Shiva Rjkumar: ಅತ್ತ ಬೇಲ್ ಇತ್ತ ಬಾಂಡ್, ಶಿವಣ್ಣ ಕಿಂಗ್ ಆಫ್ ಸ್ಟೈಲ್! ಹೀಗೆ ಹೇಳಿದ್ಯಾರು? | | ACTPnews

shiva rajkumar bail and operation dream theater movie photo share on social media


ಬಾಂಡ್ ಪ್ರಕಾಶ್ ಮಸ್ತ್ ಲುಕ್

666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಫೋಟೋ ಇಂಟ್ರಸ್ಟಿಂಗ್ ಆಗಿದೆ. ಕಾರ್ ಅಲ್ಲಿ ಶಿವಣ್ಣ ಕುಳಿತಿದ್ದಾರೆ. ಡ್ರೈವ್ ಕೂಡ ಮಾಡುತ್ತಿದ್ದಾರೆ. ಆದರೆ, ಹಿಂದೆ ತಿರುಗಿ ಎಡಗೈಯಿಂದ ಪಿಸ್ತೂಲ್ ಹಿಡಿದು ರೆಡಿ ಆಗಿದ್ದಾರೆ.

ಬಾಂಡ್ ಪ್ರಕಾಶ್ ಮಸ್ತ್ ಲುಕ್

(ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್)

ಆದರೆ, ಶಿವಣ್ಣ ಯಾರಿಗೆ ಶೂಟ್ ಮಾಡಲು ರೆಡಿ ಆಗಿದ್ದಾರೆ ಅನ್ನುವ ಕುತೂಹಲವನ್ನ ಈ ಪೋಸ್ಟರ್ ಹೆಚ್ಚಿಸಿದೆ. ಹಾಗೆ ಅಣ್ಣಾವರ ಬಾಂಡ್ ಸರಣಿ ಸಿನಿಮಾದ ಹೆಸರನ್ನೆ ಶಿವಣ್ಣ ಇಲ್ಲಿ ಇಟ್ಟುಕೊಂಡಿದ್ದಾರೆ. ಅಂದ್ರೆ, ಪ್ರಕಾಶ್ ಅನ್ನುವ ಪಾತ್ರವನ್ನ ಶಿವಣ್ಣ ಇಲ್ಲಿ ಮಾಡುತ್ತಿದ್ದಾರೆ.
ಹೇಮಂತ್ ರಾವ್ ಸಿನಿಮಾ

ಡೈರೆಕ್ಟರ್ ಹೇಮಂತ್ ರಾವ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಈ ಮೂಲಕ ಅಣ್ಣಾವ್ರ ಬಾಂಡ್ ಸೀರೀಸ್ ಸಿನಿಮಾಗಳ್ನು ಈ ಚಿತ್ರ ನೆನಪಿಸುತ್ತಿದೆ. ಆ ಚಿತ್ರಗಳಿಂದಲೇ ಈ ಸಿನಿಮಾ ಸ್ಪೂರ್ತಿ ಪಡೆದಿದೆ.

ಡಾಲಿ ಧನಂಜಯ್, ಶಿವರಾಜ್ ಕುಮಾರ್ ಸೇರಿದಂತೆ ಇನ್ನು ಅನೇಕ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಇತ್ತೀಚಿಗೆ ಈ ಚಿತ್ರದ ಜೂಲಿ ಅನ್ನುವ ಹಾಡನ್ನು ಚಿತ್ರೀಕರಣ ಮಾಡಿದ್ದಾರೆ. ಇನ್ನುಳಿದಂತೆ ಈ ಚಿತ್ರ ಒಂದಷ್ಟು ಜಾಸ್ತಿನೇ ಕುತೂಹಲ ಮೂಡಿಸಿದೆ ಅಂತ ಹೇಳಬಹುದು.

ಶಿವಣ್ಣ ಕಿಂಗ್ ಆಫ್ ಸ್ಟೈಲ್

ಡೈರೆಕ್ಟರ್ ಪವನ್ ಒಡೆಯರ್ ಒಂದು ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಶಿವರಾಜ್ ಕುಮಾರ್ ಸಖತ್ ಲುಕ್ ಇದೆ. ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ಇದಾಗಿದೆ.

ಹಾಗೆ ಬೇಲ್ ಚಿತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಅನ್ನುವ ಮಾತು ಇದೆ. ಆದರೆ, ಅಧಿಕೃತವಾಗಿ ಈ ವಿಚಾರ ರಿವೀಲ್ ಆಗಬೇಕಿದೆ. ಆದರೆ, ಈ ಚಿತ್ರದಲ್ಲಿ ವಿಜಿ ಅನ್ನುವ ರೋಲ್ ಮಾಡಿದ್ದಾರೆ ಅನ್ನೋದು ಚಿತ್ರದ ಟೀಸರ್ ಅಲ್ಲಿಯೇ ಗೊತ್ತಾಗುತ್ತದೆ.

shiva rajkumar bail and operation dream theater movie photo share on social media

ಶಿವಣ್ಣ ಕಿಂಗ್ ಆಫ್ ಸ್ಟೈಲ್; ಹೀಗೆ ಹೇಳಿದ್ಯಾರು?

(ಚಿತ್ರ ಕೃಪೆ: ಪವನ್ ಒಡೆಯರ್ ಎಕ್ಸ್‌ ಖಾತೆ)

ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್

ಈ ಚಿತ್ರದಲ್ಲಿ ಶಿವಣ್ಣ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ಅಲ್ಲಿಯೇ ಇದ್ದಾರೆ. ದಪ್ಪ ಮೀಸೆ ಬೇರೆ ಇದೆ. ಪೊಲೀಸ್ ಅಲ್ವಾ? ಅದಕ್ಕೆ ಅಂತಲೂ ನಾವು ಈಗ ಅಂದುಕೊಳ್ಳಬಹುದು.

ಅಂತಹ ಈ ಒಂದು ಪಾತ್ರದ ಒಂದು ಸ್ಟೈಲಿಶ್ ವಾಕ್ ಇರೋ ಒಂದು ಫೋಟೊವನ್ನ ಡೈರೆಕ್ಟರ್ ಪವನ್ ಒಡೆಯರ್ ಶೇರ್ ಮಾಡಿದ್ದಾರೆ. ಎಕ್ಸ್ ಖಾತೆಯ ತಮ್ಮ ಪೇಜ್ ಅಲ್ಲಿಯೇ ಇದನ್ನ ಶೇರ್ ಮಾಡಿಕೊಂಡಿದ್ದಾರೆ ನೋಡಿ.

ಪವನ್ ಹೇಳಿದ್ದೇನು

ಬೇಲ್ ಚಿತ್ರದ ಡೈರೆಕ್ಟರ್ ಪವನ್ ಒಡೆಯರ್ ಹೀಗೆ ಬರೆದುಕೊಂಡಿದ್ದಾರೆ. ಈಗಾಗಲೇ ಹೇಳಿದಂತೆ ಶಿವಣ್ಣನ ಒಂದು ಫೋಟೋ ಹಂಚಿಕೊಂಡಿದ್ದಾರೆ. ಅದಕ್ಕೆ “King of style” ಅಂತಲೂ ಬರೆದಿದ್ದಾರೆ.

ಈ ಒಂದು ಫೋಟೋ ನಿಜಕ್ಕೂ ಸಖತ್ ಆಗಿದೆ. ಸೂಟು-ಬೂಟು ಧರಿಸಿಕೊಂಡು ಶಿವಣ್ಣ ಸೂಪರ್ ಆಗಿಯೇ ಕಾಣಿಸುತ್ತಿದ್ದಾರೆ. ಅಂದ್ಹಾಗೆ ಈ ಚಿತ್ರ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ.

ಈ ವಿಷಯ ಚಿತ್ರದ ಮೊದಲ ಟೀಸರ್ ಅಲ್ಲಿಯೆ ರಿವೀಲ್ ಆಗಿದೆ. ಆದರೆ, 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ರಿಲೀಸ್ ಮಾಹಿತಿ ಇನ್ನಷ್ಟೆ ಹೊರ ಬರಬೇಕಿದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports