Last Updated:
ನಾನು ಈ ಚಿತ್ರದಲ್ಲಿ ಡಿಸೆಂಟ್ ಬಾಂಡ್ ಆಗಿದ್ದೇನೆ. ಎಲ್ಲರನ್ನೂ ಬಾಂಡಿಂಗ್ ಮಾಡುವ ಬಾಂಡ್ ಆಗಿದ್ದೇನೆ. 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ಕುರಿತು ಶಿವಣ್ಣ ಹೀಗೆ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಅಪ್ಪಾಜಿಯನ್ನ ನೋಡಿ ಚೆನ್ನೈಯಲ್ಲಿ (Chennai) ಅನೇಕರು ಹೇಳ್ತಾ ಇದ್ದರು. ಅಲ್ಲಿ ನೋಡು ಬಾಂಡ್ ಹೋಗ್ತಾಯಿದ್ದಾರೆ. ನೋಡು ನೋಡು ಅಂತಿದ್ದರು. ಆ ರೀತಿನೇ ಕನ್ನಡದ ಬಾಂಡ್ ಸಿನಿಮಾ ಕ್ರೇಜ್ ಕ್ರಿಯೇಟ್ ಮಾಡ್ತಾ ಇತ್ತು. ಒಂದು ಸ್ವಿಮಿಂಗ್ ಪೂಲ್, ಸುತ್ತಲು ಹುಡುಗಿಯರು, ಬಾಂಡ್ (Bond) ಹೀಗೆಲ್ಲ ಇರ್ತಾರಾ ಅನಿಸುತ್ತದೆ. ಆದರೆ, 666 ಆಪರೇಷನ್ ಡ್ರೀಮ್ ಥಿಯೇಟರ್ (666 Operation Dream Theater) ಅಲ್ಲಿ ನಾನೂ ಬಾಂಡ್ ಆಗಿದ್ದೇನೆ. ಆದರೆ, ಆ ರೀತಿ ಬಾಂಡ್ ಅಲ್ಲ ಬಿಡಿ. ಹಾಗೇನಾದ್ರೂ ಆದ್ರೆ ಮುಗಿತು. ಮನೆಯಲ್ಲಿಯೇ ಬಾಂಡ್ ಆಗಿ ಬಿಡ್ತಾರೆ ಅಂತ ತಮಾಷೆಯಾಗಿಯೇ ಶಿವಣ್ಣ (Shivanna) ಹೇಳಿಕೊಂಡಿದ್ದಾರೆ. ಇನ್ನು ಸುಮಾರು ವಿಚಾರ ಹೇಳಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಬಾಂಡ್ ಸಿನಿಮಾಗಳ ಬಾಂಡ್ ನಿಜ ಜೀವನದಲ್ಲೂ ಇರ್ತಾರಾ? ಇರಬಹುದೇನೋ? ಆದರೆ, ಆ ಬಾಂಡ್ ಸಿನಿಮಾಗಳಲ್ಲಿ ಥ್ರಿಲ್ ಇತ್ತು. ಭಾರತದಲ್ಲಿ ಫಸ್ಟ್ ಬಾಂಡ್ ಬೇರೆ ಯಾರೋ ಅಲ್ಲ. ಅದು ನಮ್ಮ ತಂದೇನೆ ಆಗಿದ್ದರು.
ಆ ತರ ಬಾಂಡ್ ಇರ್ತಾರಾ
ಆದರೆ, ಇವರು ಅದನ್ನ ಯಾಕೆ ಬಿಟ್ಟರೋ ಗೊತ್ತಿಲ್ಲ. ನಮ್ಮ ಅಜ್ಜಿ ಕಂದ ಆ ತರ ಚಿತ್ರ ಯಾಕ್ ಮಾಡ್ತೀಯಾ? ಅದು ನಿನಗೆ ಸರಿ ಹೋಗಲ್ಲ ಅಂತಲೇ ಹೇಳ್ತಾ ಇದ್ದರು.
ಬಾಂಡ್ ಸಿನಿಮಾಗಳಲ್ಲಿ ಈಜುಕೊಳ ಇರುತ್ತದೆ. ಅದರಲ್ಲಿ ಐದಾರು ಹುಡುಗಿಯರು ಇರ್ತಾರೆ. ನಡುವೆ ಬಾಂಡ್ ಇರ್ತಾರೆ. ಆದರೆ, 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದಲ್ಲಿ ನಾನು ಆ ರೀತಿಯ ಬಾಂಡ್ ಅಲ್ಲ.
ಈ ರೀತಿ ಏನಾದರೂ ಮಾಡಿದರೆ ಆಯಿತು. ಮನೆಯಲ್ಲಿ ಬಾಂಡ್ ಆಗುತ್ತಾರೆ. ಆದರೆ, ಈ ಚಿತ್ರದಲ್ಲಿ ನನ್ನ ಪಾತ್ರ ಎಲ್ಲರನ್ನೂ ಬಾಂಡಿಂಗ್ (ಬೆಸೆಯುವ) ಬಾಂಡ್ ಆಗಿರುತ್ತೇನೆ ಅಂತಲೇ ಶಿವಣ್ಣ ಹೇಳಿಕೊಂಡಿದ್ದಾರೆ.
ಡಾಲಿ ಏನಂದ್ರು
ಡಾಲಿ ಧನಂಜಯ್ ಈ ಚಿತ್ರದಲ್ಲಿ ಏಜೆಂಟ್ ಶಂಕರ್ ರೋಲ್ ಮಾಡ್ತಿದ್ದಾರೆ. ಶಿವಣ್ಣ ಇಲ್ಲಿ ಬಾಂಡ್ ಪ್ರಕಾಶ್ ಅನ್ನುವ ರೋಲ್ ಮಾಡಿದ್ದಾರೆ.
ಇವರ ಈ ಚಿತ್ರದಲ್ಲಿ ನನ್ನ ಯಾಕೆ ಡೈರೆಕ್ಟರ್ ಹೇಮಂತ್ ರಾವ್ ಕರೀತಿಲ್ಲ ಅಂತಲೂ ಅನಿಸುತ್ತಿತ್ತು. ಆದರೆ, ಒಂದು ದಿನ ಮೆಸೇಜ್ ಬಂತು. ಮೀಟ್ ಆಗ್ಬೇಕು ಅಂತ ಹೇಮಂತ್ ಹೇಳಿದರು. ಹೀಗೆ ಈ ಚಿತ್ರ ಶುರು ಆಯಿತು ಅಂತಲೂ ಡಾಲಿ ಧನಂಜಯ್ ಹೇಳಿಕೊಂಡಿದ್ದಾರೆ.
ಪ್ರಿಯಾಂಕಾ ಮೋಹನ್ ಕನ್ನಡ ಚೆನ್ನಾಗಿ ಮಾತನಾಡುತ್ತಾರೆ. ಶಿವಣ್ಣ ಜೊತೆಗೆ ಫಸ್ಟ್ ಟೈಮ್ ಚಿತ್ರ ಮಾಡಿದ್ದಾರೆ. ಇದು ಇವರಿಗೆ ಖುಷಿ ತಂದಿದೆ. ಅದಿತಿ ಬಾಲನ್ ಜೊತೆಗೆ ಒಂದು ತೆಲುಗು, ಒಂದು ತಮಿಳು, ಒಂದು ಕನ್ನಡ ಹೀಗೆ ಮೂರು ಭಾಷೆಯಲ್ಲಿಯೇ ಇವರು ಕೆಲಸ ಮಾಡಿದ್ದಾರೆ.
ಇವರಿಗೆ ಚಿತ್ರದ ಚರಣ್ ರಾಜ್ ಸಂಗೀತ ಹಾಗೂ ಅದ್ವೈತ್ ಗುರುಮೂರ್ತಿ ಅವರ ಕ್ಯಾಮರಾವರ್ಕ್ ತುಂಬಾನೆ ಇಷ್ಟ ಆಗಿದೆ. ಅಷ್ಟೆ ಖುಷಿಕೊಟ್ಟಿದೆ. ಈ ಎಲ್ಲ ವಿಚಾರಗಳನ್ನ ಚಿತ್ರದ ಟೀಸರ್ ರಿಲೀಸ್ ಇವೆಂಟ್ ಅಲ್ಲಿಯೇ ಪ್ರಿಯಾಂಕಾ ಮೋಹನ್ ಹೇಳಿಕೊಂಡಿದ್ದಾರೆ.
ಅದಿತಿ ಬಾಲನ್ ಹೇಳಿದ್ದೇನು
ಶಿವರಾಜ್ ಕುಮಾರ್ ಅವರ ಜೊತೆಗೆ ನಾನು ಮೊದಲ ಕನ್ನಡ ಸಿನಿಮಾ ಮಾಡ್ತೀದ್ದಿನಿ ಅನ್ನೋದೇ ಹೆಮ್ಮಪಡುವ ವಿಷಯವಾಗಿದೆ. ಚರಣ್ ರಾಜ್, ಅದ್ವೈತ್ ಗುರುಮೂರ್ತ, ಹೇಮಂತ್ ಅವರ ಜೋಡಿನೇ ಗ್ರೇಟ್ ಅನಿಸುತ್ತದೆ.
ಡೈರೆಕ್ಟರ್ ಹೇಮಂತ್ ಅವರ ಅತಿ ದೊಡ್ಡ ಅಭಿಮಾನಿ ನಾನಾಗಿದೇನೆ. ಚೆನ್ನೈಯಿಂದ ಬೆಂಗಳೂರಿಗೆ ಬರುವಾಗ ಸಪ್ತಸಾಗರದಾಚೆ ಏಲ್ಲೋ ಚಿತ್ರದ ಹಾಡಗಳನ್ನು ಕೇಳ್ತಾನೆ ಬರ್ತೀನಿ. ಅಷ್ಟು ಇಷ್ಟ ನನಗೆ, ಹೇಮಂತ್ ಅವರ ಕೆಲಸವನ್ನ ನೋಡಿದ್ದೇನೆ. ಅದು ನನಗೆ ತುಂಬಾನೆ ಇಷ್ಟ ಅಂತಲೂ ಅದಿತಿ ಬಾಲನ್ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 03, 2026 10:44 AM IST













