ಸಿಂಗೀತಂ ಶ್ರೀನಿವಾಸ್ ರಾವ್ ಅವರ ನಿಧನಕ್ಕೆ ಶಿವಣ್ಣ ಸಂತಾಪ ಸೂಚಿಸಿದ್ದಾರೆ. ನೀವು ಯಾವಾಗಾಲೂ ಗ್ರೇಟ್ ಸರ್. ಮರಳಿ ಬನ್ನಿ ಅಂತಲೇ ಶಿವಣ್ಣ ಹೇಳಿದ್ದಾರೆ.
ಮರಳಿ ಬನ್ನಿ ಸರ್…
(ಚಿತ್ರ ಕೃಪೆ: ಶಿವರಾಜ್ ಕುಮಾರ್ ಎಕ್ಸ್ ಖಾತೆ)
ನಿಮ್ಮ ಜೀವನವನ್ನ ಜೀವಿಸಿದ್ದಿರಿ. ಇರೋವರೆಗೂ ಸಿನಿಮಾವನ್ನ ಪ್ರೀತಿಸಿದ್ದೀರಿ. ನಿಮ್ಮ 94ನೇ ವಯಸ್ಸಿನಲ್ಲಿ ‘ಸಿಂಗ್ ಗೀತಂ’ ಅನ್ನುವ ಚಿತ್ರವನ್ನ ಡೈರೆಕ್ಷನ್ ಮಾಡಿದ್ದೀರಿ. ಇತರರಿಗೂ ಸ್ಪೂರ್ತಿ ಆಗಿದ್ದೀರಿ.
ನನ್ನ 40 ವರ್ಷದ ಚಿತ್ರ ಜೀವನದಲ್ಲಿ ನೀವು ನನಗೆ ಆನಂದ್ ಚಿತ್ರ ಕೊಟ್ಟಿದ್ದೀರಿ. ನಿಮ್ಮ ಈ ಚಿತ್ರದಿಂದಲೇ ನನ್ನ ಪಯಣ ಶುರು ಆಗಿದೆ. ನನ್ನ ಬಗೆಗಿನ ‘ಸರ್ವೈವರ್’ (SURVIVOR) ಸಾಕ್ಷ್ಯಚಿತ್ರದಲ್ಲಿ ನೀವು ಮಾತನಾಡಿದ್ದೀರಿ. ನಿಮ್ಮ ಅತ್ಯುತ್ತಮ ಮಾತುಗಳಲ್ಲಿ ಇದೂ ಒಂದಾಗಿದೆ.
ನಿಮ್ಮ ಜೀವನದಲ್ಲಿ ಸಿನಿಮಾನೇ ಎಲ್ಲ ಆಗಿತ್ತು. ಕೊನೆವರೆಗೂ ಸಿನಿಮಾವನ್ನ ಪ್ರೀತಿಸಿದ್ದಿರಿ. ನಿಮ್ಮ ಎಲ್ಲವನ್ನು ಚಿತ್ರರಂಗಕ್ಕೆ ಕೊಟ್ಟಿದ್ದೀರಿ. “ಮರಳಿ ಬನ್ನಿ ಸರ್! ನೀವು ಯಾವಾಗಲೂ ಗ್ರೇಟ್.”
ಹೀಗೆ ಶಿವಣ್ಣ ಎಕ್ಸ್ ಖಾತೆಯ ಪೇಜ್ ಅಲ್ಲಿಯೇ ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಮೊದಲ ಚಿತ್ರವನ್ನ ಡೈರೆಕ್ಟ್ ಮಾಡಿರೋ ಸಿಂಗೀತಂ ಶ್ರೀನಿವಾಸ್ ಅವರಿಗೆ ಸಂತಾಪ ಸೂಚಿಸಿದ್ದಾರೆ.
ನನ್ನ ಮೊದಲ ಚಿತ್ರಕ್ಕೆ
(ಚಿತ್ರ ಕೃಪೆ: ಶಿವರಾಜ್ ಕುಮಾರ್ ಎಕ್ಸ್ ಖಾತೆ)
ಈ ಚಿತ್ರವನ್ನ ಕಲ್ಕಿ ಚಿತ್ರದ ಡೈರೆಕ್ಟರ್ ನಾಗ್ ಅಶ್ವಿನ್ ತಮ್ಮ ವೈಜಯಂತಿ ಮೂವೀಸ್ ಬ್ಯಾನರ್ ಅಲ್ಲಿಯೇ ನಿರ್ಮಿಸಿದ್ದರು. ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಮಾಡಿದ್ದರು.
ಸಿಂಗೀತಂ ಶ್ರೀನಿವಾಸ್ ರಾವ್ ಅವರ ಈ ಚಿತ್ರ ಮ್ಯೂಸಿಕಲ್ ಫ್ಯಾಂಟಸಿ ಕಾಮಿಡಿ ಸಿನಿಮಾ ಆಗಿದೆ. ಇದು ಸಂಗೀತಂ ಶ್ರೀನಿವಾಸ್ ರಾವ್ ಅವರ 61ನೇ ಚಿತ್ರ ಅನ್ನುವ ಮಾಹಿತಿನೂ ಸಿಗುತ್ತದೆ.
Singeetham Srinivasa Rao sir, you gave me the start with “ANAND” 40 years of journey in films. You inspired the whole world by directing a film at 94 years. You’re the best example for age is just a number. You are not a part of an art form you are an ART. Your last words about ‘SURVIVOR’ was easily one of best conversation we have had, nobody but you can say it better, to live and breathe cinema for 94 years and give it everything till the last breath.
Come back sir! You will always be the greatest.— DrShivaRajkumar (@NimmaShivanna) October 4, 2026
ಈ ಚಿತ್ರದಲ್ಲಿ ಅಯಾನ್ ಖಾನ್ ನಟಿಸಿದ್ದರು. ಶಾಲಿನಿ ಕೊಂಡೆಪುಡಿ, ಅಹಲ್ಯಾ ಬಮ್ರೂ ಅವರು ಅಭಿನಯಿಸಿದ್ದರು. ಸಿಂಗೀತಂ ಶ್ರೀನಿವಾಸ್ ರಾವ್ ಅವರ ಈ ಚಿತ್ರಕ್ಕೆ ಒಳ್ಳೆ ಓಪನಿಯನ್ ಬಂದಿದ್ದವು. ವಿಮರ್ಶಕರು ಈ ಚಿತ್ರವನ್ನ ಮೆಚ್ಚಿಕೊಂಡಿದ್ದರು. ಐದಕ್ಕೆ ಮೂರು ಸ್ಟಾರ್ ರೇಟಿಂಗ್ ಅನ್ನೂ ಕೊಟ್ಟಿದ್ದರು.
ಸಿಂಗೀತಂ ಶ್ರೀನಿವಾಸ್ ರಾವ್ ಅವರ ಈ ಕೊನೆಯ ಚಿತ್ರದ ಬಜೆಟ್ ದೊಡ್ಡದೇ ಇದೆ. 20 ಕೋಟಿ ಬಜೆಟ್ ಅಲ್ಲಿಯೇ ಈ ಸಿನಿಮಾ ತಯಾರಾಗಿದೆ ಅನ್ನುವ ಮಾಹಿತಿನೂ ಸಿಗುತ್ತದೆ.
ಹಾಗೆ ಸಿಂಗೀತಂ ಶ್ರೀನಿವಾಸ್ ರಾವ್ ಅವರು ತಮ್ಮ 94 ನೇ ವಯಸ್ಸಿನಲ್ಲಿ ಚಿತ್ರ ಒಂದನ್ನ ಡೈರೆಕ್ಷನ್ ಮಾಡಿ ಇತರರಿಗೂ ಸ್ಪೂರ್ತಿ ಆಗಿದೆ ಅಂತಲೂ ಹೇಳಬಹುದು.













