Education: ಪರೀಕ್ಷಾ ಕೇಂದ್ರವೋ ಅಥವಾ ಮಿಲಿಟರಿ ಬೇಸೋ? ಈ ದೇಶಗಳಲ್ಲಿ ಸೈನಿಕರ ಕಾವಲಲ್ಲೇ ನಡೆಯುತ್ತವೆ ಎಕ್ಸಾಂಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ!


Last Updated:

Education: ಪರೀಕ್ಷಾ ಸಮಯದಲ್ಲಿ ಶಾಲೆ-ಕಾಲೇಜುಗಳನ್ನು ಮಿಲಿಟರಿ ಕ್ಯಾಂಪ್‌ಗಳಂತೆ ಪರಿವರ್ತಿಸಿ ಡ್ರೋನ್ ಮೂಲಕ ಕಾವಲು ಕಾಯುವ ಮೂಲಕ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆ ಕಾಪಾಡಲಾಗುತ್ತದೆ. ಆ ದೇಶಗಳು ಯಾವವು ಎಂದು ನೋಡೋಣ ಬನ್ನಿ.

ಸಾಂಕೇತಿಕ ಚಿತ್ರ!
ಸಾಂಕೇತಿಕ ಚಿತ್ರ!

ನೀಟ್ ಪತ್ರಿಕೆ ಸೋರಿಕೆ (NEET Paper Leak) ಹಗರಣದ ನಂತರ ಪರೀಕ್ಷೆಗಳ ಗೌಪ್ಯತೆ ಕಾಪಾಡಲು ಭಾರತದಲ್ಲಿ ಸೇನೆಯ ನೆರವು ಪಡೆಯುವ ಚರ್ಚೆ ಶುರುವಾಗಿದೆ. ಕೆಲ ದೇಶಗಳಲ್ಲಿ ಪರೀಕ್ಷಾ(Exam) ಮಾಫಿಯಾವನ್ನು ಮಟ್ಟ ಹಾಕಲು ಹಾಗೂ ಶಸ್ತ್ರಸಜ್ಜಿತ ವಾಹನಗಳಲ್ಲಿ ಪ್ರಶ್ನೆ ಪತ್ರಿಕೆ ಸಾಗಿಸಲು ಮಿಲಿಟರಿ ಮತ್ತು ಗುಪ್ತಚರ ಸಂಸ್ಥೆಗಳನ್ನು ಬಳಸಿಕೊಳ್ಳುವುದು ಸಾಮಾನ್ಯ ಅಭ್ಯಾಸವಾಗಿದೆ. ಪರೀಕ್ಷಾ ಸಮಯದಲ್ಲಿ(Exam Time) ಶಾಲೆ-ಕಾಲೇಜುಗಳನ್ನು ಮಿಲಿಟರಿ ಕ್ಯಾಂಪ್‌ಗಳಂತೆ ಪರಿವರ್ತಿಸಿ ಡ್ರೋನ್ (Drone) ಮೂಲಕ ಕಾವಲು ಕಾಯುವ ಮೂಲಕ ಶಿಕ್ಷಣ ವ್ಯವಸ್ಥೆಯ (Education System) ವಿಶ್ವಾಸಾರ್ಹತೆ ಕಾಪಾಡಲಾಗುತ್ತದೆ. ಆ ದೇಶಗಳು ಯಾವವು ಎಂದು ನೋಡೋಣ ಬನ್ನಿ.

ಭಾರತದಲ್ಲಿ ಭುಗಿಲೆದ್ದ ನೀಟ್​ ಹಗರಣ!

ಕಾನ್ಪುರದಲ್ಲಿ ಇತ್ತೀಚೆಗೆ ನಡೆದ ನೀಟ್ ಪತ್ರಿಕೆ ಸೋರಿಕೆ ಹಗರಣದ ನಂತರ ಭಾರತದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಮುಂಬರುವ ಪರೀಕ್ಷೆಗಳನ್ನು ಸುರಕ್ಷಿತವಾಗಿ ನಡೆಸಲು ಸರ್ಕಾರವು ಭಾರತೀಯ ವಾಯುಪಡೆ ಮತ್ತು ಸೇನೆಯ ನೆರವು ಪಡೆಯಲು ಆಲೋಚಿಸುತ್ತಿದೆ ಎಂದು ವರದಿಯಾಗಿದೆ. ದೇಶ ಕಾಯುವ ಸೈನಿಕರಿಗೆ ಮತ್ತು ಕಾಲೇಜು ಪರೀಕ್ಷೆಗಳಿಗೆ ಏನು ಸಂಬಂಧ ಎಂದು ಹಲವರು ಆಶ್ಚರ್ಯ ಪಡಬಹುದು. ಆದರೆ ಪರೀಕ್ಷೆಯ ಗೌಪ್ಯತೆ ಕಾಪಾಡಲು ಮತ್ತು ಪತ್ರಿಕೆ ಸೋರಿಕೆ ಮಾಫಿಯಾವನ್ನು ಮಟ್ಟ ಹಾಕಲು ಮಿಲಿಟರಿ ಬಳಸುವುದು ಹೊಸದೇನಲ್ಲ. ಪ್ರಪಂಚದ ಅನೇಕ ದೇಶಗಳಲ್ಲಿ ಈ ನಿಯಮ ಈಗಾಗಲೇ ಜಾರಿಯಲ್ಲಿದೆ.

ಈ ದೇಶದಲ್ಲಿದೆ ಸೈನಿಕರ ಭದ್ರತೆ! 

ದೇಶದ ಯುವಕರ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ನಂಬಿಕೆ ಅಪಾಯದಲ್ಲಿದ್ದಾಗ ಸರ್ಕಾರಗಳು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಚೀನಾದ ಕಠಿಣ “ಗಾವೊಕಾವೊ” ಪರೀಕ್ಷೆಯಿಂದ ಹಿಡಿದು ಅಲ್ಜೀರಿಯಾದವರೆಗೆ ಇಂತಹ ನಿಯಮಗಳಿವೆ. ಮಧ್ಯಪ್ರಾಚ್ಯ, ಅಲ್ಜೀರಿಯಾದಲ್ಲಿ ಪರೀಕ್ಷೆಯ ಸಮಯದಲ್ಲಿ ಇಂಟರ್ನೆಟ್ ಅನ್ನೇ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಅಲ್ಲಿನ ಮಿಲಿಟರಿ ಮತ್ತು ಗುಪ್ತಚರ ಸಂಸ್ಥೆಗಳು ಪರೀಕ್ಷಾ ಕೇಂದ್ರಗಳನ್ನು ಯಾರಿಗೂ ಪ್ರವೇಶಿಸಲು ಸಾಧ್ಯವಾಗದ ಕೋಟೆಗಳಂತೆ ಬದಲಾಯಿಸುತ್ತವೆ.

ಶಸ್ತ್ರ ಸಜ್ಜಿತ ವಾಹನದಲ್ಲಿ ಪ್ರಶ್ನೆ ಪತ್ರಿಕೆ ಸಾಗಣೆ!

ಶಸ್ತ್ರಸಜ್ಜಿತ ಮಿಲಿಟರಿ ವಾಹನಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸಲಾಗುತ್ತದೆ. ಡ್ರೋನ್‌ಗಳ ಮೂಲಕ ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡಲಾಗುತ್ತದೆ. ಇಲ್ಲಿ ಮಿಲಿಟರಿಯ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ. ಪರೀಕ್ಷೆಯ ದಿನಗಳಲ್ಲಿ ಈ ದೇಶಗಳ ಶಾಲೆ ಮತ್ತು ಕಾಲೇಜುಗಳು ನೋಡಲು ಮಿಲಿಟರಿ ಕ್ಯಾಂಪ್‌ಗಳಂತೆಯೇ ಕಾಣಿಸುತ್ತವೆ.

ನಿಗಾ ಹೆಚ್ಚಿಸಲು ಸರ್ಕಾರ ತೆಗೆದುಕೊಂಡ ಕ್ರಮವೇನು?

ಈ ಮಧ್ಯೆ, ನೀಟ್​ ಮರುಪರೀಕ್ಷೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಿದೆ. ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವಂತೆ ಬೇಡಿಕೆ ಕೂಡ ಕೇಳಿಬಂದಿದೆ. ಕೆಲ ರಾಜ್ಯಗಳು ಈಗಾಗಲೇ ಈ ಸೌಲಭ್ಯ ಒದಗಿಸಲು ಮುಂದಾಗಿವೆ. ಎನ್​​ಟಿಎ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮಾಹಿತಿಯಲ್ಲಿ, ಮರುಪರೀಕ್ಷೆಗಾಗಿ ಕಠಿಣ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿರುವುದಾಗಿ ಹೇಳಿದೆ. ಪರೀಕ್ಷಾ ಕೇಂದ್ರಗಳಲ್ಲಿ ನಿಗಾ ಹೆಚ್ಚಿಸುವುದು, ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆ ಬಳಸುವುದು ಹಾಗೂ ಪ್ರಶ್ನೆಪತ್ರಿಕೆ ಸಾಗಣೆಯಲ್ಲಿ ಬಹು ಹಂತದ ಭದ್ರತಾ ಕ್ರಮ ಅನುಸರಿಸುವುದಾಗಿ ಸಂಸ್ಥೆ ತಿಳಿಸಿದೆ.

ಮುಂದಿನ ದಿನದಲ್ಲಿ ಕಂಪ್ಯೂಟರ್​ ಆಧಾರಿತ ಪರೀಕ್ಷೆ!

ಇದರ ಜೊತೆಗೆ, 2027ರಿಂದ NEET ಪರೀಕ್ಷೆಯನ್ನು ಸಂಪೂರ್ಣ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿ ರೂಪಿಸುವ ಯೋಜನೆಯನ್ನೂ ಕೇಂದ್ರ ಸರ್ಕಾರ ಘೋಷಿಸಿದೆ. ಇಂತಹ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಿಂದ ಭವಿಷ್ಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ತಡೆಯಲು ಸಹಾಯವಾಗಲಿದೆ ಎಂದು ಅಧಿಕಾರಿಗಳು ನಂಬಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed