Last Updated:
Rachita Ram: ರಚಿತಾ ರಾಮ್ ಅವರ ಬರ್ತ್ಡೇ ಫ್ಲೆಕ್ಸ್ಗಳ ಸಂಬಂಧ ಪರಿಸರ ಪ್ರೇಮಿಗಳು ಸಿಟ್ಟಾಗಿದ್ದಾರೆ. ಜನ ಸಾಮಾನ್ಯರಿಗೊಂದು ನ್ಯಾಯ, ಸೆಲೆಬ್ರಿಟಿಗಳಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ.
RR ನಗರದಲ್ಲಿ ಸ್ಯಾಂಡಲ್ವುಡ್ನ (Sandalwood) ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಫ್ಲೆಕ್ಸ್ ರಾರಾಜಿಸುತ್ತಿದೆ. ಹುಟ್ಟು ಹಬ್ಬದ ಹಿನ್ನೆಲೆ RR ನಗರದಲ್ಲಿ ಫುಲ್ ರಚಿತಾ ರಾಮ್ ಫ್ಲೆಕ್ಸ್ ಬ್ಯಾನರ್ ಹಾಕಿದ್ದು ರಚಿತಾ ರಾಮ್ ನಿವಾಸದ ಮುಂದೆ ಕಸದ ರಾಶಿ ಹಾಕಲಾಗಿದೆ. ನಟಿ ರಚಿತ ರಾಮ್ ವಿರುದ್ಧ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫ್ಲೆಕ್ಸ್ ಬ್ಯಾನರ್ ಅಳವಡಿಸಿದವರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದು ಸಚಿವ ಕೃಷ್ಣ ಬೈರೇಗೌಡಗೆ ಪರಿಸರ ಪ್ರೇಮಿಗಳು ಮನವಿ ಸಲ್ಲಸಿದಿದ್ದಾರೆ.
ಜನಸಾಮಾನ್ಯರಿಗೊಂದು, ಸೆಲೆಬ್ರಿಟಿಗಳಿಗೊಂದು ನ್ಯಾಯಾನಾ? ಸೆಲೆಬ್ರಿಟಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು, ಪರಿಸರವನ್ನು ಹಾಳು ಮಾಡಬೇಡಿ ಎಂದಿದ್ದಾರೆ.
ಸಾಮಾನ್ಯ ಜನರಿಗೆ ಒಂದು ನ್ಯಾಯ ಸೆಲೆಬ್ರಿಟಿಗಳಿಗೆ ಒಂದು ನ್ಯಾಯವಾ ಎಂದು ಪರಿಸರ ಪ್ರೇಮಿಗಳು ಪ್ರಶ್ನಿಸಿದ್ದಾರೆ. ಫ್ಲೆಕ್ಸ್ ಬ್ಯಾನರ್ಸ್ ಗಳಿಂದ ರಾರಾಜಿಸುತ್ತಿರುವ RR ನಗರ, ರಚಿತಾ ರಾಮ್ ನಗರವಾಗಿ ಬದಲಾಗಿದೆ ಎಂದು ಆರೋಪಿಸಿದ್ದಾರೆ.
ರಾಜ ರಾಜೇಶ್ವರಿ ನಗರ ರಚಿತಾ ರಾಮ್ ಹುಟ್ಟು ಹಬ್ಬ ಹಿನ್ನಲೆ RR ನಗರ ಫುಲ್ ಬ್ಯಾನರ್ಸ್ ಇದ್ದು ರಚಿತಾ ರಾಮ್ ನಿವಾಸದ ಮುಂದೆ ಮುಖ್ಯ ರಸ್ತೆ ಕಸದ ರಾಶಿ ಹಾಕಲಾಗಿದೆ. ಇದೇ ರೀತಿ ಸಾಮಾನ್ಯ ಜನರು ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ರೆ GBA ಸುಮ್ನಿರುತ್ತಾ? ಎಂದು ಪರಿಸರ ಪ್ರೇಮಿಗಳು ಪ್ರಶ್ನಿಸಿದ್ದಾರೆ.
ನಟಿಯ ವಿರುದ್ಧ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು ವಿದ್ಯುತ್ ಕಂಬದ ಮೇಲೆಯೂ ಫ್ಲೆಕ್ಸ್ ಪಾದಚಾರಿ ಮಾರ್ಗದಲ್ಲಿಯೂ ಫ್ಲೆಕ್ಸ್ ಫ್ಲೆಕ್ಸ್ ಬ್ಯಾನರ್ ಅಳವಡಿಕೆ ಮಾಡುವವರ ವಿರುದ್ಧ ಕ್ರಮಕ್ಕೆ ಸಚಿವ ಕೃಷ್ಣ ಬೈರೇಗೌಡ ಗೆ ಮನವಿ ಮಾಡಿದ್ದಾರೆ.
ರಾಜಕಾರಣಿಗಳಂತೂ ಕೇಳಲ್ಲ, ಈಗ ಸೆಲೆಬ್ರಿಟಿಗಳ ಸರದಿ. ಸೆಲೆಬ್ರಿಟಿಗಳು ಜವಾಬ್ದಾರಿಯುತವಾಗಿ ವರ್ತಿಸಿ. ನಿಮ್ಮ ಅಭಿಮಾನಿಗಳಲ್ಲಿ ಫ್ಲೆಕ್ಸ್ ಬ್ಯಾನರ್ ಹಾಕದೇ ಇರೋಕೆ ಮನವಿ ಮಾಡಿ. ಫ್ಲೆಕ್ಸ್ ಬ್ಯಾನರ್ ಅನಧಿಕೃತ ಅಳವಡಿಕೆ ಮಾಡಬಾರದು ಅಂತ ಹೇಳಿ. ಕೋರ್ಟ್ ಆರ್ಡರ್ ಇದೆ, ಪ್ರತೀ ಫ್ಲೆಕ್ಸ್ ಬ್ಯಾನರ್ ಗೆ GBA ವ್ಯಾಪ್ತಿಯಲ್ಲಿ ಫೈನ್ ಹಾಕಲು ಅವಕಾಶ ಇದೆ. ಪರಿಸರವನ್ನು ಹಾಳು ಮಾಡಬೇಡಿ ಅಂತ ಮನವಿ ಮಾಡಿದ್ದಾರೆ.














