ್ಲಿದೆ ಓದಿ.
ಬೇಲ್ ಚಿತ್ರದಲ್ಲಿ (Bail Movie) ಶಿವರಾಜ್ ಕುಮಾರ್ (Shiva Rajkumar) ಇದ್ದಾರೆ. ಇವರೇ ಇಡೀ ಚಿತ್ರದಲ್ಲಿ ಅನ್ನುವ ಅನುಭವ ಫಸ್ಟ್ ಟೀಸರ್ ಮೂಡಿಸಿತ್ತು. ಆದರೆ, ಟ್ರೈಲರ್ ಬೇರೆ ಕತೆ ಹೇಳ್ತಿದೆ. ಇದರ ನಡುವೆ ಬಂದ ಸಿನಿಮಾದ ಹಾಡು (Movie Song) ಇನ್ನೂ ಒಂದು ಬ್ಯೂಟಿಫುಲ್ ಲವ್ ಸ್ಟೋರಿ (Love Story) ಹೇಳ್ತಿದೆ. ಈ ಒಂದು ಚಿತ್ರದಲ್ಲಿ ಲವ್ಲಿ ಸ್ಟೋರಿನೂ ಇದೆ ಅನ್ನೋದನ್ನ ತಿಳಿಸುತ್ತದೆ. ಈ ಬಗ್ಗೆ ಚಿತ್ರ ತಂಡ ಅಧಿಕೃತವಾಗಿಯೇ ಮಾಹಿತಿ ಕೊಟ್ಟಿದೆ. ಅದರ ವಿವರ ಇಲ್ಲಿದೆ ಓದಿ.












