Last Updated:
ಗ್ರಾಮಾಯಣ ಚಿತ್ರಕ್ಕೆ ಮೊದಲ ದಿನ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇದನ್ನ ಕೇಳಿದ ಶಿವರಾಜ್ ಕುಮಾರ್ ತುಂಬಾನೆ ಖುಷಿಪಟ್ಟಿದ್ದಾರೆ. ಒಂದು ವಿಡಿಯೋ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಗ್ರಾಮಾಯಣ ಚಿತ್ರ (Graamaayana Movie) ತೆರೆಗೆ ಬಂದಿದೆ. ಉತ್ತಮ ಪ್ರತಿಕ್ರಿಯೆ ಕೂಡ ಬಂದಿವೆ. ಸೆಲೆಬ್ರಿಟಿ ಶೋದಲ್ಲಿ ಈ ಚಿತ್ರ ನೋಡಿದ ಕಲಾವಿದರು ಮೆಚ್ಚಿಕೊಂಡಿದ್ದಾರೆ. ವಿನಯ್ ರಾಜ್ಕುಮಾರ್ (Vinay Rajkumar) ಹಾಗೂ ಮೇಘಾ ಶೆಟ್ಟಿ (Megha Shetty) ಅವರ ಅಭಿನಯಕ್ಕೂ ಒಳ್ಳೆ ಅಭಿಪ್ರಾಯ ಬಂದಿವೆ. ಆದರೆ, ದೊಡ್ಮನೆಯ ಶಿವಣ್ಣ (Shivanna) ಈ ಚಿತ್ರ ನೋಡಿದ್ರಾ? ನೋಡಿ ಹೇಳಿದ್ದೇನು? ನೋಡಿಲ್ಲ ಅನ್ನೋದಾದ್ರೆ ಯಾವಾಗ ನೋಡ್ತಾರೆ? ಈ ಎಲ್ಲ ಕುತೂಹಲಕ್ಕೆ ಇಲ್ಲೊಂದಿಷ್ಟು ವಿವರ ಇದೆ ಓದಿ.
ಗ್ರಾಮಾಯಣ ಯಾವಾಗ್ ನೋಡ್ತಾರೆ (ಚಿತ್ರ ಕೃಪೆ: ವಿನಯ್ ರಾಜ್ಕುಮಾರ್ ಇನ್ಸ್ಟಾಗ್ರಾಮ್)
ಹಾಗೆ ಇದನ್ನ ಕೇಳಿದ್ಮೇಲೆ ಶಿವಣ್ಣ ತುಂಬಾನೆ ಖುಷಿಪಟ್ಟಿದ್ದಾರೆ. ಚಿತ್ರದ ನಾಯಕಿ ಮೇಘಾ ಶೆಟ್ಟಿ, ಡೈರೆಕ್ಟರ್ ದೇವನೂರು ಚಂದ್ರು, ಕ್ಯಾಮರಾಮನ್ ಸಂತೋಷ್ ರೈ ಪಾತಾಜೆ ಹೀಗೆ ಎಲ್ಲರ ಕೆಲಸಕ್ಕೂ ಒಳ್ಳೆ ಅಭಿಪ್ರಾಯ ಬರ್ತಿವೆ. ಇದನ್ನೆಲ್ಲ ಕೇಳಿದ್ಮೇಲೆ ಶಿವಣ್ಣ ತುಂಬಾನೆ ಸಂತೋಷ ಪಟ್ಟಿದ್ದಾರೆ.
ಶಿವರಾಜ್ ಕುಮಾರ್ ಅವರು ಗ್ರಾಮಾಯಣ ಚಿತ್ರವನ್ನ ಇನ್ನು ನೋಡಿಲ್ಲ. ಅದೆಲ್ಲೋ ಹೊರಗಡೆ ಇದ್ದಾರೆ. ಅಲ್ಲಿಂದ ಬಂದ್ಮೇಲೆ ಈ ಚಿತ್ರ ನೋಡುವ ಪ್ಲಾನ್ ಹಾಕಿದ್ದಾರೆ.
