ನಿವೃತ್ತ ಪೊಲೀಸ್ ಆಫೀಸರ್
(ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್)
ಈ ಬಗ್ಗೆ ಡೈರೆಕ್ಟರ್ ಪವನ್ ಒಡೆಯರ್ ಏನೂ ಹೇಳಿಕೊಂಡಿಲ್ಲ. ಟೀಸರ್ ಅಲ್ಲೂ ಈ ಬಗ್ಗೆ ಏನೂ ಹಿಂಟ್ ಕೊಟ್ಟಿಲ್ಲ. ಆದರೂ ಈಗೊಂದು ಸುದ್ದಿ ಕೇಳಿ ಬರ್ತಿದೆ.
ಬೇಲ್ ಚಿತ್ರದಲ್ಲಿ ಶಿವಣ್ಣ ನಿವೃತ್ತ ಪೊಲೀಸ್ ಆಫೀಸರ್ ರೋಲ್ ಮಾಡಿದ್ದಾರೆ. ವಿಜಿ ಅನ್ನೋದು ಈ ಪಾತ್ರದ ಹೆಸರು ಅನ್ನೊದು ರಿವೀಲ್ ಆಗಿದೆ. ಟೀಸರ್ ಅಲ್ಲಿ ಅದು ಗೊತ್ತಾಗುತ್ತದೆ.
ರಾಬರ್ಟ್ ಅನ್ನುವ ಪಾತ್ರದ ಕಾಲ್ ಬಂದಾಗ ಶಿವಣ್ಣನನ್ನ ವಿಜಿ ಅಂತಲೇ ಆ ರಾಬರ್ಟ್ ಕರೆಯುತ್ತಾರೆ. ಹಾಗೆ ಇದು ರಿವೀಲ್ ಆಗಿದೆ. ಆದರೆ, ಈ ಪಾತ್ರ ನಿವೃತ್ತ ಪೊಲೀಸ್ ಆಫೀಸರ್ ಅನ್ನುವ ನ್ಯೂಸ್ ಈಗ ಹೆಚ್ಚು ಕೇಳಿ ಬರ್ತಿದೆ. ಈ ಬಗ್ಗೆ ಡೈರೆಕ್ಟರ್ ಪವನ್ ಒಡೆಯರ್ ಮುಂದಿನ ದಿನಗಳಲ್ಲಿ ಹೇಳಿದರು ಹೇಳಬಹುದು. ಆದರೆ, ಸದ್ಯಕ್ಕೆ ಏನೂ ಹೇಳಿಕೊಂಡಿಲ್ಲ ನೋಡಿ.
ಶಿವರಾಜ್ ಕುಮಾರ್ ಅವರು ಈ ಬೇಲ್ ಚಿತ್ರದಲ್ಲಿ ಅದ್ಭುತವಾಗಿಯೇ ಕಾಣಿಸುತ್ತಿದ್ದಾರೆ. ಟೀಸರ್ ಅಲ್ಲಿರೋ ಕೆಲವು ದೃಶ್ಯಗಳಲ್ಲಿ ಶಿವಣ್ಣ, ಅಣ್ಣಾವ್ರ ತರ ಕಾಣಿಸಿಕೊಂಡಿದ್ದಾರೆ.
ಈ ಒಂದು ಮಾತನ್ನ ಡೈರೆಕ್ಟರ್ ಪವನ್ ಒಡೆಯರ್ ಅವರಿಗೆ ಹಲವರು ಹೇಳಿದ್ದಾರೆ. ಚಿತ್ರದಲ್ಲಿ ನಟಿಸಿರೋ ಸಾಯಿ ಕುಮಾರ್ ಅವರು ಇದನ್ನೇ ಹೇಳಿದ್ದಾರೆ. ಮೊನ್ನೆ ಅಜನೀಶ್ ಲೋಕನಾಥ್ ಲೈವ್ ಇನ್ ಕಾನ್ಸರ್ಟ್ ಅಲ್ಲಿ ಸುದೀಪ್ ಕೂಡ ಇದನ್ನ ಹೇಳಿದ್ದಾರೆ. ವೇದಕೆ ಮೇಲೆ ಚಿತ್ರದ ಟೀಸರ್ ನೋಡಿದ್ದಾರೆ. ಆ ಮೇಲೆ ಹೀಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬೇಲ್ ಚಿತ್ರದ ಶಿವಣ್ಣನ ರೋಲ್
(ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್)
ಬೇಲ್ ಚಿತ್ರದ ರಿಲೀಸ್ ಫಿಕ್ಸ್ ಆಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೇನೆ ಈ ಚಿತ್ರ ತೆರೆಗೆ ಬರ್ತಿದೆ. ಇದನ್ನ ಟೀಸರ್ ಕೊನೆಯಲ್ಲಿ ರಿವೀಲ್ ಮಾಡಿದ್ದಾರೆ.
ಬೇಲ್ ಚಿತ್ರದ ಚಿತ್ರೀಕರಣ 80 ದಿನ ನಡೆದಿದೆ. ಕೊನೆ ಹಂತದ ಚಿತ್ರೀಕರಣ ಹಿಮಾಚಲ ಪ್ರದೇಶದಲ್ಲಿ ಆಗಿದೆ. ಇಲ್ಲಿಯ ಧರ್ಮಶಾಲಾದಲ್ಲಿಯೇ ಶೂಟಿಂಗ್ ಮಾಡಲಾಗಿದೆ.
ಶಿವರಾಜ್ ಕುಮಾರ್, ಜಯರಾಮ್, ಸಾಯಿ ಕುಮಾರ್, ಸಂಜನಾ ಆನಂದ್, ದೀಕ್ಷಿತ್ ಶೆಟ್ಟಿ ಸೇರಿದಂತೆ ಇನ್ನು ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದು ಒಂದೇ ಜಾನರ್‌ಗೆ ಸೇರಿದ ಸಿನಿಮಾ ಅಲ್ವೇ ಅಲ್ಲ. ಎಲ್ಲವೂ ಇರೋ ಚಿತ್ರವೇ ಆಗಿದೆ ಅಂತ ಪವನ್ ಒಡೆಯರ್ ಫಸ್ಟ್ ನ್ಯೂಸ್ ಚಾನೆಲ್‌ನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.