ಆದಷ್ಟು ಬೇಗ ಈ ಚಿತ್ರವನ್ನ ನೋಡುತ್ತೇನೆ ಅಂತಲೇ ಶಿವಣ್ಣ ಈಗ ಹೇಳಿದ್ದಾರೆ. ಶಿವಣ್ಣ ಮಾತನಾಡಿರೋ ವಿಡಿಯೋ ಈಗ ಎಲ್ಲೆಡೆ ಶೇರ್ ಕೂಡ ಆಗುತ್ತಿದೆ.
ಗ್ರಾಮಾಯಣ ಚಿತ್ರವನ್ನ ಡೈರೆಕ್ಟರ್ ದೇವನೂರು ಚಂದ್ರು ನಿರ್ದೇಶನ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಕೊಟ್ಟಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮರಾವರ್ಕ್ ಮಾಡಿದ್ದಾರೆ.
ಅರುಣ್ ಸಾಗರ್, ಗೋಪಾಲಕೃಷ್ಣ ದೇಶಪಾಂಡೆ, ಅರ್ಪಣಾ ಸೇರಿದಂತೆ ಇನ್ನು ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜುಲೈ-3 ರಂದು ಈ ಚಿತ್ರ ರಿಲೀಸ್ ಆಗಿದೆ.
ಶಿವಣ್ಣ ಗ್ರಾಮಾಯಣ ನೋಡಿದ್ರಾ
ಜುಲೈ-3 ರಂದು ಈ ಚಿತ್ರ ಎಲ್ಲೆಡೆ ರಿಲೀಸ್ ಆಗಿದೆ. ಮೊದಲ ದಿನ ಈ ಚಿತ್ರ ನೋಡಿದವರು ಮೆಚ್ಚಿಕೊಂಡಿದ್ದಾರೆ. ಸೂಪರ್ ಸಿನಿಮಾ ಅಂತಲೂ ಹೇಳಿ ಹೋಗಿದ್ದಾರೆ.
ಚಿತ್ರದಲ್ಲಿ ದೇವನೂರು ಚಂದ್ರು ಒಳ್ಳೆ ವಿಚಾರವನ್ನೆ ಹೇಳಿದ್ದಾರೆ. ಈ ಒಂದು ವಿಷಯ ಜನಕ್ಕೆ ಇಷ್ಟ ಆಗಿದೆ. ಅದನ್ನೆ ಬಹುತೇಕ ಜನರು ಹೇಳಿದ್ದಾರೆ.
ಮ್ಯೂಸಿಕ್ ಡೈರೆಕ್ಟರ್ ಪೂರ್ಣಚಂದ್ರ ತೇಜಸ್ವಿ ಒಳ್ಳೆ ಹಾಡುಗಳನ್ನೆ ಮಾಡಿದ್ದಾರೆ. ಇದನ್ನೂ ಜನ ಮೆಚ್ಚಿಕೊಂಡಿದ್ದಾರೆ. ಒಳ್ಳೆ ಸಂಗೀತ ಅಂತಲೂ ಕೊಂಡಾಡಿದ್ದಾರೆ. ಕ್ಯಾಮರಾಮನ್ ಸಂತೋಷ್ ರೈ ಪಾತಾಜೆ ಅವರ ಕೆಲಸವು ಮೆಚ್ಚಿಕೊಳ್ಳುವಂತೇನೆ ಇದೆ. ಇದಕ್ಕೂ ಒಳ್ಳೆ ರೆಸ್ಪಾನ್ಸ್ ಬರ್ತಿವೆ.
ಒಟ್ಟಾರೆ, ಗ್ರಾಮಾಯಣ ಹಲವು ಕಾರಣಗಳಿಗೆ ಜನಕ್ಕೆ ಇಷ್ಟವಾಗಿದೆ. ಹಾಗೇನೆ ವಿನಯ್ ಅಭಿನಯವನ್ನ ಫ್ಯಾನ್ಸ್ ತುಂಬಾನೆ ಮೆಚಿಕೊಂಡಿದ್ದಾರೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka













